ಕಾರ್ಪೋರೇಟ್ ಇತಿಹಾಸದಲ್ಲಿ ಬೃಹತ್ ವಿಲೀನ ಪ್ರಕ್ರಿಯೆಗೆ ದೇಶ ಸಾಕ್ಷಿಯಾಗಲಿದೆ. ಭಾರತದ ಅತಿದೊಡ್ಡ ಗೃಹ ಹಣಕಾಸು ಕಂಪನಿ ಎಚ್ಡಿಎಫ್ಸಿ (ಹೌಸಿಂಗ್ ಡೆವಲಪ್ವೆುಂಟ್ ಫೈನಾನ್ಸ್ ಕಾರ್ಪೆರೇಷನ್) ಲಿಮಿಟೆಡ್ ಇನ್ನೊಂದು ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ಡಿಎಫ್ಸಿ ಬ್ಯಾಂಕ್ ಜತೆಗೆ ವಿಲೀನವಾಗಲಿದೆ. ಇದರೊಂದಿಗೆ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿ ಎಚ್ಡಿಎಫ್ಸಿ ಬ್ಯಾಂಕ್ ಮೂಡಿಬರಲಿದೆ. ಈ ಡೀಲ್ ಸಂಪೂರ್ಣ ಅನುಷ್ಠಾನಗೊಂಡ ಬಳಿಕ ಎಚ್ಡಿಎಫ್ಸಿ ಬ್ಯಾಂಕ್ ಶೇಕಡ 100 ಸಾರ್ವಜನಿಕ ಷೇರುದಾರರ ಮಾಲೀಕತ್ವದಲ್ಲಿ ಇರಲಿದೆ. ಎಚ್ಡಿಎಫ್ಸಿಯ ಹಾಲಿ ಷೇರುದಾರರಿಗೆ ಶೇಕಡ 41ರಷ್ಟು ಎಚ್ಡಿಎಫ್ಸಿ ಬ್ಯಾಂಕ್ ಷೇರು ಸಿಗಲಿದೆ. ಅರ್ಥಾತ್ ಎಚ್ಡಿಎಫ್ಸಿಯ ಪ್ರತಿ ಷೇರುದಾರರಿಗೆ ಅವರ ಬಳಿ ಇರುವ ಪ್ರತಿ 42 ಷೇರುಗಳಿಗೆ ಎಚ್ಡಿಎಫ್ಸಿ ಬ್ಯಾಂಕಿನ 25 ಷೇರುಗಳು ಸಿಗಲಿವೆ. ಈ ವಿಲೀನ ಪ್ರಕ್ರಿಯೆಗೆ ಸೆಬಿ ಅನುಮತಿ ಅವಶ್ಯವಾಗಿದ್ದು, ಅದು ಸಿಕ್ಕರೆ 2023ರ ಏಪ್ರಿಲ್ನಲ್ಲಿ ಆರಂಭವಾಗುವ ಹಣಕಾಸು ವರ್ಷದ ಎರಡನೇ ಅಥವಾ ಮೂರನೇ ತ್ರೖೆಮಾಸಿಕದಲ್ಲಿ ಈ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ. ಪ್ರಸ್ತುತ, ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಎಚ್ಡಿಎಫ್ಸಿ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ ಮತ್ತು ಎಚ್ಡಿಎಫ್ಸಿ ಹೋಲ್ಡಿಂಗ್ಸ್ ಲಿಮಿಟೆಡ್ನ ಪಾಲು ಅಂದರೆ ಪೇಯ್್ಡ ಅಪ್ ಈಕ್ವಿಟಿ ಷೇರ್ ಕ್ಯಾಪಿಟಲ್ ಶೇಕಡ 21 ಇದೆ.
