ನ್ಯೂಸ್

ವೂಟ್ ಸೆಲೆಕ್ಟ್​ನಲ್ಲಿ 777 ಚಾರ್ಲಿ: ಓಟಿಟಿ ಬಿಡುಗಡೆ ದಿನಾಂಕ ಘೋಷಿಸಿದ ರಕ್ಷಿತ್​

ಬೆಂಗಳೂರು: ‘777 ಚಾರ್ಲಿ’, ಓಟಿಟಿಗೆ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಈ ಪ್ರಶ್ನೆಯನ್ನು ರಕ್ಷಿತ್ ಮುಂದಿಟ್ಟರೆ, ಈಗಲೇ ಹೇಳುವುದಿಲ್ಲ ಎಂದು ಹೇಳಿದ್ದರು. ಈಗಲೇ ಹೇಳಿಬಿಟ್ಟರೆ, ಜನ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಾರೋ ಇಲ್ಲವೋ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈಗ ಕೊನೆಗೂ ಓಟಿಟಿ ಬಿಡುಗಡೆ ದಿನಾಂಕವನ್ನು ರಕ್ಷಿತ್ ಘೋಷಿಸಿದ್ದಾರೆ.

ಇಂದಿನಿಂದ ವೂಟ್ ಸೆಲೆಕ್ಟ್ ನಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 49ನೇ ದಿನಕ್ಕೆ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎಂದು ಮೊದಲೇ ಒಪ್ಪಂದವಾಗಿತ್ತಂತೆ. ಈ ಕುರಿತು ಮಾತನಾಡುವ ಅವರು, ‘ಇದು ಕನ್ನಡ ಅವತರಣಿಕೆ ಮಾತ್ರ. ‘ಚಾರ್ಲಿ’ಯ ಬೇರೆ ಭಾಷೆಯ ಹಕ್ಕುಗಳನ್ನು ಬೇರೆಯವರಿಗೆ ಕೊಟ್ಟಿದ್ದೇವೆ. ಅವರು ಯಾರ್ಯಾರಿಗೆ ಮಾರುತ್ತಾರೋ ಗೊತ್ತಿಲ್ಲ. ಸದ್ಯ ಕರ್ನಾಟಕದಲ್ಲಿ 10 ಮಲ್ಟಿಪ್ಲೆಕ್ಸ್​ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದ್ದು, ಎಲ್ಲ ಕಡೆ ಶೇರ್ ಬರುತ್ತಿದೆ. ಓಟಿಟಿಯಲ್ಲಿ ಬಿಡುಗಡೆಯಾದ ಮೇಲೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಲಿದೆ’ ಎನ್ನುತ್ತಾರೆ ರಕ್ಷಿತ್.