ನ್ಯೂಸ್

ಹೆದರಿದ ಹುಲಿ ಮರಿಗೆ ಬೆಕ್ಕಿನ ಮರಿಯಂತೆ ಸಮಾಧಾನ ಮಾಡಿದ ಯುವಕ: Video Viral

Video Viral: ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ವಿಶೇಷ ಬಾಂಧವ್ಯ, ಪ್ರೀತಿಯನ್ನು ನಾವು ಹಲವಾರು ವಿಡಿಯೋಗಳಲ್ಲಿ ನೋಡಿರುತ್ತೇವೆ. ಆದರೆ ಇಲ್ಲೊಂದು ಮೃಗಾಲಯದಲ್ಲಿ ಮನಕಲಕುವ ಭಾವನಾತ್ಮಕ ಘಟನೆ ನಡೆದಿದೆ. ಹೆದರಿದ ಹುಲಿ ಮರಿಯನ್ನು ಎತ್ತುಕೊಂಡು ಸಮಾಧಾನ ಮಾಡಿದ ಯುವಕನ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​​ ವೈರಲ್​​ ಆಗಿದೆ.

ಪುಟ್ಟ ಹುಲಿ ಮರಿಯ ಮುದ್ದಾದ ವಿಡಿಯೋ ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಈ ವಿಡಿಯೋಗೆ ಫುಲ್​​ ಫಿದಾ ಆಗಿದ್ದಾರೆ.

ವಿಡಿಯೋದಲ್ಲಿ ಮೃಗಾಲಯ ಕೀಪರ್ ಹೆದರಿದ ಹುಲಿಮರಿಯನ್ನು ಎತ್ತಿಕೊಂಡು, ಸಮಾಧಾನ ಪಡಿಸುತ್ತಿರುವುದನ್ನು ನಾವು ನೋಡಬಹುದು. ಆ ವ್ಯಕ್ತಿ ಮರಿ ಹುಲಿಯನ್ನು ಬೆಕ್ಕಿನ ಮರಿಯ ರೀತಿ ಎತ್ತುಕೊಂಡು ಮುದ್ದಾಡಿರುವುದು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.

ನೆಟ್ಟಿಗರು ಹೇಳಿದ್ದೇನು? ಒಬ್ಬ ನೆಟ್ಟಿಗ, "ಯಾರಾದರೂ ಅವನಿಗೆ ಅದು ಹುಲಿ ಎಂದು ಹೇಳಿ" ಎಂದು ಹೇಳಿದರೆ, ಮತ್ತೊಬ್ಬರು "ಬೆಕ್ಕಾಗಿ ಹುಟ್ಟಿ, ಹುಲಿಯಾಗಲು ಒತ್ತಾಯಿಸಲಾಯಿತು" ಎಂದು ಕಾಮೆಂಟ್​​​ ಮಾಡಿದ್ದಾರೆ. ಈ ವಿಡಿಯೋವನ್ನು 'GoodPawAwws' ಹ್ಯಾಂಡಲ್ ಮೂಲಕ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ 459K ಜನರು ಲೈಕ್‌ಗಳನ್ನು ಪಡೆದಿದೆ. (ಏಜೆನ್ಸೀಸ್​)