ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿತ್ರದಲ್ಲಿ ಹಾವನ್ನು ಗುರುತಿಸುವುದು ನೆಟ್ಟಿಗರ ಫೇವರಿಟ್ ಟಾಸ್ಕ್ ಆಗಿದೆ. ಹಾವುಗಳೇ ಹಾಗೇ ಆಹಾರಕ್ಕಾಗಿ ಸಂಚು ಹಾಕುವಾಗ ಯಾರಿಗೂ ಗೊತ್ತಾಗದಂತೆ ಅವಿತು ಕುಳಿತುಬಿಡುತ್ತವೆ. ಅದನ್ನು ತಿಳಿಯದೇ ಹಾವನ್ನು ತುಳಿದು ಕಚ್ಚಿಸಿಕೊಂಡವರಿಗೂ ಕಡಿಮೆಯೇನಿಲ್ಲ.
ಕೆಲವು ದಿನಗಳ ಹಿಂದೆ ಟ್ವಿಟರ್ ಬಳಕೆದಾರರೊಬ್ಬರು ಎಲೆಗಳ ರಾಶಿಗಳ ಇರುವ ಚಿತ್ರವೊಂದನ್ನು ಶೇರ್ ಮಾಡಿಕೊಂಡು, ಇದರಲ್ಲಿ ಹಾವಿದೆ ಗುರುತಿಸಿ ಸವಾಲು ಹಾಕಿದ್ದಾರೆ. ಮೊದಲಿಗೆ ನೋಡಿದವರಿಗೆ ಕಂದು ಬಣ್ಣದ ಎಲೆಗಳು ಭೂಭಾಗವನ್ನು ಆಕ್ರಮಿಸಿರುವಂತೆ ಕಾಣುತ್ತದೆ. ನೀವೇನಾದರೂ ಬಹಳ ಸೂಕ್ಷ್ಮದಿಂದ ನೋಡಿದರೆ ಎಲೆಗಳ ನಡುವೆ ಸಣ್ಣದೊಂದು ಹಾವು ಕಾಣುತ್ತದೆ.
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್: ಈ ಚಿತ್ರಗಳಲ್ಲಿರುವ ಪ್ರಾಣಿಗಳನ್ನು ಗುರುತಿಸಿದ್ರೆ ನಿಮಗೆ ಫುಲ್ ಮಾರ್ಕ್ಸ್!
ಸದ್ಯ ಈ ಫೋಟೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಾವೇನು ಕಡಿಮೆ ಇಲ್ಲ ಎಂಬಂತೆ ಅನೇಕ ನೆಟ್ಟಿಗರು ಚಿತ್ರಕ್ಕೆ ರೌಂಡ್ ಮಾರ್ಕ್ ಮಾಡಿ ಹಾವನ್ನು ಪತ್ತೆ ಹಚ್ಚಿರುವುದಾಗಿ ಕಾಮೆಂಟ್ ಬಾಕ್ಸ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ನಿಮಗೂ ಗೊತ್ತಿದ್ದರೆ ನೀವೂ ಸಹ ಕಾಮೆಂಟ್ ಮಾಡಬಹುದು. (ಏಜೆನ್ಸೀಸ್)