ರಾಜಕಾರಣ ಮತ್ತು ಜಾತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್. 
ರಾಜಕೀಯ

‘ಜಾತಿ ಇಲ್ಲದಿದ್ದರೆ ರಾಜಕಾರಣಕ್ಕೆ ಅಸ್ತಿತ್ವವೇ ಇಲ್ಲ’! ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ಶಾಕಿಂಗ್ ಹೇಳಿಕೆ! Maithili Thakur

ಬಿಜೆಪಿ ಶಾಸಕಿ ಮೈಥಿಲಿ ಠಾಕೂರ್ ರಾಜಕಾರಣ ಮತ್ತು ಜಾತಿ ಪದ್ಧತಿಯ ಕುರಿತು ನೀಡಿರುವ ಹೇಳಿಕೆ ಈಗ ಬಿಹಾರದ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಪಾಟ್ನಾ: ಬಿಹಾರದ ಅಲಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ, ಹಾಗೂ ಜನಪ್ರೀಯ ಗಾಯಕಿ, ಮೈಥಿಲಿ ಠಾಕೂರ್(Maithili Thakur)​ ಜಾತಿ ಹಾಗೂ ರಾಜಕೀಯದ ಬಗ್ಗೆ ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ಸಾಕಷ್ಟ ಚರ್ಚೆಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ಮಾಧ್ಯಮ ಸಂಸ್ಥೆಯೊಂದರಲ್ಲಿ ಮಾತುಕತೆಗೆ ಆಗಮಿಸಿದ್ದ ಮೈಥಿಲಿ ಠಾಕೂರ್​, ನಾನು ಹಾಡುಗಾರಿಕೆಯಿಂದ ರಾಜಕಾರಣಕ್ಕೆ ಪ್ರವೇಶಿಸುವಾಗ, ರಾಜಕೀಯದಲ್ಲಿ ಜಾತಿವಾದ, ಜಾತಿಯತೆ ಇರಬಾರದು, ಇದು ನಿರ್ಮೂಲನೆಯಾಗಬೇಕು ಎಂಬೆಲ್ಲಾ ಆಸೆ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ.

ಆದರೆ, ಈಗ ರಾಜಕೀಯದಲ್ಲಿ ಸಕ್ರೀಯವಾಗಿ, ಒಬ್ಬ ಶಾಸಕಿಯಾದ ಬಳಿಕ, ಬಿಹಾರದಲ್ಲಿ ಜಾತಿ ಎನ್ನುವುದು ಇಲ್ಲದೆ ಹೋದರೆ ರಾಜಕಾರಣಕ್ಕೆ ಅಸ್ಥಿತ್ವವೇ ಇರುವುದಿಲ್ಲ ಎಂದು ಮೈಥಿಲಿ ಠಾಕೂರ್​ ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಜಾತಿ ಸಮೀಕರಣವನ್ನು ಗಣನೆಗೆ ತೆಗೆದುಕೊಳ್ಳದೆ ಹೋದಲ್ಲಿ, ರಾಜಕಾರಣವೇ ಕಣ್ಮರೆಯಾಗಲಿದೆ ಎಂಬ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.

ಜಾತಿಗಳಿಗೆ ಸರಿಯಾದ ಪ್ರತಿನಿಧಿತ್ವ ಬೇಕಾಗಿದೆ!

ಈ ವಿಚಾರವಾಗಿ ಮಾತನಾಡುತ್ತಾ, ಎರಡು ವರ್ಷಗಳ ಹಿಂದೆ ನಾನು ಮತ್ತು ನನ್ನ ಕೆಲ ಗೆಳತಿಯರು ಪಾಟ್ನಾ ಮೂಲಕ ಪ್ರಯಾಣ ಮಾಡುತ್ತಿದ್ದಾಗ, "ನಮ್ಮ ಬಿಹಾರದ ರಾಜಕಾರಣಲ್ಲಿ ಜಾತಿ ಎನ್ನುವುದು ನಿರ್ಮೂಲನೆ ಆದರೆ, ಎಷ್ಟು ಒಳ್ಳೆಯದಲ್ಲವೇ?" ಎಂದು ಮಾತನಾಡಿಕೊಳ್ಳುತ್ತಿದ್ದೆವು. ಆದರೆ, ನಾನು ಶಾಸಕಿಯಾದ ಬಳಿಕ, ಬಿಹಾರದಲ್ಲಿ ಜಾತಿ ಎನ್ನವುದನ್ನು ಗಣನೆಗೆ ತೆಗೆದುಕೊಳ್ಳದೆ ಹೋದರೆ, ರಾಜಕಾರಣ ಎನ್ನುವುದೇ ಮುಕ್ತಾಯವಾಗುತ್ತದೆ ಎಂದಿದ್ದಾರೆ.

