ನ್ಯೂಸ್

ಯುಗಾದಿ ಧಾರ್ವಿುಕ ದಿನ; ಆಚರಿಸುವಂತೆ ದೇವಾಲಯಗಳಿಗೆ ಸೂಚನೆ

Webdesk - Ravikanth

ಬೆಂಗಳೂರು: ಹಿಂದುಗಳ ಹೊಸ ವರ್ಷದ ಮೊದಲ ದಿನವಾದ ಯುಗಾದಿಯನ್ನು ಧಾರ್ವಿುಕ ದಿನವನ್ನಾಗಿ ವಿಶೇಷವಾಗಿ ಆಚರಿಸಲು ರಾಜ್ಯದ ಧಾರ್ವಿುಕ ದತ್ತಿ ಇಲಾಖೆಯ ದೇವಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ಸರ್ಕಾರ ಮುಜುರಾಯಿ ಇಲಾಖೆಗೆ ಸೂಚನೆ ನೀಡಿದೆ. ರಾಜ್ಯದ ಅನೇಕ ಇಲಾಖೆಗಳು ವರ್ಷದ ಒಂದು ದಿನವನ್ನು ಇಲಾಖೆಯ ದಿನವನ್ನಾಗಿ ಆಚರಿಸುತ್ತಾರೆ. ಅದೇ ರೀತಿ ಧಾರ್ವಿುಕ ದತ್ತಿ ಇಲಾಖೆಯೂ ಧಾರ್ವಿುಕ ಹಿನ್ನಲೆ ಮತ್ತು ಮನೋಭಾವ ಹೊಂದಿರುವ ಇಲಾಖೆಯಾಗಿರುವುದರಿಂದ ವರ್ಷದಲ್ಲಿ ಒಂದು ದಿನವನ್ನು ಧಾರ್ವಿುಕ ದಿನವೆಂಬ ಹೆಸರಿನಿಂದ ಆಚರಣೆ ಮಾಡುವುದು ಸೂಕ್ತ ಎಂದು ಸರ್ಕಾರ ಹೇಳಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಚಂದ್ರಮಾನ ಯುಗಾದಿಯನ್ನು, ಇನ್ನು ಕೆಲವು ಭಾಗಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರತಿವರ್ಷ ಚಾಂದ್ರಮಾನ/ಸೌರಮಾನ ಯುಗಾದಿಯ ದಿನಗಳಂದು ಮುಜುರಾಯಿ ಇಲಾಖೆ ವ್ಯಾಪ್ತಿಯ ಎಲ್ಲ ದೇವಾಲಯಗಳಲ್ಲಿ ಧಾರ್ವಿುಕ ದಿನ ಆಚರಿಸುವಂತೆ ಸೂಚನೆ ನೀಡಲಾಗಿದೆ.

ಮಾರ್ಗಸೂಚಿಗಳು

  • ರಾಜ್ಯದ ಅಭಿವೃದ್ದಿಗಾಗಿ ಇದೇ ಸಂಧರ್ಭ ದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಕೈಗೊಳ್ಳುವುದು
  • ದೇವಾಲಯಗಳಲ್ಲಿ ಸ್ವಯಂ ಸೇವ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
  • ಪ್ರತಿ ದೇವಾಲಗಳಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳು ವಂತೆ ಕಾರ್ಯಕ್ರಮಗಳನ್ನು ರೂಪಿಸುವುದು
  • ದೇವಾಲಯಗಳ ಧಾರ್ವಿುಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿಯಪಡಿಸುವ ಕಾರ್ಯಕ್ರಮ ರೂಪಿಸುವುದು
  • ಶಿಷ್ಟಾಚಾರ ಪಾಲಿಸಿಕೊಂಡು ಧಾರ್ವಿುಕ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಠ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