ನ್ಯೂಸ್

150 ಅಡಿ ಟವರ್​ ಏರಿದ ಯುವಕ: ಕೆಳಗಿಳಿಸಲು ರಾತ್ರಿಯಿಡೀ ಕಾದು ಕುಳಿತ ಅಧಿಕಾರಿಗಳು, ಮುಂದೆ ಆಗಿದ್ದಿಷ್ಟು..

ಚಂದ್ವಾರ: ಯುವಕನೊಬ್ಬ 150 ಅಡಿ ಎತ್ತರದ ಮೊಬೈಲ್ ಟವರ್ ಹತ್ತಿ ಹೈವೋಲ್ವೇಜ್ ಡ್ರಾಮಾ ಸೃಷ್ಟಿಸಿರುವ ಘಟನೆ ಮಧ್ಯಪ್ರದೇಶದ ಚಂದ್ವಾರದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎಸ್‌ಡಿಆರ್‌ಎಫ್ ತಂಡದೊಂದಿಗೆ ತಲುಪಿದ್ದು ಆತನನ್ನು ಕೆಳಗಿಳಿಸಲು ಅಧಿಕಾರಗಳು ಹರಸಾಹಸವನ್ನೇ ಪಟ್ಟಿದ್ದಾರೆ.

ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಯುವಕರನ್ನು ಕೆಳಗಿಳಿಸುವಂತೆ ಪದೇ ಪದೇ ಕೇಳಿದರೂ ಆತ ಇಳಿಯಲು ನಿರಾಕರಿಸಿದ್ದು, ನಂತರ ಎಸ್‌ಡಿಆರ್‌ಎಫ್ ಸಿಬ್ಬಂದಿ ಟವರ್ ಹತ್ತಲು ಮುಂದಾಗಿದ್ದಾರೆ. ಆದರೆ ಯಾರಾದರೂ ತನ್ನನ್ನು ಕೆಳಗಿಳಿಸಲು ಹತ್ತಿದರೆ ಟವರ್‌ನಿಂದ ಜಿಗಿಯುತ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ. ಸೋಮವಾರ ಮಧ್ಯಾಹ್ನವೇ ಟವರ್​ ಹತ್ತಿದ್ದ ಯುವಕ ಸುಮಾರು 10 ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳಿಗೆ ತೊಂದರೆ ನೀಡಿದ್ದು, ಕೊನೆಗೆ ಇಂದು ಮುಂಜಾನೆ 3.30 ಸುಮಾರಿಗೆ ಟವರ್‌ನಿಂದ ಕೆಳಗಿಳಿದಿದ್ದಾನೆ.

ಯುವಕನು ಸ್ಥಳೀಯ ದಾಸನವಾಡದ ಗ್ರಾಮದವನು ಎಂದು ಹೇಳಲಾಗುತ್ತಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಯುವಕ ಟವರ್​ ಹತ್ತಿದ್ದ ಕಾರಣವನ್ನು ಇದುವರೆಗೂ ಯಾವುದೇ ನೀಡಿಲ್ಲ. ಯುವಕ ಡ್ರಗ್ಸ್ ಕೂಡ ಸೇವಿಸಿದ್ದು, ಕುಡಿದ ಅಮಲಿನಲ್ಲಿ ಟವರ್ ಏರಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯುವಕನ ಸಂಬಂಧಿಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.(ಏಜೆನ್ಸೀಸ್)