Mercedes Benz: ಇಂದಿನ ದಿನಗಳಲ್ಲಿ ಕೆಲವೊಂದು ವರ್ಗದ ಜನರು ತಾವು ಫೇಮಸ್ ಆಗಬೇಕು, ತಮ್ಮನ್ನು ಹಲವಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸಬೇಕು ಎಂದು ಅನೇಕ ರೀತಿಯ ಸಾಹಸಗಳನ್ನು ಮಾಡಿ, ಪ್ರಸಿದ್ಧಿ ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. ಅದೇ ರೀತಿಯ ಘಟನೆಯೊಂದು ಗುಜರಾತ್ನ ಸೂರತ್ನಲ್ಲಿರುವ ಡುಮಾಸ್ ಬೀಚ್ನಲ್ಲಿ ನಡೆದಿದೆ. ಐಷರಾಮಿ ಕಾರಿನ ಜೊತೆ ಸ್ಟಂಟ್ ಮಾಡಲು ಹೋಗಿ ಜೌಗು ಮರಳಿನಲ್ಲಿ ಸಿಲುಕಿಕೊಂಡು ಯುವಕರು ಪರದಾಡಿದ್ದಾರೆ.
ಇದನ್ನೂ ಓದಿ:ಆಗಸ್ಟ್ ಬೆನ್ನಲ್ಲೇ ದುಬಾರಿಯಾಯ್ತು ಚಿನ್ನದ ಬೆಲೆ! ಒಂದೇ ದಿನ ಭಾರೀ ಹೆಚ್ಚಳ, ಹೀಗಿದೆ ತಜ್ಞರ ಭವಿಷ್ಯ | Gold
ಡುಮಾಸ್ ಬೀಚ್ನ ಸರೋವರದ ಮರಳಿನಲ್ಲಿ ನೀಲಿ ಬಣ್ಣದ ಮರ್ಸಿಡಿಸ್-ಬೆನ್ಜ್ ಕಾರು ಸಿಲುಕಿಕೊಂಡಿದೆ. ಇಬ್ಬರು ಯುವಕರು ಮರಳಿನಿಂದ ವಾಹನವನ್ನು ಹೊರತೆಗೆಯಲು ಹರಸಾಹಸ ಪಡುತ್ತಿರುವುದನ್ನು ನೋಡಬಹುದು. ಇನ್ನು ಈ ಘಟನೆ ಕ್ಯಾಮರಾದಲ್ಲಿ ರೆಕಾರ್ಡ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜನರ ಸುರಕ್ಷಿತಕ್ಕಾಗಿ ಡುಮಾಸ್ ಬೀಚ್ನ ಕೆಲವೊಂದು ಪ್ರದೇಶಗಳನ್ನು ನಿಷೇಧ ಪಡಿಸಿದ್ದರೂ, ಆ ಪ್ರದೇಶಗಳಿಗೆ ಇಬ್ಬರು ಯುವಕರು ತಮ್ಮ ಕಾರನ್ನು ತೆಗೆದುಕೊಂಡು ಹೋಗಿ ಸಿಲುಕಿಕೊಂಡಿದ್ದಾರೆ. ಸಮುದ್ರದ ಅಲೆಗಳು ಜಾಸ್ತಿಯಾದ್ದರಿಂದ ಕಾರು ಜೌಗು ಮರಳಿನಲ್ಲಿ ಸಿಲುಕಿಕೊಂಡಿತು. ಯಾವುದೇ ಸಹಾಯವಿಲ್ಲದೆ ನೀರಿನಿಂದ ಕಾರನ್ನು ಹೊರತೆಗೆಯುವುದು ಕಷ್ಟವಾಗಿತ್ತು ಎಂದು ಸುದ್ದಿಮೂಲಗಳು ವರದಿ ಮಾಡಿದೆ. (ಏಜೆನ್ಸೀಸ್)