ನ್ಯೂಸ್

ಸಕ್ಕರೆ ಕಾರ್ಖಾನೆಯಲ್ಲಿ ದುರಂತ; 19 ವರ್ಷದ ಕಾರ್ಮಿಕ ಮೃತ್ಯು

ಹಾವೇರಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಮಗನ ಒಡೆತನದ ಸಕ್ಕರೆ ಕಾರ್ಖಾನೆಯ ಬೆಲ್ಟ್​​ಗೆ ಸಿಲುಕಿ 19 ವರ್ಷದ ಕಾರ್ಮಿಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಕಬ್ಬಿನ ಪುಡಿ ತುಂಬುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಯಾವುದೇ ಸುರಕ್ಷಾ ಕ್ರಮ ಅಳವಡಿಸದ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೋಣನಕೇರಿ ಎಂಬಲ್ಲಿರುವ ವಿವೇಕ ಹೆಬ್ಬಾರ್ ಒಡೆತನದ ಸಕ್ಕರೆ ಕಾರ್ಖಾನೆ ಇದಾಗಿದೆ. 

ಶಿಗ್ಗಾವಿ ತಾಲೂಕಿನ ದುಂಢಸಿಯ ಎಂಬಲ್ಲಿಯ ನವೀನ ಬಸಪ್ಪ ಚಲವಾದಿ(19) ಮೃತಪಟ್ಟ ಕಾರ್ಮಿಕ. ಸದ್ಯ ಘಟನೆಯ ಬಗ್ಗೆ ಕಾರ್ಖಾನೆ ಮಾಲೀಕ ಸೇರಿ ಆರು ಜನರ ವಿರುದ್ಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.