ಜಂತರ್​-ಮಂತರ್​ನಲ್ಲಿ 'ಜಿರಳೆ' ಪ್ರತಿಭಟನೆ: ಮೆಟ್ರೋ ಸೇವೆಯಲ್ಲಿ ಭಾರೀ ವ್ಯತ್ಯಯ; 57 ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತ! Delhi Metro

ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಜ್ ಜನತಾ ಪಾರ್ಟಿ (CJP) ಪ್ರತಿಭಟನೆ ಹಿನ್ನೆಲೆ 57 ಮೆಟ್ರೋ ನಿಲ್ದಾಣಗಳಲ್ಲಿ ಸೇವೆ ಸ್ಥಗಿತ. DMRC ಪ್ರಕಟಣೆ ಮತ್ತು ಮಾರ್ಗ ಬದಲಾವಣೆಯ ಸಂಪೂರ್ಣ ವಿವರ ಇಲ್ಲಿದೆ.
A Delhi Metro station with its gates closed as a precautionary measure due to protests against the Election Commission (representative image).
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಬಾಗಿಲು ಮುಚ್ಚಿರುವ ದೆಹಲಿ ಮೆಟ್ರೋ ನಿಲ್ದಾಣ (ಸಾಂಕೇತಿಕ ಚಿತ್ರ).
Published on: 

ನವದೆಹಲಿ: ಶನಿವಾರ (ಅ.10) ದೆಹಲಿಯ ಜಂತರ್​-ಮಂತರ್​ನಲ್ಲಿ, ಕೇಂದ್ರ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಕ್ರೋಜ್​ ಜನತಾ ಪಾರ್ಟಿ ನೇತೃತ್ವದಲ್ಲಿ ಬೃಹತ್​ ಪ್ರತಿಭಟನೆ ನಡೆಯಲಿರುವ ಹಿನ್ನಲೆ ದೆಹಲಿ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯ ಕಂಡು ಬರಲಿದೆ.

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಗೆ ವಿರೋಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಈ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಿಸುವ ಕಾರಣ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶವಾಗುವ ಸಂಭವವಿರುವ ಹಿನ್ನಲೆ, ಸುಮಾರು 57 ಮೆಟ್ರೋ ನಿಲ್ದಾಣಗಳಲ್ಲಿ ಸಾರಿಗೆ ಸೇವೆ ಲಭ್ಯವಿರುವುದಿಲ್ಲವೆಂದು ದೆಹಲಿ ಮೆಟ್ರೋ ರೈಲ್​ ಕಾರ್ಪೋರೇಷನ್​ ಘೋಷಿಸಿದೆ.

ಈ 57 ಮೆಟ್ರೋ ನಿಲ್ದಾಣಗಳಲ್ಲಿ, ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಸೇವೆ ಅಲಭ್ಯವಾಗಲಿದ್ದು, ಶನಿವಾರ ಮುಂದಿನ ಆದೇಶದವೆರೆಗ ಯಾವುದೇ ಮೆಟ್ರೋ ಸೇವೆ ದೊರೆಯುವುದಿಲ್ಲ, ದೆಹಲಿ ನಾಗರಿಕರು ಸಹಕರಿಸಬೇಕಾಗಿ DMRC ಟ್ವೀಟ್ ಮಾಡಿದೆ.

ಇವತ್ತು ಬೆಳಿಗ್ಗೆ ಪತ್ರಿಕಾಗೋಷ್ಟಿ ನಡೆಸಿದ್ದ ಪೊಲೀಸ್​ ಜಂಟಿ ಆಯುಕ್ತೆ ನುಪೂರ್ ಪ್ರಸಾದ್​, ಮೆಟ್ರೋ ಕಾರ್ಪೋರೇಷನ್​ಗೆ ಭದ್ರತೆ ಹಿನ್ನಲೆ, ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಈಗ ಪೊಲೀಸರ ಮನವಿಗೆ ಪ್ರತಿಕ್ರಿಯಿಸಿರುವ ಮೆಟ್ರೋ ಕಾರ್ಪೋರೇಷನ್​ ಅಧಿಕೃತ ಹೇಳಿಕೆಯನ್ನು ನೀಡಿದೆ.

Also Read
ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಶಿಫ್ಟ್! ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ ಖಡಕ್ ಆಕ್ಷನ್! Prajwal Revanna
A Delhi Metro station with its gates closed as a precautionary measure due to protests against the Election Commission (representative image).

ಪ್ರತಿಭಟನೆಗೆ ಅನುಮತಿ ಪಡೆದಿಲ್ಲ!

ಶುಕ್ರವಾರ, ಪತ್ರಿಕಾಗೋಷ್ಟಿ ನಡೆಸಿದ ದೆಹಲಿ ಪೊಲೀಸ್​ ಆಯುಕ್ತೆ, ನುಪೂರ್​ ಪ್ರಸಾದ್​, ನಾಳೆ ನಡೆಯುವ ಪ್ರತಿಭಟನೆಗೆ ಕಾಕ್ರೋಚ್​ ಜನತಾ ಪಾರ್ಟಿ ನಮ್ಮಿಂದ ಅನುಮತಿ ಪಡೆದಿಲ್ಲ. ಅಕ್ಟೋಬರ್​ 7 ರಂದು ನಮಗೆ ಪ್ರತಿಭಟನೆಗೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದರು. ಆದರೆ, ಇಷ್ಟು ಕಡಿಮೆ ಸಮಯದಲ್ಲಿ ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಆದರೂ ನಾಳೆ ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದ್ದು, ಸಮಾಜದ ಶಾಂತಿ ಕೆಡೆಸುವ ಪ್ರಯತ್ನ ನಡೆದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯುಕ್ತೆ ಖಡಕ್ ಎಚ್ಚರಿಕೆ ನೀಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net