ಮುಂಬೈ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ ಹಾಗೂ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್, ರೈಸ್ ಎಂಡ್ ಫಾಲ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವುದು ಬಹುತೇಕರಿಗೆ ತಿಳಿದಿದೆ. ಈ ಕಾರ್ಯಕ್ರಮದ ಇತ್ತೀಚೆಗೆ ಬಿಡುಗಡೆಯಾದ ಎಪಿಸೋಡ್ನಲ್ಲಿ, ತೇಜ್ ಪ್ರತಾಪ್ ಯಾದವ್ ತಮ್ಮ ವೈವಾಹಿಕ ಜೀವನ ಹಾಗೂ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ.
2018 ರಲ್ಲಿ ಮದುವೆಯಾಗಿದ್ದ ಮಾಜಿ ಸಚಿವ ತೇಜ್ ಪ್ರತಾಪ್ ಹಾಗೂ ಐಶ್ವರ್ಯ ರೈ, ಮದುವೆಯಾದ ಕೇವಲ 6 ತಿಂಗಳಲ್ಲೇ ಡಿವೋರ್ಸ್ ಪಡೆದಿದ್ದರು. ಈ ಐಶ್ವರ್ಯ ರೈ, ಬಿಹಾರದ ಪ್ರಭಾವಿ ರಾಜಕಾರಣಿ ಚಂದ್ರಿಕಾ ರಾಯ್ ಅವರ ಪುತ್ರಿಯಾಗಿದ್ದಾಳೆ. ಐಶ್ವರ್ಯ ರೈ ಆಕೆಯ ಮಾಜಿ ಪ್ರಿಯಕರನ ಜತೆ ಸ್ನೇಹ ಬೆಳೆಸಿದ್ದು, ಹಾಗೂ ತೇಜ್ ಪ್ರತಾಪ್ ಜೊತೆಗೆ ನಿರಂತರವಾಗಿ ಜಗಳವಾಡುತ್ತಿದ್ದ ಹಿನ್ನಲೆ ಈ ಜೋಡಿ ವಿಚ್ಚೇದನ ಪಡೆದುಕೊಂಡಿದ್ದರೆಂದು ಹೇಳಲಾಗುತ್ತಿತ್ತು.
ಈಗ, ಈ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿರುವ ತೇಜ್ ಪ್ರತಾಪ್ ಯಾದವ್, ನಾನು ಆ ಸಮಯದಲ್ಲಿ ಬಿಹಾರದ ಆರೋಗ್ಯ ಸಚಿವನಾಗಿದ್ದೆ, ಮನೆಯವರ ಒತ್ತಾಯಕ್ಕೆ ಮಣಿದು ನಾವಿಬ್ಬರು ಮದುವೆ ಮಾಡಿಕೊಂಡೆವು. ನನ್ನ ವ್ಯಕ್ತಿವೇ ಬೇರೆಯಾಗಿತ್ತು, ಅವಳಿದ್ದಿದ್ದೇ ಬೇರೆ, ಹೀಗಾಗಿ ದಿನಾಲೂ ನಮ್ಮ ನಡುವೆ ಜಗಳವಾಗುತ್ತಿತ್ತು. ಹೀಗಾಗಿ ನಾವು ಡಿವೋರ್ಸ್ ಪಡೆಯಬೇಕಾಯಿತು ಎಂದಿದ್ದಾರೆ.
ಇನ್ನೂ ಅವಳಿಗೆ ಪಾರ್ಟಿ ಮಾಡುವ ವಿಪರೀತ ಹುಚ್ಚಿತ್ತು. ಬೆಳಿಗ್ಗೆ 4-5 ಗಂಟೆವರೆಗೆ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾ, ಸಿಗರೇಟ್ ಸೇದುತ್ತಾ, ಸರಾಯಿ ಕುಡಿಯುತ್ತಿದ್ದಳು. ಅವಳಿಗೆ ತಾನೊಬ್ಬಳು ಮದುವೆಯಾದವಳು ಎನ್ನುವ ಯಾವುದೇ ಪರಿವಿರಲಿಲ್ಲ. ಒಂದು ದಿನ ಅವಳು, ಆಕೆಯ ಬಾಯ್‌ಫ್ರೆಂಡ್ ಜೊತೆ ಮಾಡಿದ್ದ ಚಾಟಿಂಗ್ ನೋಡಿದೆ. ಅದರಲ್ಲಿ ಐಶ್ವರ್ಯ ಆತನಿಗೆ, ಐ ಲವ್ ಯೂ ಎಂದು ಮೆಸೇಜ್ ಕಳುಹಿಸಿದ್ದಳು. ಇದನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಯಿತು ಎಂದು ತೇಜ್ ಪ್ರತಾಪ್ ಬಹಳ ನೊಂದುಕೊಂಡಿದ್ದಾರೆ.
ಕೆಲ ದಿನಗಳ ವರೆಗೆ ನನಗೆ ನನ್ನ ಮನೆಗೂ ಹೊಗಲು ಮನಸ್ಸಾಗುತ್ತಿರಲಿಲ್ಲ, ಗೆಳೆಯರ ಮನೆಯಲ್ಲಿಯೇ ಇದ್ದುಬಿಡುತ್ತಿದೆ. ನಂತರ ಒಂದು ದಿನ ಮನೆಗೆ ಹೋಗಿ ಅಪ್ಪ-ಅಮ್ಮನ ಬಳಿ ನನಗೆ ಅವಳೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ನಂತರ ನಾನು ಕೋರ್ಟ್ಗೆ ಅರ್ಜಿ ಸಲ್ಲಿಸಿದೆ, ಹಾಗೂ ಅಲ್ಲಿ, ಇವಳು ತನ್ನ ಬಾಯ್‌ಫ್ರೆಂಡ್ ಜೊತೆ ನಡೆಸಿದ್ದ ಚಾಟಿಂಗ್ಅನ್ನು ಪ್ರಸ್ತುತ ಪಡಿಸಿದ್ದೆ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ, (ಏಜೆನ್ಸೀಸ್).