ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ, ಉದಯಪುರದ ಅರಮನೆ
- ಹಸೆಮಣೆ ಏರಲಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ
- ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ವಿರಶ್ ವಿವಾಹ
- ಇಲ್ಲಿನ ಹೋಟೆಲ್ ಒಂದು ದಿನದ ಬಾಡಿಗೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ
ರಾಜಸ್ಥಾನ: ಕಳೆದ ಹಲವು ವರ್ಷಗಳಿಂದ ಸ್ಯಾಂಡಲ್‌ವುಡ್, ಟಾಲಿವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆಯಲ್ಲಿದ್ದ ಪ್ರಶ್ನೆಯೊಂದಕ್ಕೆ ಈಗ ಅಧಿಕೃತ ಉತ್ತರ ಸಿಕ್ಕಿದೆ. ಹೌದು, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ರೌಡಿ ಸ್ಟಾರ್ ಖ್ಯಾತಿಯ ವಿಜಯ್ ದೇವರಕೊಂಡ (Rashmika Mandanna Vijay Deverakonda Wedding) ಕೊನೆಗೂ ಹಸೆಮಣೆ ಏರುತ್ತಿದ್ದಾರೆ.
ಇದೇ ಫೆಬ್ರವರಿ 26, 2026 ರಂದು ಈ ಜೋಡಿ ವಿವಾಹವಾಗಲಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಈ ಜೋಡಿಯ ಮದುವೆ ರಾಜಸ್ಥಾನದ ಉದಯ್‌ಪುರದ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಐಟಿಸಿ ಮೆಮೆಂಟೋಸ್ನಲ್ಲಿ ನಡೆಯಲಿದೆ.
ಉದಯ್‌ಪುರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಈ ಹೋಟೆಲ್, ನಗರದ ಗದ್ದಲದಿಂದ ದೂರ ಅರಾವಳಿ ಬೆಟ್ಟಗಳ ಮಡಿಲಲ್ಲಿ ಪ್ರಶಾಂತವಾಗಿ ನೆಲೆಗೊಂಡಿದೆ. ಹಸಿರು ಬೆಟ್ಟಗಳು, ನೀಲಿ ಆಕಾಶ ಮತ್ತು ವಿಶಾಲವಾದ ಸರೋವರಗಳ ನಡುವೆ ಇರುವ ಈ ತಾಣವು ಮದುವೆಯ ಆಚರಣೆಗೆ ಒಂದು ಅದ್ಭುತ ಲೋಕವನ್ನೇ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.
ಈ ಹೋಟೆಲ್‌ನಲ್ಲಿ ಇರಲು ಎಷ್ಟು ಹಣ ನೀಡಬೇಕು?
ಈ ಸ್ಟಾರ್ ಜೋಡಿ ಮದುವೆಯಾಗುತ್ತಿರುಬ ಹೋಟೆಲ್ನ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ ಈ ಹೋಟೆಲ್ ಈಗಾಗಲೇ ಫುಲ್ ಬುಕ್ ಆಗಿದೆ. ದೊರೆತಿರುವ ಮಾಹಿತಿಗಳ ಪ್ರಕಾರ ಮಾರ್ಚ್ ಮತ್ತು ಏಪ್ರಿಲ್ ತಿಂಗಳವರೆಗೆ ಇಲ್ಲಿ ಮುಂಗಡ ಬುಕ್ಕಿಂಗ್ ಆಗಿದೆ ಎಂದು ಹೇಳಲಾಗುತ್ತಿದೆ.
