ಹೈದರಾಬಾದ್: ತೆಲಂಗಾಣದ ಹೈದರಾಬಾದ್ನಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಟಿಆರ್ಎಸ್, ಎಐಎಂಐಎಂ ಮತ್ತು ಬಿಜೆಪಿ ಪಕ್ಷಗಳು ನಗರದಲ್ಲಿ ಚುನಾವಣಾ ಪ್ರಚಾರ ಮುಂದುವರಿಸಿವೆ. ಬಿಜೆಪಿ ಪರವಾಗಿ ಪ್ರಚಾರಕ್ಕೆ ಬಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ, ಹೈದರಾಬಾದ್ನ ಹೆಸರನ್ನು ಬದಲಾಯಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಅತ್ತೆ ಮನೆಯಲ್ಲಿದ್ದ ಅಳಿಯನಿಗೆ ನಾದಿನಿ ಮೇಲೆ ಪ್ರೀತಿ; ತಂಗಿಯೊಡನೆ ಕಾಲ್ಕಿತ್ತ ಪತಿರಾಯ
ನಾವು ಫೈಜಾಬಾದ್ ಅನ್ನು ಅಯೋಧ್ಯೆಯಾಗಿ ಮರುನಾಮಕರಣ ಮಾಡಿದ್ದೇವೆ. ಅಲಹಾಬಾದ್ನ್ನು ಪ್ರಯಾಗ್ರಾಜ್ ಮಾಡಿದ್ದೇವೆ. ಹಾಗಿದ್ದ ಮೇಲೆ ಹೈದರಾಬಾದ್ ಹೆಸರನ್ನು ಬದಲಾಯಿಸಲು ಏಕೆ ಸಾಧ್ಯವಿಲ್ಲ. ಒಂದು ವೇಳೆ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ನ್ನು ಭಾಗ್ಯನಗರವಾಗಿ ಬದಲಾಯಿಸುತ್ತೇವೆ ಎಂದು ಅವರು ಹೇಳಿದರು.
ಎಐಎಂಐಎಂನ ಮುಖ್ಯ ಭೂಮಿ ಎಂದು ಕರೆಸಿಕೊಳ್ಳುವ ಹೈದರಾಬಾದ್ನಲ್ಲಿ, ಎಂಐಎಂಐಎಂನ ವಿರುದ್ಧ ಸಾಕಷ್ಟು ದೂರನ್ನು ಯೋಗಿ ಮಾಡಿದ್ದಾರೆ. ಎಂಐಎಂಐಎಂ ಶಾಸಕ ಬಿಹಾರದಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಹಿಂದೂಸ್ಥಾನ ಎಂದು ಹೇಳಲಾಗುವುದಿಲ್ಲ ಎಂದರು. ಭಾರತ್ ಎಂದು ಪ್ರಮಾಣವಚನ ಸ್ವೀಕರಿಸಿದರು. ಅವರಿಗೆ ಬದುಕಲು ಹಿಂದೂಸ್ಥಾನವೇ ಬೇಕು ಆದರೆ ಪ್ರಮಾಣ ವಚನ ಸ್ವೀಕರಿಸಲು ಬೇಡ. ಇದು ಎಐಎಂಐಎಂನ ನಿಜವಾದ ಮುಖ ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್)