ನ್ಯೂಸ್

ನೀವು ಚಾಕಲೇಟ್​ ಪ್ರಿಯರೇ! ಹಾಗಿದ್ದರೆ ಈ ರೆಸಿಪಿ ಟ್ರೈ ಮಾಡಿ Chocolate Pudding Dessert

Chocolate Pudding Dessert: ಇಂದಿನ ದಿನಗಳಲ್ಲಿ ಅನೇಕರು ಚಾಕಲೇಟ್​ ಪ್ರಿಯರಿರುತ್ತಾರೆ. ಪ್ರತಿನಿತ್ಯ ಕಡಿಮೆ ಬೆಲೆಯಿಂದ ಹೆಚ್ಚಿನ ಬೆಲೆಯಿರುವಂತಹ ಚಾಕಲೇಟ್​ಗಳನ್ನು ಸೇವಿಸುತ್ತಾರೆ. ಹಾಗೆಯೇ ಚಾಕಲೇಟ್​ ಪದಾರ್ಥಗಳನ್ನು ಆದಷ್ಟು ತಿನ್ನಲು ಬಯಸುತ್ತಾರೆ. ಹಾಗಾಗಿ ಅವರಿಗೆಂದೇ ಈ ರೀತಿಯ ಡೆಸರ್ಟ್​ ಮಾಡುವುದನ್ನು ತೋರಿಸುತ್ತಿದ್ದೇವೆ. ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಸೇವಿಸಿ..

ಬೇಕಾಗುವ ಪದಾರ್ಥಗಳು

* ಅರ್ಧ ಲೀಟರ್​ ಹಾಲು

* 1/2 ಕಪ್​ ಸಕ್ಕರೆ

* 1/4 ಕಪ್​ ಕೋಕೋ ಪೌಡರ್​

* ಉಪ್ಪು

* 1 ಚಮಚ ವ್ಯನಿಲಾ ಎಸೆನ್ಸ್

* 2 ಚಮಚ ಬೆಣ್ಣೆ

* ಚಾಕಲೇಟ್​ ಬಾರ್​

ಮಾಡುವ ವಿಧಾನ

ಮೊದಲು ಒಂದು ಬಟ್ಟಲನ್ನು ತೆಗೆದುಕೊಳ್ಳಿ ಅದಕ್ಕೆ ಸಕ್ಕರೆ, ಕೊಕೋ ಪೌಡರ್, ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ. ನಂತರ ಚಾಕಲೇಟ್​ ಚಿಪ್ಸ್​ ಸೇರಿಸಿ ಸ್ವಲ್ಪ ಹಾಲು ಸೇರಿಸಿ ಮಿಶ್ರಣ ಮಾಡಿ. ಇದಾದ ಬಳಿಕ ಉಳಿದ ಹಾಲಿನ್ನು ಬಿಸಿ ಮಾಡಿ. ಇದನ್ನು ಮಾಡಿಟ್ಟುಕೊಂಡಿರುವ ಮಿಶ್ರಣಕ್ಕೆ ಸೇರಿಸಿ ಮಧ್ಯಮ ಉರಿಯಲ್ಲಿ 3 ನಿಮಿಷ ಬೇಯಿಸಿರಿ. ನಂತರ, ಇದಕ್ಕೆ ವೆನಿಲ್ಲಾ ಎಸೆನ್ಸ್​ ಮತ್ತು ಬೆಣ್ಣೆಯನ್ನು ಸೇರಿಸಿರಿ. ಇದಾದ ನಂತರ, ರೆಡಿಯಾದ ಮಿಶ್ರಣವನ್ನು ಚಿಕ್ಕ ಚಿಕ್ಕ ಬೌಲ್​ಗಳಿಗೆ ತುಂಬಿ 2 ಗಂಟೆ ಫ್ರಿಜ್​ನಲ್ಲಿಡಿ ಇದಾದ ನಂತರ ಸೇವಿಸಿರಿ.. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