ಅಂದರೆ, ನಾನು ಈಗ ಯಾವುದೇ ಯೋಜನೆ, ನಿರ್ಧಾರವನ್ನು ತೆಗೆದುಕೊಳ್ಳುವ ಪೂರ್ವದಲ್ಲಿ ಈ ಯೋಜನೆ ಸಮಾಜದ ತಳ ಮಟ್ಟದಲ್ಲಿರುವ ಸಮುದಾಯವನ್ನು ತಲುಪುತ್ತಿದ್ದೆಯೇ? ಎನ್ನುವುದನ್ನು ಖಾತರಿ ಪಡಿಸಿಕೊಳ್ಳಬೇಕು. ನಾನು ಕೆಲವೊಂದು ನಿರ್ಧಾರಗಳನ್ನು ಕೇವಲ ಮೆರಿಟ್​ ಆಧಾರದಲ್ಲಿ ಅಲ್ಲ, ಬದಲಾಗಿ ಸಾಮಾಜಿಕ ಸ್ಥಿತಿಗಳ ಆಧಾರದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.

ಆದರೂ, ನಮ್ಮ ಯಾವುದೇ ನಿರ್ಧಾರ ಎಲ್ಲಾ ಸಮೂದಾಯವನ್ನು ಖುಷಿಪಡಿಸಲು ಸಾಧ್ಯವಾಗುದಿಲ್ಲ. ಕೆಲ ನಿರ್ಧಾರಗಳು ಮೇಲ್ವರ್ಗಕ್ಕೆ ಸರಿ ಎನಿಸಿದರೆ, ಇನ್ನೂ ಕೆಲವು ಸಮಾಜದ ಕೆಳಹಂತದ ಜನಕ್ಕೆ ಸರಿ ಎನಿಸುತ್ತದೆ. ಆದರೆ ಎಲ್ಲರ ಸರ್ಮಾಂಗೀಣ ಅಭಿವೃದ್ಧಿಯೇ ಜನ ಪ್ರತಿನಿಧಿಗಳ ಪ್ರಮುಖ ಧ್ಯೇಯವಾಗಿರುತ್ತದೆ ಎಂದಿದ್ದಾರೆ.

ಮೊದಲು ಆಸ್ಪತ್ರೆ, ನಂತರ "ಸೀತಾನಗರ"

ಕಳೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಮೈಥಿಲಿ ಠಾಕೂರ್​, ಅಲಿನಗರದ ಹೆಸರನ್ನು ಸೀತಾನಗರ ಎಂದು ಮರುನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ಮಾತನಾಡಿದ ಶಾಸಕಿ, ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಕೇವಲ ಹೆಸರನ್ನು ಬದಲಾಯಿಸುವುದು ನನ್ನ ಗುರಿಯಲ್ಲ.

ಮೊದಲು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುವಿದೆ, ಆಸ್ಪತ್ರೆಯೊಂದರ ಕಾರ್ಯ ನಡೆಯುತ್ತಿದೆ. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಹಾಗೂ ನೀಡಿರುವ ಅಭಿವೃದ್ಧಿ ಪರ ಆಶ್ವಾಸೆಗಳನ್ನು ಈಡೇರಿಸಿದ ಬಳಿಕ ಹೆಸರನ್ನು ಬದಲಾವಣೆ ಮಾಡಲಾಗುವುದು ಎಂದಿದ್ದಾರೆ, (ಏಜೆನ್ಸೀಸ್​).