ಜಿಲ್ಲೆಯಲ್ಲಿ ಮಳೆಯ ಆರ್ಭಟ / ಕೋಡಿ ಬಿದ್ದ ಕರೆಗಳು / ರಾಜಕಾಲುವೆಗಳ ಅವ್ಯವಸ್ಥೆಯಿಂದ ರೈತರ ಜಮೀನುಗಳಿಗೆ ನುಗ್ಗುವ ನೀರು / ಕೋಡಿಗಳ ಮೇಲೆ ರಸ್ತೆ ದುರಸ್ಥಿಕಾಣದೆ ವಾಹನ ಸವಾರರ ಪರದಾಟ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಾದ್ಯಂತ ಕಳೆದ ೨ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಹಲವು ಕೆರೆಗಳು ಕೋಡಿ ಬಿದ್ದಿದ್ದು, ಮಳೆಯಿಂದಾಗಿ ತರಕಾರಿ ಬೆಳೆಗಳು ಸೇರಿದಂತೆ ರೈತರ ಜಮೀನುಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ಕೆಲವು ಕೋಡಿಗಳ ಮೇಲೆ ರಸ್ತೆಗಳು ಇರುವುದರಿಂದ ಕೋಡಿ ಮೇಲಿನ ರಸ್ತೆಗಳು ದುರಸ್ಥಿ ಕಾರಣದೆ ಇರುವದರಿಂದ ಕೋಡಿ ನೀರು ಹರಿಯುತ್ತಿರುವುದರಿಂದ ಕೋಡಿ ಮೇಲೆ ಹಳ್ಳಬಳು ಬಿದ್ದಿದ್ದು, ವಾಹನ ಚಾಲಕರಿಗೆ ನೀರಿನಲ್ಲಿ ಹಳ್ಳಗಳು ಕಾಣದೆ ಹೋಗಿದ್ದು, ಕೋಡಿಗಳ ಮೇಲಿನ ರಸ್ತೆಗಳಲ್ಲಿ ಸಂಚರಿಸಲು ವಾಹನ ಚಾಲಕರಿಗೆ ಪರದಾಟ ಉಂಟಾಗಿದೆ.

ಮುದುವಾಡಿ ಕೆರೆ ೨ನೇ ಬಾರಿಗೆ ಕೋಡಿ ಬಿದ್ದಿದ್ದು, ಕೋಲಾರ ಶ್ರೀನಿವಾಸಪುರ ಮುಖ್ಯರಸ್ತೆಯಲ್ಲಿ ಕೆರೆಯ ಎರಡು ಕೋಡಿಗಳಿದ್ದು, ಒಂದು ಕೋಡಿಗೆ ಪ್ಲೇಓವರ್ ನಿರ್ಮಾಣ ಮಾಡಲಾಗಿದೆ. ಮತ್ತೊಂದು ಕೋಡಿಯ ಮೇಲೆಯೇ ವಾಹನಗಳು ಓಡಾಡಬೇಕಾಗಿದೆ. ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಇದಾಗಿರುವುದರಿಂದ ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ.

ಕೋಡಿ ಮೇಲಿನ ರಸ್ತೆಯಲ್ಲಿ ಮೊಣಕಲುದ್ದದ ಗುಂಡಿಗಳು ಬಿದ್ದಿರುವುದರಿಂದ ಶುಕ್ರವಾರ ರಾತ್ರಿಯಿಂದ ಕೋಡಿ ಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ ಒಂದು ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ದ್ವಿಚಕ್ರವಾಹನ ಹಾಗು ಕಾರುಗಳು ಗುಂಡಿಗಳಲ್ಲಿ ಸಿಕ್ಕಿಹಾಕಿಕೊಂಡು ನೀರು ಗಾಡಿಗಳ ಇಂಜಿನ್‌ಗಳ ಒಳಕ್ಕೆ ಪ್ರವೇಶ ಮಾಡುತ್ತಿವೆ. ವಾಹನಗಳು ಮಧ್ಯದಲ್ಲಿಯೇ ನಿಂತುಹೋಗಿ ತಳ್ಳುವಂತೆ ಆಗುತ್ತಿದೆ.

ಕೋಡಿ ಬೀಳುವ ಮೊದಲೇ ವಿಜಯವಾಣಿ ರಸ್ತೆ ದುರಸ್ಥಿ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಕೋಡಿ ಬೀಳುವ ಒಂದು ದಿನ ಮೊದಲು ತೇಪೆ ಹಾಕುವ ಕೆಲಸ ಮಾಡಲಾಯಿತು. ತೇಪೆ ಹಆಕಿದ ಮರುದಿನವೇ ನೀರು ಹರಿದ ಕಾರಣ ಮತ್ತೆ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಪರದಾಡುವಂತೆ ಆಗಿದೆ.