ಈ ಹೋಟೆಲ್‌ನಲ್ಲಿ ವಿವಿಧ ಪ್ರಕಾರದ ರೂಮ್ಗಳು ದೊರೆಯಲಿದ್ದು, ಒಂದು ದಿನದ ರೂಮಿನ ದರ ಪಟ್ಟಿ ಹೀಗಿದೆ. ವ್ಯಾಲಿ ವ್ಯೂ ವಿಲ್ಲಾ: ರೂ 28,399 ರಿಂದ 28,666, ಲೇಕ್ ವ್ಯೂ ವಿಲ್ಲಾ: ರೂ 30,799 ರಿಂದ 31,088, ಪ್ರೀಮಿಯಂ ವಿಲ್ಲಾ: ರೂ 34,799 ರಿಂದ 35,126, ಅರವಳ್ಳಿ ಸೂಟ್: ರೂ 57,199 ರಿಂದ 71,499, ಮೆಮೆಂಟೋಸ್ ಸೂಟ್: ರೂ 73,199 ರಿಂದ 91,499. ಇನ್ನೂ ಅಧ್ಯಕ್ಷೀಯ ಸೂಟ್‌ಗಳ ಬೆಲೆಯನ್ನು ಹೋಟೆಲ್ ಇನ್ನುವರೆಗೆ ಬಹಿರಂಗ ಪಡಿಸಿಲ್ಲ. ಅದರ ಬೆಲೆಯು ದಿನಕ್ಕೆ ಲಕ್ಷಾಂತರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಹೋಟೆಲ್ ಒಳಗೆ ಏನೆಲ್ಲಾ ವಿಶೇಷತೆಗಳಿವೆ?
ಒಟ್ಟು 117 ಸುಂದರ ವಿಲ್ಲಾಗಳನ್ನು ಹೊಂದಿರುವ ಈ ಎಸ್ಟೇಟ್ ಪ್ರಶಾಂತ ಸರೋವರ, ಅರಾವಳಿ ಬೆಟ್ಟ ಮತ್ತು ವಿಶಾಲವಾದ ಹುಲ್ಲುಹಾಸುಗಳಿಂದ ಕೂಡಿದ ಭೂಪ್ರದೇಶವನ್ನು ಹೊಂದಿದೆ. ಅತಿಥಿಗಳಿಗಾಗಿ ರಾಯಲ್ ಸ್ಪಾ, ಆಧುನಿಕ ಫಿಟ್‌ನೆಸ್ ಸೆಂಟರ್, ರಾಕ್ ಬಾರ್ ಮತ್ತು ಸುಂದರವಾದ ಸ್ವಿಮ್ಮಿಂಗ್ ಪೂಲ್‌ಗಳ ವ್ಯವಸ್ಥೆಯಿದೆ.
ಊಟದ ವಿಚಾರಕ್ಕೆ ಬಂದರೆ, ಇಲ್ಲಿ ಉದಯ್ ಪೆವಿಲಿಯನ್, ಕಬಾಬ್ ಮತ್ತು ಕುರ್ರಿಯಂತಹ ವಿಶ್ವದರ್ಜೆಯ ರೆಸ್ಟೋರೆಂಟ್‌ಗಳಿವೆ. ಸಸ್ಯಾಹಾರಿಗಳಿಗಾಗಿ ರಾಯಲ್ ವೇಗಾ ಎಂಬ ಐಷಾರಾಮಿ ರೆಸ್ಟೋರೆಂಟ್ ಕೂಡ ಲಭ್ಯವಿದ್ದು, ವಿಶ್ವದ ನಾನಾ ಭಾಗಗಳ ರುಚಿಕಟ್ಟಾದ ಆಹಾರ ಇಲ್ಲಿ ದೊರೆಯಲಿದೆ.
ಒಟ್ಟಿನಲ್ಲಿ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹವು ಭಾರತದ ಅತ್ಯಂತ ಸ್ಮರಣೀಯ ಡೆಸ್ಟಿನೇಶನ್ ವೆಡ್ಡಿಂಗ್ಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ. ಇಗ ಈ ಸ್ಟಾರ್ ಜೋಡಿಯ ಮದುವೆಗೆ ಇವರಿಬ್ಬರ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅತಿಥಿಗಳ ಪಟ್ಟಿ ಕೂಡ ಹೊರಬೀಳಲಿದೆ,(ಏಜನ್ಸೀಸ್).