ಹೊಸದಿಲ್ಲಿ: ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಕಲ್ವರ್ ಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್ ಪ್ರೈವೆಟ್ ಲಿಮಿಟೆಡ್ ಹಿಂದೆ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಮತ್ತು ಬಾಂಗ್ಲಾ ಎಂಟರ್ಟೈನ್ಮೆಂಟ್ ಪ್ರೈ. ಲಿಮಿಟೆಡ್ ವಿಲೀನವನ್ನು ಪರಿಣಾಮಕಾರಿಯಾಗಿ ಮಾಡಲು ಅಗತ್ಯವಿರುವ ಟೈಮ್‌ಲೈನ್ ಅನ್ನು ವಿಸ್ತರಿಸಲು ಭಾನುವಾರ (ಡಿ.18) ಕೋರಿದೆ.
ಎಲ್ಲಾ ನಿಯಂತ್ರಕ ಅನುಮೋದನೆಗಳನ್ನು ಪಡೆದ ಬಳಿಕ ಜೀ ಮತ್ತು ಸೋನಿ ಗ್ರೂಪ್ ವಿಲೀನಗೊಂಡ ಘಟಕದ ಹೊಸ ನಿರ್ದೇಶಕರ ಮಂಡಳಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿಯ ನೇಮಕಾತಿಗಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಜಂಟಿಯಾಗಿ ಅನುಮೋದನೆ ಪಡೆಯುವ ಅಗತ್ಯವಿದೆ. ಜೀ, ಸೋನಿ ಇಂಡಿಯಾದೊಂದಿಗೆ ಸಂಯೋಜಿಸುವುದರಿಂದ ಹೊಸ ವಿಲೀನ ಘಟಕಕ್ಕಾಗಿ ಎರಡೂ ಪಕ್ಷಗಳು ಕಂಪನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಬೇಕು. ಈ ಹಂತಗಳನ್ನು ಡಿಸೆಂಬರ್ 21ರೊಳಗೆ ಪೂರ್ಣಗೊಳಿಸಬೇಕಿದೆ.
ವಿಲೀನವು ಎರಡೂ ಘಟಕಗಳ ಒಪ್ಪಿಗೆಯೊಂದಿಗೆ ಮೂರು ಗಡುವಿನ ವಿಸ್ತರಣೆಗಳನ್ನು ಅನುಮತಿಸುತ್ತದೆ. ವಿಸ್ತರಣೆಗಾಗಿ ಇದು ಮೊದಲ ವಿನಂತಿ ಎಂದು ಹೇಳಲಾಗಿದೆ. ಸ್ವತಂತ್ರ ನಿರ್ದೇಶಕರಾದ ಸಾಶಾ ಮಿರ್ಚಂದಾನಿ ಮತ್ತು ವಿವೇಕ್ ಮೆಹ್ರಾ ಕಂಪನಿಯ ಮಂಡಳಿಗೆ ಮರು-ನೇಮಕವಾಗಲು ಅಗತ್ಯವಾದ ಹೆಚ್ಚಿನ ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಝೀ ವಿನಿಮಯ ಕೇಂದ್ರಕ್ಕೆ ತಿಳಿಸಿದೆ.
ಇದನ್ನೂ ಓದಿ: ಚೊಚ್ಚಲ ಬಾರಿಗೆ ಏಷ್ಯಾಕಪ್ ಕಿರೀಟ ಜಯಿಸಿದ ಬಾಂಗ್ಲಾದೇಶ: ಯಶಸ್ಸಿನ ಹಿಂದೆ ಟೀಮ್ ಇಂಡಿಯಾ ಮಾಜಿ ಆಟಗಾರನ ಪಾತ್ರ!
ಈ ನಡುವೆ ಕಾರ್ಯನಿರ್ವಾಹಕೇತರ ನಿರ್ದೇಶಕ ಆದೇಶ್ ಗುಪ್ತಾ ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುತ್ತಿದ್ದಾರೆ. ವಿನಿಮಯ ಫೈಲಿಂಗ್ ಪ್ರಕಾರ, ಇದೀಗ ವೆಂಕಟ ರಮಣ ಮೂರ್ತಿ ಪಿನಿಸೆಟ್ಟಿ, ಶಿಶಿರ್ ಬಾಬುಭಾಯಿ ದೇಸಾಯಿ ಮತ್ತು ಉತ್ತಮ್ ಪ್ರಕಾಶ್ ಅಗರ್ವಾಲ್ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ಮಂಡಳಿಗೆ ನೇಮಕ ಮಾಡಲಾಗಿದೆ,(ಏಜೆನ್ಸೀಸ್).