ನ್ಯೂಸ್

ನನ್ನನ್ನು ಗುರಾಯಿಸ್ತಿದ್ದೀಯಾ? ಎಂದವ ಎದೆಗೆ ಇರಿದೇ ಬಿಟ್ಟ! ಬೆಚ್ಚಿಬೀಳಿಸುತ್ತೆ ಅಮಾನವೀಯ ಕೃತ್ಯ

ಚನ್ನಪಟ್ಟಣ: ಜೀವನ ನಿರ್ವಹಣೆಗಾಗಿ ವಲಸೆ ಬಂದು ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ಏನೂ ಮಾಡದ ತಪ್ಪಿಗೆ ಜೀವ ತೆತ್ತಿರುವ ಅಮಾನವೀಯ ಘಟನೆ ತಾಲೂಕಿನಲ್ಲಿ ಸಂಭವಿಸಿದೆ.

ಬಿಹಾರ ಮೂಲದ ಕರಣ್ (೧೯) ಮೃತ ಯುವಕ. ಈತ ನಿರಾಶ್ರಿತರಿಗೆ ಮನೆಕಟ್ಟಿಕೊಡುವ ಗುತ್ತಿಗೆ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಬುಧವಾರ ರಾತ್ರಿ ನಗರದ ಸಾತನೂರು ರಸ್ತೆಯ ಹೋಟೆಲ್​ನಲ್ಲಿ ಊಟ ಮಾಡಿ ರೂಮಿನತ್ತ ತೆರಳುತ್ತಿದ್ದ ಕರಣ್​ಗೆ ಇಂದಿರಾ ಕಾಟೇಜ್​ ನಿವಾಸಿ ನವೀದ್​ ಎಂಬಾತ ನನ್ನನ್ನು ಗುರಾಯಿಸುತ್ತಿದ್ದೀಯಾ?ಎಂದು ಕ್ಯಾತೆ ತೆಗೆದಿದ್ದ.

ಗುರಾಯಿಸಿದ ಎಂದು ರಗಳೆ ತೆಗೆದ ಆರೋಪಿ ನವೀದ್​, ಚಾಕುವಿನಿಂದ ಕರಣ್​ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಒದ್ದಾಡುತ್ತಿದ್ದ ಯುವಕನನ್ನು ಮಂಡ್ಯದ ಆಸ್ಪತ್ರೆಗೆ ಸಾಗಿಸುವ ಯತ್ನ ನಡೆಯಿತದಾರೂ ಮಾರ್ಗಮಧ್ಯೆ ಕೊನೆಯುಸಿರೆಳೆದ. ಘಟನೆಯ ಮಾಹಿತಿ ತಿಳಿಯುತ್ತಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಸಿಪಿಐ ಸಿ.ವಸಂತ್ ಮತ್ತು ಪಿಎಸ್ಐ ಶಿವಕುಮಾರ್ ತಂಡ ಆರೋಪಿ ಬಂಧಿಸಿದೆ. ಮೃತ ಯುವಕನ ಸಂಬಂಧಿಕರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.