ಹೈದರಾಬಾದ್: ಭಾವನೇ ಬೇಕು, ಅವನೇ ನನ್ನ ಸರ್ವಸ್ವ, ಮದುವೆಯಾಗುತ್ತೇನೆಂದು ಯುವತಿ ಹಠ ಹಿಡಿದಿದ್ದು, ಇದಕ್ಕೆ ತಂದೆ, ತಾಯಿ ಒಪ್ಪದಿದ್ದಾಗ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೈದರಾಬಾದ್ನ ಹಯಾತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಂದಿರಾ ಮೃತ ದುರ್ದೈವಿ. ಆಕೆಯ ಅಕ್ಕ ಮದುವೆಯಾದ ದಿನದಿಂದ ಆಕೆ ಗಂಡ(ಭಾವ)ನನ್ನು ಪ್ರೀತಿಸುತ್ತಿದ್ದಳು. ಕಡೆಗೆ ವಯಸ್ಸಾಯ್ತು, ಮದುವೆಯಾಗೆಂದು ಪಾಲಕರು ಹೇಳಿದಾಗ ಭಾವನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದರಿಂದ ಆಘಾತಕ್ಕೊಳಗಾದ ಪಾಲಕರು ಹಿರಿಮಗಳ ಬಾಳು ಹಾಳಾಗುತ್ತದೆ ಎಂದು ನಿರ್ಧಾರ ಬದಲಿಸಲು ಹೇಳಿದ್ದರು.
ತಂದೆ ತಾಯಿ ವಿರೋಧದಿಂದ ತಲೆಕೆಡಿಸಿಕೊಂಡಿದ್ದ ಇಂದಿರಾ ಮನೆಯವರು ತಾನು ಪ್ರೀತಿಸಿದ ಭಾವನೊಂದಿಗೆ ಮದುವೆ ಮಾಡಿಸಲ್ಲ ಎಂದು ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.