

ಬೆಂಗಳೂರು: ಸ್ಯಾಂಡಲ್ವುಡ್ನ ಸ್ಟಾರ್ ಹೀರೋ ಧ್ರುವ ಸರ್ಜಾ 2 ನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷ 2022ರ ಅಕ್ಟೋಬರ್ ನಲ್ಲಿ ಹೆಣ್ಣು ಮಗುವನ್ನು ಜೀವನದಲ್ಲಿ ಬರಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಎರಡನೇ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿಸುದ್ದಿಯನ್ನು ವರಮಹಾಲಕ್ಷ್ಮಿ ಹಬ್ಬದಂದು ಒಂದು ಸುಂದರ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ತಮ್ಮ ಕುಟುಂಬಕ್ಕೆ ಮತ್ತೊಂದು ಸರ್ಜಾ ಕುಡಿಯ ಆಗಮನ ಆಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸಂಬಂಧ ಪತ್ನಿ ಹಾಗೂ ಮಗಳೊಂದಿಗೆ ಧ್ರುವ ಸರ್ಜಾ ಅವರು ಒಂದು ಮುದ್ದಾದ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಧ್ರುವ ಸರ್ಜಾ ಪತ್ನಿ ಪ್ರೇರಣಾ ಈಗ ಎಂಟು ತಿಂಗಳ ತುಂಬು ಗರ್ಭಿಣಿ. ಎರಡನೇ ಬಾರಿ ತಂದೆ-ತಾಯಿಯಾಗುತ್ತಿರುವ ಖುಷಿಯಲ್ಲಿರೋ ಧ್ರುವ ದಂಪತಿ ಸೆಪ್ಟೆಂಬರ್ ಎರಡನೇ ವಾರ ಅಥವಾ ಮೂರನೇ ವಾರ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿ ಧ್ರುವ ಸರ್ಜಾ ಮನೆಯಲ್ಲೂ ಮನೆ ಮಾಡಿದ್ದು, ಇಡೀ ಕುಟುಂಬ ಮನೆಗೆ ತಮ್ಮ ಕುಡಿಯನ್ನು ಆಗಮನ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.
2019ರ ನವೆಂಬರ್ 24ರಂದು ಬೆಂಗಳೂರು ಮೂಲದ ಪ್ರೇರಣಾ ಶಂಕರ್ ಜೊತೆ ಧ್ರುವ ಸರ್ಜಾ ವಿವಾಹವಾಗಿದ್ದರು. ಸದ್ಯ ಧ್ರುವ ಸರ್ಜಾ ಪ್ರೇಮ್ ಜೊತೆಗೆ ಕೆಡಿ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.