ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಗುರುವಾರ(ಡಿ.12)ರಂದು ನಡೆದ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೇ ಜೋತಿಷಿ ಸಲಹೆ ಗುಟ್ಟಿನ ಮೇಲೆ ಒಂದು ಸ್ವಾರಸ್ಯ ಚರ್ಚೆ ನಡೆಯಿತು.
ಹೌದು, ಡಿಸಿಎಂ ಡಿಕೆಶಿ ಮಾತನಾಡಿದ ಬಳಿಕ ಮಾತನಾಡಿದ ಆರ್.ಅಶೋಕ, ಅಧಿಕಾರ ಸಿಗದಿದ್ದರೆ ಒದ್ದು ಕಿತ್ತುಕೊಳ್ಳಬೇಕು ಎಂದಿದ್ದೀರಿ. ಇಲ್ಲಿರುವವರಿಗೆಲ್ಲಾ ಅದೇ ಪಾಠವೇ? ಈಗ ಮುಖ್ಯಮಂತ್ರಿ ಪದವಿಯನ್ನು ನೀವು ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಿ? ನಿಮಗೆ ಜೋತಿಷ್ಯ ಹೇಳುವವರು ನನಗೂ ಪರಿಚಯ. ಜನವರಿಯೊಳಗೆ ಸಿಎಂ ಆದರೆ ನೀವು ಸಿಎಂ(CM) ಆಗುತ್ತೀರಾ ಇಲ್ಲದಿದ್ದರೆ ಇಲ್ಲ ಎಂದು ಹೇಳಿರುವುದಾಗಿ ಅವರೇ ನನಗೆ ಹೇಳಿದ್ದಾರೆ. ಜನವರಿಯೊಳಗೆ ನಂತರ ನಿಮ್ಮ ಗ್ರಹಗತಿ ಇಲ್ಲ. ಹೀಗಾಗಿ ಆದಷ್ಟು ಬೇಗ ನಿಮ್ಮ ರೋಷ ತೋರಿಸಿ ಅಧಿಕಾರ ಕಿತ್ತುಕೊಳ್ಳಿ ಎಂದು ಡಿಕೆಗೆ ಹೇಳಿದರು.
ಇದನ್ನೂ ಓದಿ: ಪ್ರತಿ ಬಾರಿ ಇದನ್ನೇ ಮಾಡ್ತೀರಾ… ಗೆಳೆಯನ ವಿರುದ್ಧ ತಿರುಗಿಬಿದ್ದ ಗೆಳತಿ; Bigg Boss ಮನೆಯಲ್ಲಿ ಅಷ್ಟಕ್ಕೂ ನಡೆದಿದ್ದಾರೂ ಏನು?
ಇದಕ್ಕೆ ಉತ್ತರಿಸಿದ ಶಿವಕುಮಾರ್, “ಅದೇ ಜೋತಿಷಿ ಸಲಹೆ ಕೇಳಿ ನಾವು ಕೃಷ್ಣ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೆವು. ನಾನು ಮಂತ್ರಿ ಶಾಸಕ ಆಗದಿದ್ದಾಗಲೇ ಆ ಜೋತಿಷಿ ಅವರು ನಿನಗೆ ಟಿಕೆಟ್ ನಿರಾಕರಣೆಯಾಗುತ್ತದೆ, ನೀನು ಇಷ್ಟ ಬಾರಿ ಶಾಸಕನಾಗುತ್ತೀಯಾ, ಮಂತ್ರಿಯಾಗುತ್ತೀಯಾ ಎಂದು ಹೇಳಿದ್ದಾರೆ. ನನಗೆ ಯಾವಾಗ ಯಾವ ಸ್ಥಾನ ಸಿಗಲಿದೆ” ಎಂದು ಹೇಳಿದ್ದರು.
ಅಶೋಕ್ ಅವರೇ, ನಮ್ಮ ಜೋತಿಷಿ ನನಗೆ ಹೇಳಿರುವ ವಿಚಾರವನ್ನು ಇಲ್ಲಿ ಹೇಳಿದರೆ, ನಿಮ್ಮ ಕಡೆ ಕೂತಿರುವ 25 ಮಂದಿ, ನಮ್ಮ ಕಡೆಗೆ ಶಿಫ್ಪ್ ಆಗುತ್ತಾರೆ. ಹೀಗಾಗಿ ನಾನು ಆ ವಿಷಯವನ್ನು ಈಗ ಮಾತನಾಡುವುದಿಲ್ಲ ಎಂದಾಗ ಸದನ ನಗೆಗಡಲಲ್ಲಿ ತೇಲಿತು.