ರೇರಾ ಅನುಷ್ಠಾನ, ವಸತಿ ಕ್ಷೇತ್ರಕ್ಕೆ ಮೂಲಸೌಕರ್ಯದ ಸ್ಥಾನಮಾನ, ಕೈಗೆಟಕುವ ವೆಚ್ಚದಲ್ಲಿ ಎಲ್ಲರಿಗೂ ಮನೆ ಮುಂತಾದ ಸರ್ಕಾರದ ಉಪಕ್ರಮಗಳ ಕಾರಣ ಹೌಸಿಂಗ್ ಫೈನಾನ್ಸ್ ಕ್ಷೇತ್ರದ ವ್ಯವಹಾರ ನಿಧಾನವಾಗಿ ವೃದ್ಧಿಯಾಗಲಿದೆ. ಇದು ಸಮಾನರ ವಿಲೀನ. ಈ ಎರಡೂ ಕಂಪನಿಗಳ ಒಟ್ಟು ಬ್ಯಾಲೆನ್ಸ್ ಶೀಟ್ 17.87 ಲಕ್ಷ ಕೋಟಿ ರೂಪಾಯಿ ಮತ್ತು ನಿವ್ವಳ ಮೌಲ್ಯ 3.3 ಲಕ್ಷ ಕೋಟಿ ರೂಪಾಯಿ ಆಗಿರಲಿದೆ. ವಿಲೀನ ಪ್ರಕ್ರಿಯೆ ವ್ಯಾಪಾರಕ್ಕೆ ಚುರುಕು ನೀಡಲಿದೆ. | ದೀಪಕ್ ಪಾರೇಖ್ ಎಚ್ಡಿಎಫ್ಸಿ ಚೇರ್ಮನ್
60,000 ದಾಟಿದ ಸೆನ್ಸೆಕ್ಸ್: ಎಚ್ಡಿಎಫ್ಸಿ ಷೇರು 10% ಏರಿಕೆ ಎಚ್ಡಿಎಫ್ಸಿ ವಿಲೀನ ಘೋಷಣೆ ಭಾರತದ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದೆ. ಸೋಮವಾರದ ವಹಿವಾಟಿ ನಲ್ಲಿ ಬಿಎಸ್ಇ ಸೆನ್ಸೆಕ್ಸ್ 60,000 ಮತ್ತು ಎನ್ಎಸ್ಇ ನಿಫ್ಟಿ 18,000 ಅಂಶಗಳ ಗಡಿ ದಾಟಿವೆ. ಸೆನ್ಸೆಕ್ಸ್ 1,335.05 ಅಂಶ (2.25%) ಏರಿ 60,611.74 ಅಂಶದಲ್ಲಿ, ನಿಫ್ಟಿ 382.95 ಅಂಶ (2.17%) ಏರಿ 18,053.40 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಎಚ್ಡಿಎಫ್ಸಿ ಬ್ಯಾಂಕ್ ಷೇರು ಮೌಲ್ಯ ಶೇಕಡ 9.97 ಏರಿ 1,656.45 ರೂಪಾಯಿ, ಎಚ್ಡಿಎಫ್ಸಿ ಷೇರುಮೌಲ್ಯ ಶೇಕಡ 9.30 ಅಂಶ ಏರಿ 2,678.90 ರೂಪಾಯಿ ತಲುಪಿದೆ.
ಕಂಪನಿಗಳ ಹಿನ್ನೆಲೆ: ಎಚ್ಡಿಎಫ್ಸಿಯನ್ನು ಭಾರತದ ವ್ಯಾಪಾರಿ ಸಮುದಾಯ 1977ರಲ್ಲಿ ಸ್ಥಾಪಿಸಿತು. ಮಾರ್ಟ್ಗೇಜ್ ಕಂಪನಿ ಎಂದೇ ಇದು ಗುರುತಿಸಿಕೊಂಡಿದೆ. ಎಚ್ಡಿಎಫ್ಸಿ ಗ್ರೂಪ್ನಲ್ಲಿ ಇದು ಪ್ರಮುಖ ಕಂಪನಿ. ಇಂಡಸ್ಟ್ರಿಯಲ್ ಕ್ರೆಡಿಟ್ ಆಂಡ್ ಇನ್ವೆಸ್ಟ್ಮೆಂಟ್ ಕಾರ್ಪೆರೇಶನ್ ಆಫ್ ಇಂಡಿಯಾ (ಐಸಿಐಸಿಐ) ಈ ಕಂಪನಿಯನ್ನು ಪ್ರಮೋಟ್ ಮಾಡಿದ್ದು, ಕಂಪನಿ ಸ್ಥಾಪನೆಯಲ್ಲಿ ಹಸ್ವುುಖ್ಭಾಯ್ ಪಾರೇಖ್ ಪ್ರಮುಖ ಪಾತ್ರವಹಿಸಿದ್ದರು. ಎಚ್ಡಿಎಫ್ಸಿ ಬ್ಯಾಂಕ್ ಅನ್ನು 1994ರಲ್ಲಿ ಎಚ್ಡಿಎಫ್ಸಿಯ ಅಂಗ ಸಂಸ್ಥೆಯಾಗಿ ಸ್ಥಾಪಿಸಲಾಗಿತ್ತು. ಮಹಾರಾಷ್ಟ್ರದ ಮುಂಬೈನಲ್ಲಿ ಇದರ ಕೇಂದ್ರ ಕಚೇರಿ ಇದ್ದು, ಅಂದಿನ ಕೇಂದ್ರ ವಿತ್ತ ಸಚಿವ ಮನಮೋಹನ್ ಸಿಂಗ್ ಇದನ್ನು ಉದ್ಘಾಟಿಸಿದ್ದರು.