ಚುನಾವಣಾ ಆಯೋಗದ ಧೋರಣೆಯನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಠಾಕ್ರೆ ಬ್ರದರ್ಸ್ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯ ದೃಶ್ಯ. 
ರಾಜಕೀಯ

SIR, ಚುನಾವಣಾ ಆಯೋಗದ ವಿರುದ್ಧ ಠಾಕ್ರೆ ಬ್ರದರ್ಸ್​ ರಣಕಹಳೆ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಬೃಹತ್​ ಪ್ರತಿಭಟನೆ! Thackeray Brothers

ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಾಜಿ ಸಿಎಂ ಉದ್ಧವ್​ ಠಕ್ರೆ ಹಾಗೂ ಎಮ್​​ಎನ್​ಎಸ್​ ಮುಖ್ಯಸ್ಥ ರಾಜ್​ ಠಾಕ್ರೆ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಮುಂಬೈ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿರೋಧ ಪಕ್ಷಗಳು ದೇಶದಾದ್ಯಂತ ಭಾರಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾನುವಾರ (ಅ.4) ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹಾಗೂ ಮಹಾರಾಷ್ಟ್ರ ನಮನಿರ್ಮಾಣ್​ ಸೇನೆಯ ಮುಖ್ಯಸ್ಥ ರಾಜ್​ ಠಾಕ್ರೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಹುದ್ದೆಗೆ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಬೃಹತ್​ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.

ಎಸ್​ಐಆರ್​ ಪ್ರಕ್ರಿಯೆಯನ್ನು ವಿರೋಧಿಸಿ ಮಾಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ವಿರಾಟ್​ ಘರ್ಜನೆ ಮೋರ್ಚಾ ಎಂಬ ಹೆಸರನಲ್ಲಿ ಪ್ರತಿಭಟನೆ ಆಯೋಜಿಸಲಾಗಿದ್ದು, ಎಸ್​ಐಆರ್ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಹಾಗೂ ಜ್ಞಾನೇಶ್ ಕುಮಾರ್ ತ್ವರಿತವಾಗಿ ತಮ್ಮ ಪದವಿಗೆ ರಾಜೀನಾಮೆ ನೀಡಬೆಕೆನ್ನುವುದು ಠಾಕ್ರೆ ಸಹೋದರರ ಆಗ್ರಹವಾಗಿದೆ.

ಜಿರಳೆಗಳ ಹೋರಾಟದ ಬಳಿಕ ಸಹೋದರರ ಸವಾಲ್​!

ಠಾಕ್ರೆ ಸಹೋದರರು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಕ್ಕಿಂತ ಪೂರ್ವದಲ್ಲಿ, ಗಾಂಧೀ ಜಯಂತಿ (ಅ.2) ದಿನದಂದು ಅಭಿಜಿತ್​ ದಿಪ್ಕೆ ನೇತೃತ್ವದಲ್ಲಿ, ಚುನಾವಣಾ ಆಯೋಗದ ನೀತಿಯನ್ನು ವಿರೋಧಿಸಿ, ಜೈಲ್​ ಭರೋ ಆದೋಂಲನ ನಡೆದಿತ್ತು.

ಈಗ, ಇಂದು ಉದ್ಧವ್​ ಹಾಗೂ ರಾಜ್​ ಠಾಕ್ರೆ ನೇತೃತ್ವದಲ್ಲಿ ವಿರಾಟ್​ ಘರ್ಜನೆ ಮೋರ್ಚಾ ಎಂಬ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ರಾಷ್ಟ್ರೀಯ ಕಾಂಗ್ರೆಸ್​ ಪಾರ್ಟಿ (NC-P) [ಶರದ್​ ಪವಾರ್​ ಬಣ] ಕೂಡ ಬೆಂಬಲವನ್ನು ವ್ಯಕ್ತಪಡಿಸಿದೆ. ಆದರೆ ಈ ಪ್ರತಿಭಟನೆಗೆ ಯಾವುದೇ ಪಕ್ಷಗಳ ಬಾವುಟವನ್ನು ತರದಂತೆ ನಿಷೇಧ ಹೇರಲಾಗಿತ್ತು. ಕೇವಲ ತ್ರಿವರ್ಣ ಧ್ವಜವನ್ನು ಮಾತ್ರ ಈ ಪ್ರತಿಭಟನೆಯಲ್ಲಿ ಬಳಸಲಾಗಿದೆ ಎನ್ನಲಾಗಿದೆ.

ಈ ವಿರಾಟ್​ ಘರ್ಜನೆ ಮೋರ್ಚಾವು ಮೆಟ್ರೋ ಸಿನಿಮಾದಿಂದ ಪ್ರಾರಂಭವಾಗಿ ಬೃಹತ್​ ಮುಂಬೈ ಮಹಾನಗರ ಪಾಲಿಕೆ (BMC) ವರೆಗೆ ಸಾಗಲಿದ್ದು, ಅಲ್ಲಿ ತೆರಳಿದ ಮೇಲೆ ಉದ್ಧವ್​ ಠಾಕ್ರೆ ಹಾಗೂ ರಾಜ್​​ ಠಾಕ್ರೆ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆಂದು ತಿಳಿದು ಬಂದಿದೆ, (ಏಜೆನ್ಸೀಸ್​).