ನ್ಯೂಸ್

ಮದ್ಯದ ನಶೆಯಲ್ಲಿ 33 ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

Webdesk - Narayanaswamy

ಬೆಂಗಳೂರು: ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ 27ವರ್ಷದ ಟೆಕ್ಕಿಯೊಬ್ಬ ಮದ್ಯದ ಅಮಲಿನಲ್ಲಿ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೆ.ಆರ್.ಪುರದ ಅಯ್ಯಪ್ಪನಗರದ ಕೊಡಿಗೇಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.

ದಿಪಾಂಶು ಶರ್ಮಾ(27) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಶುಕ್ರವಾರ ಬೆಳಗ್ಗೆ 6.45 ರ ಸುಮಾರಿಗೆ ಘಟನೆ ನಡೆದಿದೆ. ಒಬ್ಬ ಸ್ನೇಹಿತ ಮತ್ತು ಇಬ್ಬರು ಯುವತಿಯರ ಜತೆ ದಿಪಾಂಶು ಶರ್ಮಾ ಗುಂಡು ಪಾರ್ಟಿ ಮಾಡುತ್ತಿದ್ದರು. ಮದ್ಯಪಾನದ ಜತೆ ಗಾಂಜಾ ಸೇವನೆ ಸಹ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದರ ಪರಿಣಾಮ ಕಿಕ್​ ಜೋರಾಗಿ ಅಪಾರ್ಟ್‌ಮೆಂಟ್‌ನ 33 ನೇ ಮಹಡಿಯ ಬಾಲ್ಕನಿಯಿಂದ ದಿಪಾಂಶು ಶರ್ಮಾ ಬಿದ್ದು ಮೃತಪಟ್ಟಿದ್ದಾನೆ. ಮೃತ ದಿಪಾಂಶು ಶರ್ಮಾ ಉತ್ತರ ಪ್ರದೇಶ ಮೂಲದವನಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ಭಾರತೀಯ ಸೇನೆಯ ಸಿಬ್ಬಂದಿಯೊಬ್ಬರ ಮಗನಾಗಿದ್ದು ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದ. ಸ್ಥಳಕ್ಕೆ ಕೆ.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