ಕೆರೆಗೆ ಇತರೆ ಕೆರೆಗಳಿಂದ ಹಾಗೂ ಕೆ.ಸಿ.ವ್ಯಾಲಿ ನೀರು ಬೇರೆ ಬರುತ್ತಿರುವುದರಿಂದ ನೀರಿನ ಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೋಲಾರ ಶ್ರೀನಿವಾಸಪುರ ಸಂಪರ್ಕಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕಾಗುತ್ತದೆ. ಕೋಡಿಯಲ್ಲಿ ನೀರಿನ ಹರಿವಿನ ಪ್ರಮಾಣ ನೋಡಲು ಮತ್ತು ನೀರಿನಲ್ಲಿ ಆನಂದಿಸಲು ಸುತ್ತಮುತ್ತಲಿನ ಜನ ಮತ್ತೆ ಬರಲು ಮುಂದಾಗಿದ್ದಾರೆ. ಜೊತೆಗೆ ದ್ವಿಚಕ್ರ ವಾಹನ ಸವಾರರು ಮತ್ತು ಕಾರುಗಳಲ್ಲಿ ಪ್ರಯಾಣಿಸುವವರು ರಸ್ತೆಯ ಅಕ್ಕಪಕ್ಕದಲ್ಲಿ ಕಾರುಗಳನ್ನು ನಿಲ್ಲಿಸಿ ಕೋಡಿ ಜಾಗದಲ್ಲಿ ನಿಂತು ನೀರನ್ನು ನೋಡಲು ಆನಂದಿಸುತ್ತಿರುವುದರಿAದ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ಕೋಡಿ ಬಿದ್ದ ಕೆರೆಗಳು :

ಶ್ರೀನಿವಾಸಪುರ ತಾಲ್ಲೂಕಿನ ಪಾಪಿಶೆಟ್ಟಿಪಲ್ಲಿ, ದೊಡ್ಡಮ್ಮಲದೊಡ್ಡಿ, ಉಪ್ಪುಕುಂಟೆ, ಕೊಂಡಾಮರಿ ಮುಂತಾದ ಕೆರೆಗಳು ಕಳೆದ ರಾತ್ರಿ ಬಿದ್ದ ಮಳೆಗೆ ಕೋಡಿ ಬಿದ್ದಿವೆ. ಇದರ ಜೊತೆಗೆ ಜಿಲ್ಲೆಯಲ್ಲಿ ವಿವಿಧ ತಾಲ್ಲೂಕುಗಳಲ್ಲಿಯೂ ಅನೇಕ ಕೆರೆಗಳು ಕೋಡಿ ಬಿದ್ದಿವೆ. ಕೋಲಾರ ತಾಲ್ಲೂಕಿನ ಜನ್ನಘಟ್ಟ, ಎಸ್.ಅಗ್ರಹಾರ, ಚಿಲ್ಲಪ್ಪನಹಳ್ಳಿ ಕೆರೆಗಳು ಕೋಡಿ ಬಿದ್ದಿವೆ.

ರೈತರ ಜಮೀನುಗಳಿಗೆ ನೀರು :

ರಾಜಕಾಲುವೆಗಳ ದುರಸ್ಥಿ ಇಲ್ಲದೇ ಇರುವುದರಿಂದ ಕೋಡಿ ಹೋಗುವ ನೀರು ರಾಜಕಾಲುವೆಗಳು ಇಲ್ಲದೇ ಇರುವ ಕಾರಣ ರೈತರ ತೋಟ ಮತ್ತು ಜಮೀನುಗಳಿಗೆ ನೀರು ನುಗ್ಗುವಂತೆ ಆಗಿದ್ದು, ಇದರಿಂದ ರೈತರ ಫಸಲಿಗೆ ಧಕ್ಕೆ ಉಂಟಾಗಿದೆ.

ಚಿತ್ರ ೧೧ ಕೆ.ಎಲ್.ಆರ್. ೦೨ ಕೋಲಾರ ತಾಲ್ಲೂಕು ಮುದುವಾಡಿ ಕೆರೆ ೨ನೇ ಬಾರಿಗೆ ಕೋಡಿ ಹರಿದಿದ್ದು, ರಸ್ತೆಯಲ್ಲಿಯೇ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತೆ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net