ನಾನು ರಾಹುಲ್ ಗಾಂಧಿ ಭಂಟ ಹನುಮಂತ ಎಂದ ಕಾಂಗ್ರೆಸ್​ ನಾಯಕ 
ರಾಜಕೀಯ

ನಾನು ರಾಹುಲ್ ಗಾಂಧಿ ಭಂಟ ಹನುಮಂತ, ಅವರು ಹೇಳಿದ್ರೆ ಲಂಕಾ ದಹನ ಮಾಡ್ತೀನಿ!...ಯುಪಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕಳೆದುಕೊಂಡ ಬಳಿಕ ರೈ ಮಾತು! | Ajay Rai

ಲಖನೌ: ಉತ್ತರ ಪ್ರದೇಶ ಕಾಂಗ್ರೆಸ್ ಘಟಕ ಅಧ್ಯಕ್ಷ ಸ್ಥಾನದಿಂದ ಅಜಯ್ ರೈ (Ajay Rai) ಅವರನ್ನು ತೆಗೆದುಹಾಕಿ ಆರಾಧನಾ ಮಿಶ್ರಾ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೈಕಮಾಂಡ್‌ನ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಕಟಪೂರ್ವ ಅಧ್ಯಕ್ಷ ಅಜಯ್ ರೈ, ತಮ್ಮನ್ನು ತಾವು ರಾಹುಲ್ ಗಾಂಧಿಯವರ ಹನುಮಂತ ಎಂದು ಕರೆದುಕೊಂಡಿದ್ದಾರೆ.

ಲಖನೌ: ಉತ್ತರ ಪ್ರದೇಶ ಕಾಂಗ್ರೆಸ್ ಘಟಕ ಅಧ್ಯಕ್ಷ ಸ್ಥಾನದಿಂದ ಅಜಯ್ ರೈ (Ajay Rai) ಅವರನ್ನು ತೆಗೆದುಹಾಕಿ ಆರಾಧನಾ ಮಿಶ್ರಾ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹೈಕಮಾಂಡ್‌ನ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಕಟಪೂರ್ವ ಅಧ್ಯಕ್ಷ ಅಜಯ್ ರೈ, ತಮ್ಮನ್ನು ತಾವು ರಾಹುಲ್ ಗಾಂಧಿಯವರ ಹನುಮಂತ ಎಂದು ಕರೆದುಕೊಂಡಿದ್ದಾರೆ.

ಎಎನ್​ಐ ಜೊತೆ ಮಾತನಾಡಿದ ರೈ, ರಾಹುಲ್ ಗಾಂಧಿಯವರು ಎಲ್ಲಿ ಹೇಳುತ್ತಾರೋ ಅಲ್ಲಿ ಲಂಕಾ ದಹನ ಮಾಡುತ್ತೇನೆ, ನಾನು ಅವರ ಹನುಮಂತ ಇದ್ದ ಹಾಗೆ, ನನ್ನ ಬಳಿ ಯಾರೂ ರಾಜೀನಾಮೆ ಕೇಳಿಲ್ಲ ಅಥವಾ ಪಕ್ಷವು ಒತ್ತಾಯಿಸಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಕಾಲು ಗಾಯದ ನಾಟಕವಾಡಿ ಅಧಿಕಾರಕ್ಕೇರಿದ್ದರಾ ಮಮತಾ ಬ್ಯಾನರ್ಜಿ..? ಇದರ ಬಗ್ಗೆ ತನಿಖೆ ನಡೆಸಿಯೇ ಸಿದ್ಧ ಅಂದ್ರು ಸಿಎಂ ಸುವೇಂದು! | Mamata Banerjee Leg Injury

