ಟಗರು ಸಿನಿಮಾ ಖ್ಯಾತಿಯ ತ್ರಿವೇಣಿ ರಾವ್ ಮತ್ತು ತ್ರಿಪುರಾ ಮಾಜಿ ಸಿಎಂ, ಬಿಜೆಪಿ ಸಂಸದ ಬಿಪ್ಲಬ್ ದೇವ್ ಮದುವೆ 
ಸ್ಯಾಂಡಲ್‌ವುಡ್

ಗೌಪ್ಯವಾಗಿ ಹಸೆಮಣೆ ಏರಿದ ಕಾನ್ಸ್​ಟೇಬಲ್​​ ​ಸರೋಜಾ: ಮಾಜಿ ಸಿಎಂ ಬಿಪ್ಲಬ್ ದೇವ್ ಕೈಹಿಡಿದ ತ್ರಿವೇಣಿ ರಾವ್​! Tagaru Saroja Marries Biplab Deb

ಪ್ರಮುಖ ಮುಖ್ಯಾಂಶಗಳು

  • ಟಗರು ಸಿನಿಮಾ ಖ್ಯಾತಿಯ ತ್ರಿವೇಣಿ ರಾವ್ ಮತ್ತು ತ್ರಿಪುರಾ ಮಾಜಿ ಸಿಎಂ, ಬಿಜೆಪಿ ಸಂಸದ ಬಿಪ್ಲಬ್ ದೇವ್ ಮದುವೆ
  • 'ಟಗರು' ಚಿತ್ರದಲ್ಲಿ ಕಾನ್ಸ್ಟೇಬಲ್ ಸರೋಜಾ ಪಾತ್ರ ನಿರ್ವಹಿಸಿದ್ದ ಸರೋಜಾ
  • ಜೂನ್​ 19 ರಂದು ಗೌಪ್ಯ ಮದುವೆ ಜೂನ್ 24 ರಂದು ಅಗರ್ತಲಾದಲ್ಲಿ ಆರತಕ್ಷತೆ
ಸಿನಿಮಾ: ಡಾ. ಶಿವರಾಜ್​ಕುಮಾರ್​ ಹಾಗೂ ನಟರಾಕ್ಷಸ ಡಾಲಿ ಧನಂಜಯ ನಟಿಸಿದ್ದ ಸೂಪರ್​ ಹಿಟ್​ ಟಗರು ಸಿನಿಮಾದಲ್ಲಿ ಕಾನ್ಸ್​ಟೇಬಲ್​ ಸರೋಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತ್ರಿವೇಣಿ ರಾವ್​, ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್​​​ ದೇವ್​ (Tagaru Saroja Marries Biplab Deb) ಅವರನ್ನು ಮದುವೆಯಾಗಿದ್ದಾರೆ. 
ಜೂನ್​ 19 ರಂದು ಬಿಜೆಪಿ ಸಂಸದ ಬಿಪ್ಲನ್​​ ದೇವ್​ ಹಾಗೂ ತ್ರಿವೇಣಿ ರಾವ್​ ಖಾಸಗಿಯಾಗಿ ಮದುವೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಇದೇ ಜೂನ್​ 24 ರಂದು ಅಗರ್ತಲಾದ ಪಂಚತಾರಾ ಹೊಟೇಲ್​ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿಯ ಎರಡನೇ ಮದುವೆ!

ಈ ಜೋಡಿ ಮದುವೆ ವಿಷಯವನ್ನು ಆದಷ್ಟು ಗೌಪ್ಯವಾಗಿಟ್ಟಿದ್ದು, ಇಬ್ಬರೂ ಸಹ ತಾವು ಮದುವೆ ಆಗಿದ್ದೆವೆಂದು ಎಲ್ಲಿಯೀ ಅಧಿಕೃತವಾಗಿ ಹೇಳಿಕೊಂಡಿಲ್ಲ. ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್​​​ ದೇವ್​ಗೆ ಇದು ಎರಡನೇ ಮದುವೆಯಾಗಿದೆ. ಇವರು ಈ ಮೊದಲು ​ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಅಧಿಕಾರಿಯಾಗಿದ್ದ ನೀತಿ ದೇವ್​ ಎನ್ನುವವರನ್ನು ಮದುವೆಯಾಗಿದ್ದರು. 
ಇಪ್ಪತ್ತು ವರ್ಷ ಸಂಸಾರ ನಡೆಸಿದ್ದ ಇವರಿಗೆ ಇಬ್ಬರು ಮಕ್ಕಳಿದ್ದಾರೆ. 2025 ರಲ್ಲಿ ನೀತಿ ದೇವ್​ಗೆ ವಿಚ್ಛೇದನ ನೀಡಿದ್ದ ಸಂಸದ ಸುಮಾರು 11 ಕೋಟಿ ಜೀವನಾಂಶ ನೀಡಿದ್ದರೆಂದು ವರದಿಯಾಗಿತ್ತು. 

ಮೌನ ಮುರಿಯದ ತ್ರಿವೇಣಿ!

ಸೋಷಿಯಲ್​ ಮೀಡಿಯಾನಲ್ಲಿ ಅಷ್ಟೊಂದು ಸಕ್ರೀಯವಿರದ ನಟಿ ತ್ರಿವೇಣಿ ರಾವ್​ ತಮ್ಮ ಮದುವೆ ಬಗ್ಗೆ ಇಲ್ಲಿವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಇದು ಕೇವಲ ವದಂತಿಯೋ ಅಥವಾ ಗೌಪ್ಯ ಮದುವೆಯೋ ಎಂದು ಜಗಜ್ಜಾಹೀರಾಗಲಿದೆ. 

ಟಗರು ಸಿನಿಮಾದಲ್ಲಿ ಮಿಂಚಿದ್ದ ತ್ರಿವೇಣಿ

ದುನಿಯಾ ಸೂರಿ ನಿರ್ದೇಶನದ ಡಾ. ಶಿವರಾಜ್​ ಕುಮಾರ್​ ನಾಯಕ ನಟನಾಗಿ ಹಾಗೂ ಡಾಲಿ ಧನಂಜಯ್​ ವಿಲನ್​​ನಾಗಿ ಕಾಣಿಸಿಕೊಂಡಿದ್ದ ಟಗರು ಸಿನಿಮಾದಲ್ಲಿ ಸರೋಜಾ ಎಂಬ ಪೊಲೀಸ್​ ಪಾತ್ರದಲ್ಲಿ ತ್ರಿವೇಣಿ ರಾವ್​ ಕಾಣಿಸಿಕೊಂಡಿದ್ದರು. ಸಿನಿಮಾ ಬಿಡುಗಡೆಯಾಗಿದ್ದ ಸಮಯದಲ್ಲಿ ಈ ಪಾತ್ರ ಸಖತ್​ ಫೇಮಸ್​ ಆಗಿತ್ತು.
ಈ ಸಿನಿಮಾ ಮೂಲಕವೇ ಧನಂಜಯನಿಗೆ 'ಡಾಲಿ' ಎಂದ ಟ್ಯಾಗ್​ ದೊರೆತ್ತಿದ್ದು, 2018 ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಶಿವಣ್ಣ, ಧನಂಜಯನ ಜೊತೆಗೆ ಭಾವನಾ ಮೆನನ್​, ವಸಿಷ್ಟ ಸಿಂಹ, ಮಾನ್ವಿತಾ ಕಾಮತ್​, ದೇವರಾಜ್​ ಜೊತೆಗೆ ತ್ರಿವೇಣಿ ರಾವ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, (ಏಜನ್ಸೀಸ್​).