ಮಧುರೈ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕತ್ತಿ ಇರಿತಕ್ಕೆ ಒಳಗಾಗಿದ್ದ ಯುವಕನೊಬ್ಬ(Young Man) ಕತ್ತಿಯನ್ನು ಕೈಯ್ಯಲ್ಲಿಡಿದು ಆಸ್ಪತ್ರೆಗೆ ಬಂದಿದ್ದು, ಆತನನ್ನು ನೋಡಿದ ನರ್ಸ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿ ಓಡಿಹೋಗಿದ್ದಾರೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ವ್ಯಕ್ತಿಯನ್ನು ತನಿಖೆ ಮಾಡಲಾಗಿದೆ.
ಇದನ್ನೂ ಓದಿ: Triptii Dimri | ‘ಆ ನೋವಿನಿಂದ ಹೊರಬರಲು 3ದಿನ ಅತ್ತುಬಿಟ್ಟೆ’: ‘ಅನಿಮಲ್’ ಬಿಡುಗಡೆ ಬಳಿಕ ಆದ ಅನುಭವ ಬಿಚ್ಚಿಟ್ಟ ನಟಿ!
ಆಸ್ತಿ ವಿವಾದದ ಕಾರಣಕ್ಕೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಾರೈಕ್ಕುಡಿಯಲ್ಲಿ ಸಹೋದರರಾದ ಶಿವಪಾಂಡ್ಯನ್ ಮತ್ತು ಬೃಹದೀಶ್ವರನ್ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ(ಅ.7) ರಾತ್ರಿ ಬೃಹದೀಶ್ವರನ್ ಶಿವಪಾಂಡ್ಯನ ಮನೆಗೆ ತೆರಳಿ ಆಸ್ತಿ ವಿಚಾರವಾಗಿ ಜಗಳವಾಡಿದ್ದಾನೆ. ಇದರಿಂದ ಕುಪಿತನಾದ ಬೃಹದೀಶ್ವರನು ಶಿವಪಾಂಡ್ಯನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ.
ಇದರಿಂದ ಶಿವಪಾಂಡ್ಯನ ತಲೆ, ಕುತ್ತಿಗೆ, ಕೈಗೆ ಗಾಯಗಳಾಗಿವೆ. ಆದರೆ ಆತನ ಮೇಲೆ ದಾಳಿ ಮಾಡಿದ ಬೃಹದೀಶ್ವರನು ತನ್ನ ಕತ್ತಿಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾನೆ. ಇದಾದ ನಂತರ ಶಿವಪಾಂಡ್ಯನ್ ಕತ್ತಿಸಮೇತ ಆಸ್ಪತ್ರೆಗೆ ಹೋಗಿದ್ದಾನೆ. ಆದರೆ ಆತ ರಕ್ತ ಸುರಿಸಿಕೊಂಡು ಕತ್ತಿಯೊಂದಿಗೆ ಬಂದಿದ್ದನ್ನು ನೋಡಿದ ತಕ್ಷಣ ಅಲ್ಲಿದ್ದವರು ಭಯಭೀತರಾಗಿ ಓಡಿಹೋಗಿದ್ದಾರೆ. ಬಳಿಕ ವೈದ್ಯರು ಮತ್ತು ಸಿಬ್ಬಂದಿ ಆತನಿಗೆ ಇಚಕಿತ್ಸೆ ನೀಡಿ, ಪೊಲೀಸರಿಗೆ ತಿಳಿಸಿದ್ದಾರೆ.