ನಾಯಕತ್ವ ಬದಲಾವಣೆ ಪಕ್ಷದ ನಿರ್ದೇಶನವಾಗಿದ್ದು, ನಾನು ಅದನ್ನು ಪಾಲಿಸುತ್ತೇನೆ ಎನ್ನುತ್ತಾ ಭಾವುಕರಾದ ಅಜಯ್ ರಾಯ್, ರಾಹುಲ್ ಗಾಂಧಿ ಅವರೊಂದಿಗಿನ ತಮ್ಮ ಫೋಟೋ ಮೇಲಿನ ಧೂಳನ್ನು ಸ್ವಚ್ಛಗೊಳಿಸಿದರು. ಕೊನೆಯುಸಿರು ಇರೋವರೆಗೂ ಕಾಂಗ್ರೆಸ್‌ನಲ್ಲೇ ಇರುವುದಾಗಿ ಸ್ಪಷ್ಟಪಡಿಸಿದರು ಮುಂದುವರೆದು ಮಾತನಾಡಿದ ರೈ, ನನಗೆ ರಾಹುಲ್​ ಗಾಂಧಿ ಅವರೊಂದಿಗೆ ಸಹೋದರನ ಸಂಬಂಧವಿದ್ದು, ಏನೇ ವಿಷಯವಿದ್ದರು ಮುಕ್ತವಾಗಿ ಮಾತನಾಡುತ್ತೇನೆ ಎನ್ನುತ್ತಾ, ಕೊನೆಯುಸಿರು ಇರುವವರೆಗೆ ಪಕ್ಷವನ್ನು ಮುನ್ನಡೆಸಲು ಸಂಪೂರ್ಣ ನಿಷ್ಠೆ, ಪ್ರಾಮಾಣಿಕತೆ ಮತ್ತು ಶಕ್ತಿಯಿಂದ ಕೆಲಸ ಮಾಡುತ್ತಿರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಆರಾಧನಾ ಮಿಶ್ರಾ ಆಯ್ಕೆಯ ಬಗ್ಗೆ ಹೇಳಿದ್ದೇನು..?

ಆರಾಧನಾ ಮಿಶ್ರಾ ಮೋನಾ ಅವರನ್ನು ಪ್ರದೇಶ ಅಧ್ಯಕ್ಷರನ್ನಾಗಿ ನೇಮಿಸಿದ ಹಿಂದಿನ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ರೈ, ಮಿಶ್ರಾ ಸ್ವತಃ ಮೂರು ಬಾರಿಯ ಶಾಸಕಿಯಾಗಿದ್ದು, ಅವರ ಕುಟುಂಬಕ್ಕೆ ರಾಜಕೀಯದಲ್ಲಿ ದೊಡ್ಡ ಗೌರವವಿದೆ, ಅವರು ರಾಜ್ಯದಲ್ಲಿ ಓಡಾಡುತ್ತಾರೆ, ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗೆ ಇದೆ. ಈ ಬಾರಿ ಕಾಂಗ್ರೆಸ್ ಪರವಾಗಿ ಹಲವು ಸಮೀಕರಣಗಳಿದ್ದು, ಎಲ್ಲರೂ ಒಟ್ಟಾಗಿ ಬರುತ್ತಿದ್ದಾರೆ ಭರವಸೆ ವ್ಯಕ್ತಪಡಿಸಿದರು.

ಇದು ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರವಾಗಿದ್ದು, ಅವರು ನೀಡುವ ಯಾವುದೇ ನಿರ್ದೇಶನವನ್ನು ನಾನು ಪಾಲಿಸುತ್ತೇನೆ. ಮುಂದೆಯೂ ಸಹ ಸಂಪೂರ್ಣ ಶ್ರಮ ಮತ್ತು ಪ್ರಾಮಾಣಿಕತೆಯಿಂದ ನನ್ನ ಧರ್ಮ, ಕರ್ತವ್ಯ ಮತ್ತು ಜವಾಬ್ದಾರಿಯನ್ನು ಪೂರೈಸುತ್ತಲೇ ಇರುತ್ತೇನೆ ಎಂದರು.

ಯಾರು ಈ ಆರಾಧನಾ ಮಿಶ್ರಾ..?

ಆರಾಧನಾ ಮಿಶ್ರಾ ಅವರು ಕಾಂಗ್ರೆಸ್ ಹಿರಿಯ ನಾಯಕ ಪ್ರಮೋದ್ ತಿವಾರಿ ಅವರ ಮಗಳು. ಇವರ ಮೂಲಕ ಸಮಾಜವಾದಿ ಪಕ್ಷದ ಜೊತೆ ಒಡನಾಟ ಇಟ್ಟುಕೊಳ್ಳುವುದು ಸುಲಭವಾಗುತ್ತದೆ. ಇವರಿಗೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ಉತ್ತಮ ಸಂಬಂಧವಿರುವುದರಿಂದ ಹೈಕಮಾಂಡ್‌ಗೆ ಇವರ ಮೇಲೆ ಹೆಚ್ಚು ನಂಬಿಕೆ ಇದೆ. ಇವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರಿಂದ ಆ ಮತದಾರರಿಗೂ ಒಳ್ಳೆಯ ಸಂದೇಶ ಹೋಗುತ್ತದೆ ಮತ್ತು ಮಹಿಳೆಯರಿಗೂ ಪ್ರಾಮುಖ್ಯತೆ ಸಿಕ್ಕಂತಾಗುತ್ತದೆ(ಏಜೆನ್ಸೀಸ್​).