Shetty Gang Split:`ನಾನು ಕೆಲವು ದಿನದಿಂದ ಚಾನೆಲ್ಸ್, ಸೋಶಿಯಲ್ ಮೀಡಿಯಾಗಳನ್ನು ಗಮನಿಸುತ್ತಿದ್ದೇನೆ. ಶೆಟ್ಟಿ ಗ್ಯಾಂಗ್ನಲ್ಲಿ ಬಿರುಕು ಅಂತ. ರಿಷಬ್ ಇವ್ರುನ್ನ ಅನ್ಫಾಲೋ ಮಾಡಿದ್ರು, ಅವ್ರು ಮಾಡಿದ್ರು ಅಂತ ದಿನೇ ದಿನೇ ಸುದ್ದಿ ಬರ್ತಿದೆ. ಆದರೆ, ಹಾಗೇನು ಇಲ್ಲ ಇದೆಲ್ಲ ವದಂತಿಗಳು. ಊಹಾಪೋಹವಷ್ಟೇ' ಹೀಗೆಂದು ಸ್ಪಷ್ಟನೆ ಕೊಟ್ಟಿದ್ದು ನಟ ಪ್ರಮೋದ್ ಶೆಟ್ಟಿ.
ಸ್ಯಾಂಡಲ್ವುಡ್ನಲ್ಲಿ ಅತ್ಯಂತ ಪ್ರಭಾವಶಾಲಿ ಚಿತ್ರತಂಡ ಎಂದು ಗುರುತಿಸಿಕೊಂಡಿರುವ 'ಶೆಟ್ಟಿ ಗ್ಯಾಂಗ್'ನಲ್ಲಿ ಎಲ್ಲವೂ ಸರಿ ಇಲ್ಲ. ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ರಕ್ಷಿತ್ ಶೆಟ್ಟಿ ದೂರಾಗಿದ್ದಾರೆ. Shetty Gangನಲ್ಲಿ ಬಿರುಕು ಮೂಡಿದೆ ಎನ್ನುವ ಗುಸುಗುಸು ಜೋರಾಗಿತ್ತು ಈ ಬಗ್ಗೆ ಪ್ರಮೋದ್ ಅವರೇ ಸ್ಪಷ್ಟನೆಯೊಂದನ್ನು ಖಾಸಗಿ ಮಾಧ್ಯಮಗಳಿಗೆ ಕೊಟ್ಟಿದ್ದಾರೆ.
ಈ ಬಿರುಕು ಎನ್ನುವ ವದಂತಿಗಳಿಗೆ ಪುಷ್ಟಿ ನೀಡುವಂತೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಯವರು ಸೋಶಿಯಲ್ ಮೀಡಿಯಾದಲ್ಲಿ ರಾಜ್ ಬಿ ಶೆಟ್ಟಿಯನ್ನು ಅನ್ಫಾಲೋ ಮಾಡಿದ್ದರು. ಜೊತೆಗೆ ಒಟ್ಟಾಗಿ ರಕ್ಷಿತ್, ರಿಷಬ್, ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಚರ್ಚೆಗೆ ಕಾರಣವಾಗಿತ್ತು.
ಪ್ರಮೋದ್ ಶೆಟ್ಟಿ ಹೇಳಿದ್ದಿಷ್ಟು..!
"ಶೆಟ್ಟಿ ಗ್ಯಾಂಗ್ನಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗುತ್ತಿರೋದನ್ನ ನಾನು ನೋಡಿದೆ. ನನ್ನನ್ನು ಅನ್ ಫಾಲೋ ಮಾಡಿದ್ದಾರೆ ಅಂತೆಲ್ಲ ವೈರಲ್ ಆಗಿದ್ದನ್ನು ನೋಡಿದೆ. ಆ ಸುದ್ದಿಯಾಗುವ ಒಂದು ದಿನದ ಮುಂಚೆ ನಾನು ರಿಷಬ್ ಶೆಟ್ಟಿ ಜೊತೆಗಿದ್ದೆ. ಇಲ್ಲೇ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆಗಲೂ ನಾವೆಲ್ಲ ಸರಿಯಾಗಿಯೇ ಇದ್ದೆವು" ಎಂದರು.
ಮುಂದುವರೆದು,"ಎಲ್ಲರೂ ಅವರದ್ದೇ ಆದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ನಾವು ಒಬ್ಬರಿಗೊಬ್ಬರು ಕರೆ ಮಾಡಿದಾಗ ಅವರು ಕೊಡುವ ರೆಸ್ಪಾನ್ಸ್ ಮ್ಯಾಟರ್ ಆಗತ್ತೆ. ಇಲ್ಲಿಯವೆಗೂ ನಮ್ಮಲ್ಲಿ ಮನಸ್ಥಾಪಗಳೇ ಇಲ್ಲ. ನನಗೂ ಯಾರ ಮೇಲೂ ಬೇಸರವಿಲ್ಲ. ಕೆಲಸದ ಒತ್ತಡ ಮತ್ತು ವೈಯಕ್ತಿಕ ನಿರ್ಧಾರಗಳಿಂದ ಇಂತಹ ಬದಲಾವಣೆ ಆಗೋದು ಸಹಜ" ಎಂದು ಪ್ರಮೋದ್ ಶೆಟ್ಟಿ ಸ್ಪಷ್ಟನೆ ಕೊಟ್ಟರು, (ಏಜೆನ್ಸೀಸ್).