ಟ್ರೋಲ್‌ಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರೋಕ್ಷ ಕೌಂಟರ್ ಕೊಟ್ಟ ನಟಿ ಕಿಯಾರಾ ಅಡ್ವಾನಿ!
- 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡು ಬಿಡುಗಡೆ
- ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾನಿ ಹಾಟ್ ಕೆಮೆಸ್ಟ್ರಿ ನೋಡಿ ಮಡಿವಂತರು ಗರಂ
- ಟ್ರೋಲ್‌ಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರೋಕ್ಷ ಕೌಂಟರ್ ಕೊಟ್ಟ ನಟಿ ಕಿಯಾರಾ ಅಡ್ವಾನಿ!
- ಆಗಸ್ಟ್ 26 ಕ್ಕೆ ಟಾಕ್ಸಿಕ್ ರಿಲೀಸ್
ಮುಂಬೈ: ಸದ್ಯ ಸ್ಯಾಂಡಲ್‌ವುಡ್ ಸೇರಿದಂತೆ ಈಡೀ ಭಾರತದ ಸಿನಿ ಪ್ರೇಕ್ಷಕರು ತುದಿಗಾಲಿನಿಂದ ಬಿಡುಗಡೆಗೆ ಕಾಯುತ್ತಿರುವ ಸಿನಿಮಾ ಎಂದರೆ ಅದು ಟಾಕ್ಸಿಕ್: ಅ ಫೇರಿ ಟೇಲ್ ಫಾರ್ ಗ್ರೋನ್ಅಪ್ಸ್. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ (ಬುಧವಾರ, ಜು.8) ಈ ಸಿನಿಮಾದ ತಬಾಹಿ ಎಂಬ ವಿಡಿಯೋ ಸಾಂಗ್ ಬಿಡುಗಡೆಗೊಂಡಿದ್ದು, ಒಂದಿಷ್ಟು ವಿವಾದದೊಂದಿಗೆ ಸಖತ್ ವೈರಲ್ ಆಗಿತ್ತು.
ಈ ತಬಾಹಿ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾನಿ ಸಖತ್ ಹಾಟ್ ಅಂಡ್ ಸ್ಪೈಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಇದು ಕೆಲ ಮಡಿವಂತ ಸಿನಿ ಪ್ರೇಕ್ಷಕರ ಇರುಸು-ಮುರಸಿಗೆ ಕಾರಣವಾಗಿತ್ತು.
ಆದರೆ ಇಂದು (ಗುರುವಾರ, ಜು.9) ಕಿರಾಯಾ ಅಡ್ವಾನಿ (Kiara Advani on Tabahi Song) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಈ ತಬಾಹಿ ವಿವಾದಕ್ಕೆ ನೀಡಿರುವ ಉತ್ತರವೇ? ಎಂನ ಟಾಕ್ ಬಿಟೌನ್ನಲ್ಲಿ ಜೋರಾಗಿದೆ.
ಅವಳು ಹೋದಲೆಲ್ಲಾ ಅವ್ಯವಸ್ಥೆ ಆಗುತ್ತದೆ!
ಗುರುವಾರ (ಜು.9) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಟಾಕ್ಸಿಕ್ ಸಿನಿಮಾದಲ್ಲಿರುವ ಕೆಲ ಫೋಟೊಗಳನ್ನು ಹಂಚಿಕೊಂಡಿರುವ ಕಿರಾಯಾ ಅಡ್ವಾನಿ, ಅವಳು ಹೋದಲೆಲ್ಲಾ ಸ್ವಲ್ಪ ಅವ್ಯವಸ್ಥೆ ಉಂಟಾಗುತ್ತದೆ (Leaving a little chaos wherever she goes) ಎಂದು ಬರೆದು, ಅದರ ಕೆಳಗೆ ಸಿನಿಮಾದಲ್ಲಿ ತಮ್ಮ ಪಾತ್ರನಾಮವಾದ ನಾಡಿಯಾ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ತಬಾಹಿ ಹಾಡು ಬಿಡುಗಡೆಯಾದ ನಂತರ, ಕಿಯಾರಾ ಅಡ್ವಾನಿ ಅವರನ್ನು ಟ್ರೋಲ್ ಮಾಡಿದವರಿಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. ಈ ಹಾಡಿನಲ್ಲಿ ನಟ ಯಶ್ ಹಾಗೂ ಕಿಯಾರಾ ಅಡ್ವಾನಿ ಅವರ ಕೆಮೆಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ಯಶ್ ಹಾಗೂ ಕಿಯಾರಾ ಅವರ ಅಭಿಮಾನಿಗಳು ಈ ಹಾಡನ್ನು ಸಖತ್ ಎಂಜಾಯ್ ಮಾಡಿದ್ದಾರೆ.
ಆಗಸ್ಟ್ 26 ಕ್ಕೆ ತೆರೆ ಮೇಲೆ ಟಾಕ್ಸಿಕ್!
ಈ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ರೆಡಿಯಾಗಿ ನಾಲ್ಕಾರು ತಿಂಗಳುಗಳು ಕಳೆದರೂ ಬಿಡುಗಡೆಗೆ ಸರಿಯಾದ ಮುಹೂರ್ತ ಕೂಡಿಬಂದಿರಲಿಲ್ಲ. ಈಗ ಈ ಸಿನಿಮಾವನ್ನು ಆಗಸ್ಟ್ 26 ರಂದು ತೆರೆ ಮೇಲೆ ಪ್ರೇಕ್ಷಕರು ಖಂಡಿತವಾಗಿ ನೋಡಬಹುದೆಂದು ಸಿನಿ ತಂಡ ಖಾತರಿ ಪಡಿಸಿದೆ.
ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಾಯ ಹಾಗೂ ಟಿಕೆಟ್ ಎಂಬ ಪಾತ್ರದಲ್ಲಿ ರಾಕಿ ಭಾಯ್ ಮಿಂಚಲಿದ್ದಾರೆ. ಇವರ ಜೊತೆಗೆ ಸೌತ್ ಸೂಪರ್ ಸ್ಟಾರ್ ನಯನತಾರಾ, ಕನ್ನಡತಿ ರುಕ್ಮಿಣಿ ವಸಂತ್ ಹಾಗೂ ಬಾಲಿವುಡ್ ಬೆಡಗಿಯರಾದ ಕಿಯಾರಾ ಅಡ್ವಾನಿ, ತಾರಾ ಸುತಾರಿಯಾ ಹಾಗೂ ಹುಮಾ ಖುರೇಶಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಗೀತು ಮೋಹನ್ ದಾಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ, (ಏಜನ್ಸೀಸ್).