ಹಾಸನ: ಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳನ್ನು ಜಿಲ್ಲಾ ಆಯುಷ್ ಕಚೇರಿ ಆಯುಷ್ಮಾನ್ ಭಾರತ್ ಯೋಜನೆಯಡಿ ಆಯುರ್ವೇದ ಕ್ಷೇಮ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಿದೆ. ಈ ಕೇಂದ್ರಗಳಿಗೆ ಯೋಗ ತರಬೇತುದಾರರು ಮತ್ತು ಮಲ್ಟಿಪರ್ಪಸ್ ವರ್ಕರ್ ಹುದ್ದೆಗಳಿಗೆ ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗುತ್ತಿಗೆ ಅವಧಿ 11 ತಿಂಗಳದ್ದಾಗಿರುತ್ತದೆ. ಯೋಗ ತರಬೇತಿದಾರರು (ಪಾರ್ಟ್ ಟೈಂ), ಮಲ್ಟಿ ಪರ್ಪಸ್ ಹೆಲ್ತ್ ವರ್ಕರ್ಸ್ ತಲಾ ಮೂರು ಹುದ್ದೆಗಳಿವೆ. ಕ್ರಮವಾಗಿ ಆಯಾ ಹುದ್ದೆಗಳಿಗೆ 8000 ರೂ ಹಾಗೂ 10,300 ರೂ. ಮಾಸಿಕ ವೇತನ ಇರುತ್ತದೆ. ಎಸ್ಎಸ್ಎಲ್ಸಿ/ಪಿಯುಸಿ ಜತೆಗೆ ಆಯಾ ಕ್ಷೇತ್ರಗಳಲ್ಲಿನ ವಿಶೇಷ ಕೋರ್ಸ್ /ಅನುಭವ ಹೊಂದಿರಬೇಕು.
ಇದನ್ನೂ ಓದಿ: ಖಿನ್ನತೆಗೆ ಬಲಿಯಾದರೆ ಸುಶಾಂತ್? ಇವರ ಟ್ವಿಟರ್ ಕವರ್ ಪೇಜ್ನ ವರ್ಣಚಿತ್ರಕಾರನೂ ಗುಂಡಿಕ್ಕಿಕೊಂಡು ಸತ್ತಿದ್ದ!
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹಾಸನ ಮತ್ತು ವೆಬ್ಸೈಟ್ www.hassan.nic.in ಇಲ್ಲಿ ಪಡೆದು ಭರ್ತಿ ಮಾಡಿ ಖುದ್ದು ಅಥವಾ ಅಂಚೆ ಮೂಲಕ ಜೂನ್ 22 ರಂದು ಸಂಜೆ 4.30ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅದೇ ವೆಬ್ಸೈಟ್ ನೋಡಬಹುದು.