ನ್ಯೂಸ್

ಎಲೆಕ್ಟ್ರಿಕ್ ಟ್ರ್ಯಾಕ್ಟರ್ ತಯಾರಿಸಿದ ಯುವ ಇಂಜಿನಿಯರ್; ಕಡಿಮೆ ವೆಚ್ಚ.. ಹೆಚ್ಚು ಕೆಲಸ

Webdesk - Savina Naik

- ಪೂರ್ತಿ ಚಾರ್ಜ್ ಮಾಡಿದರೆ..ನಾಲ್ಕು ಗಂಟೆ ಕೆಲಸ ಮಾಡುತ್ತೆ ಈ ಟ್ರ್ಯಾಕ್ಟರ್

ತೆಲಂಗಾಣ: ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಕೃಷಿ ಸಂಪೂರ್ಣವಾಗಿ ತಾಂತ್ರಿಕವಾಗಿದೆ. ಟ್ರ್ಯಾಕ್ಟರ್‌ಗಳ ಆಧಾರದ ಮೇಲೆ ಕೃಷಿ ನಡೆಯುತ್ತಿದೆ. ಆದರೆ ಡೀಸೆಲ್ ಬೆಲೆ ಏರಿಕೆಯಿಂದ ರೈತರಿಗೆ ಟ್ರ್ಯಾಕ್ಟರ್‌ ಬಳಕೆ ಮಾಡುವುದು ಕಷ್ಟವಾಗುತ್ತಿದೆ. ಯುವ ಇಂಜಿನಿಯರ್ ಒಬ್ಬರು ಡೀಸೆಲ್ ಟ್ರ್ಯಾಕ್ಟರ್ ಬದಲು...ಎಲೆಕ್ಟ್ರಿಕಲ್ ಟ್ರ್ಯಾಕ್ಟರ್ ತಯಾರಿಸಿ ತನ್ನ ಅದ್ಭುತ ಪ್ರತಿಭೆ ತೋರಿದ್ದಾರೆ.

ಪೆದ್ದಪಲ್ಲಿ ಜಿಲ್ಲೆಯ ನಗರಂ ಗ್ರಾಮದ ಮಂಥನಿ ಮಂಡಲದ ಮೂಲ್ ಶಶಿರತ್ ರೆಡ್ಡಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ. ಇವರ ತಂದೆ ಕೃಷಿ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಟ್ರಾಕ್ಟರ್ ಆಧಾರದ ಮೇಲೆ ಕೃಷಿ ನಡೆಯುತ್ತದೆ. ಟ್ರ್ಯಾಕ್ಟರ್‌ಗೆ ವೆಚ್ಚವಾಗುತ್ತದೆ ಹೀಗಾಗಿ ಎಲೆಕ್ಟ್ರಿಕಲ್ ಟ್ರ್ಯಾಕ್ಟರ್ ತಯಾರಿಸುವ ಚಿಂತನೆ ನಡೆಸಿದ್ದರು. ಮೂಲ್ ಶಶಿರತ್ ರೆಡ್ಡಿ ಅವರ ಈ ಹೊಸ ಕಾರ್ಯಕ್ಕೆ ಅವರ ತಂದೆಯೂ ಸಹಕರಿಸಿದ್ದಾರೆ.

ಈ ಟ್ರ್ಯಾಕ್ಟರ್ ತಯಾರಿಕೆಗೆ ನಾಲ್ಕು ಲಕ್ಷ ಖರ್ಚು ಮಾಡಲಾಗಿದೆ. ಟ್ರ್ಯಾಕ್ಟರ್​ನಲ್ಲಿ, 32 ಸಣ್ಣ ಲಿಥಿಯಂ ಫಾಸ್ಫೇಟ್ ಬ್ಯಾಟರಿಗಳು, ಸ್ಮಾರ್ಟ್ ಕಂಟ್ರೋಲರ್, 20 ಎಚ್ ಪಿ ಮೋಟಾರ್ ಫಿಕ್ಸ್ ಮಾಡಲಾಗಿದೆ. ಒಮ್ಮೆ ಬ್ಯಾಟರಿಯನ್ನು ಹಾಕಿದರೆ 12 ವರ್ಷಗಳವರೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಟ್ರಾಕ್ಟರ್ 4 ಗಂಟೆಗಳ ಕಾಲ ಚಲಿಸುತ್ತದೆ. ನಾಲ್ಕು ಗುಂಟೆಯಲ್ಲಿ ನಾಲ್ಕು ಎಕರೆ ಭೂಮಿಯನ್ನು ಉಳುಮೆ ಮಾಡಲು ಸಾಧ್ಯವಾಗುತ್ತದೆ. ಈ ಟ್ರ್ಯಾಕ್ಟರ್ ಬಳಸಿ ಉಳುಮೆ ಮಾಡಿದರೆ ಕೇವಲ 150 ರೂ. ಎಕರೆಗೆ ಖರ್ಚಾಗಬಹುದು ಎನ್ನಲಾಗಿದೆ. ಈ ಟ್ರ್ಯಾಕ್ಟರ್ ನೋಡಲು ರೈತರು ಬರುತ್ತಿದ್ದಾರೆ.

ಶಶಿರಥರೆಡ್ಡಿ ಇದೇ ರೀತಿಯ ಟ್ರ್ಯಾಕ್ಟರ್​​ಗಳನ್ನು ತಯಾರಿಸಲು ಮುಂದಾಗಿದ್ದಾರೆ. ಆದರೆ ಸರಕಾರದಿಂದ ಅನುಮತಿ ಪಡೆಯಬೇಕು. ಈ ಟ್ರ್ಯಾಕ್ಟರ್​​ನ್ನು ಅಧಿಕಾರಿಗಳು ಈಗಾಗಲೇ ನೋಡಿದ್ದಾರೆ. ಈ ಯುವ ಇಂಜಿನಿಯರ್​ಗೆ ಆಗಸ್ಟ್ 15ರಂದು ಪೆದ್ದಪಲ್ಲಿ ಜಿಲ್ಲಾಧಿಕಾರಿಗಳು ಪ್ರಶಂಸನಾ ಪತ್ರ ನೀಡಿದರು.

ಇಂತಹ ಟ್ರ್ಯಾಕ್ಟರ್​​ಗಳನ್ನು ಸಾಗುವಳಿಗೆ ಬಳಸಿದರೆ ರೈತರಿಗೆ ಬಂಡವಾಳ ಕಡಿಮೆಯಾಗಿ ಗಣನೀಯ ಲಾಭವಾಗುತ್ತದೆ. ಇಂತಹ ಯುವ ಇಂಜಿನಿಯರ್​​ಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕೆಂದು ರೈತರು ಹೇಳಿದ್ದಾರೆ.