ಇದು ಕೇವಲ ಸಿನಿಮಾವಲ್ಲ; ಬದಲಿಗೆ ಸ್ಪಷ್ಟ ಸಂದೇಶ ಎಂದ ರಿಷಬ್ ಶೆಟ್ಟಿ
- ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
- ಮುದಲ ಮೂರು ದಿನದಲ್ಲಿ 350 ಕೋಟಿ ಗಳಿಕೆ
- ಇದು ಕೇವಲ ಸಿನಿಮಾವಲ್ಲ; ಬದಲಿಗೆ ಸ್ಪಷ್ಟ ಸಂದೇಶ ಎಂದ ರಿಷಬ್ ಶೆಟ್ಟಿ
- ಪ್ರತಿ ಸನ್ನಿವೇಶ ಯುದ್ಧದಲ್ಲಿ ಬಾರಿಸುವ ಮೃದಂಗದಂತಿದೆ: ಡಿವೈನ್ ಸ್ಟಾರ್
ಬಾಲಿವುಡ್: ಗುರುವಾರ (ಮಾಚ್ 19) ರಂದು ತೆರೆಕಂಡು ಭಾರತದಾದ್ಯಂತ ಸಂಚಲನ ಸೃಷ್ಟಿಸಿರುವ ಸಿನಿಮಾ ಎಂದರೆ ಅದು ಧುರಂಧರ್ 2: ದಿ ರಿವೆಂಜ್. ಬಿಡುಗಡೆಯಾ ಕೇವಲ ಮೂರೇ ದಿನದಲ್ಲಿ ಈ ಸಿನಿಮಾ ಸುಮಾರು 350 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡಿದ್ದು, ಇದರ ಓಟ ಹೀಗೆ ನಡೆದರೆ 2,000 ಕೋಟಿ ಕ್ಲಬ್ನ್ನು ಈ ಸಿನಿಮಾ ಸುಲಭವಾಗಿ ತಲುಪಲಿದೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾದ ದಿನದಿಂದ ಈ ಚಿತ್ರದ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ಈಗ ಈ ಸಿನಿಮಾದ ಎರಡನೇ ಭಾಗ ತೆರೆಕಂಡ ಮೇಲೆ ಈ ಸಿನಿಮಾವನ್ನು ಪ್ರೀತಿಸುವ ಹಾಗೂ ದ್ವೇಷಿಸುವವರ ಸಂಖ್ಯೆ ಸಮಾನವಾಗಿ ಬೆಳೆದಿದೆ ಎಂದರೆ ಸುಳ್ಳಲ್ಲ.
ಇದು ಕೇವಲ ಸಿನಿಮಾವಲ್ಲ; ಇದೊಂದು ಸಂದೇಶ!
ಈಗ ಈ ಸಿನಿಮಾ ಬಗ್ಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty on Dhurandhar 2) ತಮ್ಮ ಸಾಮಾಜಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೊದಲ ದೃಶ್ಯವೇ ನಿಮ್ಮನ್ನು ಹೇಗೆ ಸೆಳೆಯುತ್ತದೆ ಎಂದರೆ ಸಿನಿಮಾ ಮುಗಿದ ಮೇಲು ಈ ಸಿನಿಮಾದ ಪ್ರಭಾವ ನಿಮ್ಮ ಮೇಲಿರುತ್ತದೆ. ಈ ಸಿನಿಮಾದ ಪ್ರತಿ ಸನ್ನಿವೇಶವು ಯುದ್ಧದಲ್ಲಿ ಮೊಳಗುವ ಮೃದಂಗದಂತಿದೆ.
ಇದು ಕೇವಲ ಒಂದು ಸಿನಿಮಾವಲ್ಲ; ಇದೊಂದು ಸ್ಪಷ್ಟ ಸಂದೇಶವಾಗಿದೆ. ಈ ಸಿನಿಮಾದ ಕಥೆ ಹೇಳುವಿಕೆ ಪ್ರತಿ ಸನ್ನಿವೇಶದ ವಿವರಣೆ ನನಗೆ ತುಂಬಾ ಇಷ್ಟವಾಗಿದೆ. ಪ್ರತಿಯೊಬ್ಬ ಕಲಾವಿದರು ಸಹ ತಮ್ಮ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಎಂದು ಹೋಗಳಿರುವ ರಿಷಬ್ ಶೆಟ್ಟಿ ನಿರ್ದೇಶಕ ಆದಿತ್ಯ ಧರ್, ಆರ್. ಮಾಧವನ್, ರಣವೀರ್ ಸಿಂಗ್, ರಾಕೇಶ್ ಬೇಡಿ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ಸಂಜಯ್ ದತ್ ಅವರನ್ನು ಟ್ಯಾಗ್ ಮಾಡಿ ಬರೆದಿದ್ದಾರೆ.
ಕಾಂತಾರ ಮತ್ತು ರಣವೀರ್ ಸಂಬಂಧ!
ಬಾಲಿವುಡ್ ನಟ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾದಲ್ಲಿ ತೋರಿಸಲಾಗಿದ್ದ ದೈವದ ಪಾತ್ರವನ್ನು ಮಿಮಿಕ್ರಿ ಮಾಡಿ ವಿವಾದಕ್ಕೆ ಸಿಲುಕಿ ಕೊಂಡಿದ್ದರು.
ನವೆಂಬರ್ 30, 2025 ರಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಮಾಡಿದ್ದ ದೈವದ ಮಿಮಿಕ್ರಿ ವಿವಾದದ ಕೇಂದ್ರಬಿಂದುವಾಗಿತ್ತು. ಈ ಕುರಿತು ರಣವೀರ್ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು.
ಈ ಘಟನೆಗೆ ಅಂದು ಪ್ರತಿಕ್ರಿಯಿಸಿದ್ದ ರಿಷಬ್, ರಣವೀರ್ ಸಿಂಗ್ ವರ್ತನೆ ನನಗೆ ಬೇಸರ ತರಿಸಿದೆ. ದೈವ ನಮ್ಮ ನಂಬಿಕೆ ಮತ್ತು ಆಚರಣೆಯ ಭಾಗ, ಅದನ್ನು ಎಲ್ಲೆಂದರಲ್ಲಿ ಪ್ರದರ್ಶಿಸುವುದು ಮತ್ತು ಅಪಹಾಸ್ಯ ಮಾಡದ ಕುರಿತು ನಾನು ಎಲ್ಲರಲ್ಲಿ ಕೇಳಿಕೊಳ್ಳುತ್ತೇನೆ ಎಂದು ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು,(ಏಜನ್ಸೀಸ್).