ಟಾಕ್ಸಿಕ್ ಸಿನಿಮಾದ ತಬಾಹಿ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾನಿ 
ಸ್ಯಾಂಡಲ್‌ವುಡ್

ಇದು ಹಾಡೋ ಅಥವಾ ಕಾಂಡೋಮ್ ಆ್ಯಡೋ? ಯಶ್-ಕಿಯಾರಾ 'ತಬಾಹಿ' ಸಾಂಗ್‌ಗೆ ನೆಟ್ಟಿಗರು ಗರಂ! Yash and Kiara in Tabahi

ವಿನಾಯಕ ನಾಯಕ

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ
  • ಸಿನಿಮಾದ 'ತಬಾಹಿ' ಹಾಡಿಗೆ ನೆಟ್ಟಿಗರಿಂದ ತೀವ್ರ ವಿರೋಧ
  • ಇದು ಹಾಡೋ ಅಥವಾ ಕಾಂಡೋಮ್ ಆ್ಯಡೋ ಎಂದು ಪ್ರೇಕ್ಷಕರು
ಸಿನಿಮಾ: ರಾಕಿಂಗ್​ ಸ್ಟಾರ್​ ಯಶ್​​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬಹು ನೀರಿಕ್ಷಿತ ಸಿನಿಮಾ ಎಂದರೆ ಅದು ಟಾಕ್ಸಿಕ್​: ಎ ಫೇರಿ ಟೇಲ್​ ಫಾರ್​ ಗ್ರೋನ್​ಅಪ್ಸ್​. ಬುಧವಾರ (ಜು.8) ಈ ಸಿನಿಮಾದ ತಬಾಹಿ (Yash and Kiara in Tabahi) ಎಂಬ ವಿಡಿಯೋ ಹಾಡೊಂದು ಬಿಡುಗಡೆಗೊಂಡಿದ್ದು ಇದಕ್ಕೆ ವ್ಯಾಪಕ ವಿರೋಧ ಎದುರಾಗುತ್ತಿದೆ.

ಇದೊಂದು ಹಾಡೋ? ಕಾಂಡೋಮ್​ ಆ್ಯಡೋ?

ಈ ತಬಾಹಿ ಎಂಬ ಹಾಡಿನಲ್ಲಿ ರಾಕಿಂಗ್​ ಸ್ಟಾರ್​ ಯಾಶ್​ ಹಾಗೂ ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾನಿ ಸಖತ್​ ಹಾಟ್​ ಅಂಡ್​ ಸ್ಫೈಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಇಬ್ಬರ ಕೆಮೆಸ್ಟ್ರಿ ಬೋಲ್ಡ್​ ಆಗಿ ಮೂಡಿ ಬಂದಿದೆ.
ಇತ್ತ ಹಾಡು ತೆರೆಕಾಣುತ್ತಲೇ, ಒಂದು ವರ್ಗದ ಪ್ರೇಕ್ಷಕರು ಇದೊಂದು ಹಾಡಾ? ಇಡೀ ಹಾಡಿನಲ್ಲಿ ಯಶ್​, ಕಿಯಾರಾಳನ್ನು ತಬ್ಬಿದ್ದು, ಚುಂಬಿಸಿದ್ದು ಬಿಟ್ಟು ನೇರೇನಿದೆ? ಇದು ಹಾಡು ಎನ್ನುವುದಕ್ಕಿಂತ ಕಾಂಡೋಮ್​ ಆ್ಯಡ್​ ಎಂದರೆ ಚೆನ್ನಾಗಿರುತ್ತದೆ ಎಂದು ಅಕ್ರೋಶ ಹೊರಹಾಕಿದ್ದಾರೆ.
ಈ ಸಿನಿಮಾವನ್ನು ಖಂಡಿತವಾಗಿ ಮನೆಯವರ ಜೊತೆ ಕುಳಿತು ನೋಡಲು ಸಾಧ್ಯವಿಲ್ಲ. ಹಾಲಿವುಡ್​ ರೇಂಜ್​ ಎಂದು ಹೇಳಿಕೊಳ್ಳುತ್ತಾ ಸಿನಿಮಾ ತಮ್ಮ ತಾಯ್ನಾಡಿನ ಪ್ರೇಕ್ಷಕರನ್ನೇ ಕಳೆದು ಕೊಳ್ಳುತ್ತಿದೆ ಎನ್ನವುದು ಕೆಲವರ ಅಭಿಪ್ರಾಯವಾಗಿದೆ.

ಆಗಸ್ಟ್​​ 26 ಕ್ಕೆ ತೆರೆ ಮೇಲೆ ಟಾಕ್ಸಿಕ್​!

ಈ ಸಿನಿಮಾ ಬಿಡುಗಡೆಗೆ ತಯಾರಾಗಿ ಮೂರು ತಿಂಗಳು ಕಳೆದರೂ ಬಿಡುಗಡೆಗೆ ದಿನಾಂಕ ನಿಗಧಿಯಾಗಿರಲಿಲ್ಲ. ಆದರೆ ಈಗ ಆಗಸ್ಟ್​ 26 ರಂದು ಸಿನಿಮಾ ಬಿಡುಗಡೆ ಆಗಿಲಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಯನತಾರಾ, ರುಕ್ಮಿಣಿ ವಸಂತ್​, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ಕಿಯಾರಾ ಅಡ್ವಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಗೀತು ಮೋಹನ್​ದಾಸ್​ ನಿರ್ದೇಶಿಸಿದ್ದು, ಕೆವಿಎನ್​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ, (ಏಜನ್ಸೀಸ್​).