ನ್ಯೂಸ್

VIDEO | ದೇವಾಲಯದ ಹುಂಡಿಗೆ 1 ಲಕ್ಷ ರೂ. ಹಾಕಿದ ಬಿ.ಎಸ್. ಯಡಿಯೂರಪ್ಪ!

ಕೋಲಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ಅವರು ದೇವಾಲಯದ ಹುಂಡಿಗೆ ಒಂದು ಲಕ್ಷ ರೂಪಾಯಿ ಹಾಕಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕುರುಡುಮಲೆ ಗಣಪತಿಗೆ ಪ್ರಾರ್ಥನೆ, ಪೂಜೆ ಸಲ್ಲಿಸಲು ಹೋಗುವ ಮೊದಲು ದೇವಾಲಯದ ಹುಂಡಿಗೆ ಒಂದು ಲಕ್ಷ ರೂಪಾಯಿ ಕಾಣಿಕೆ ನೀಡಿದ್ದಾರೆ. ನಂತರ ದೇವರ ಪೂಜೆಯಲ್ಲಿ ಭಾಗಿಯಾಗಿ  ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.  ಕಾಂಗ್ರೆಸ್ ‌ವಿರುದ್ದ‌ ಜನಾಂದೋಲನಾ ಮಾಡಲು‌ ಚಾಲನೆ ನೀಡಿದರು.

ಗೌರಿ ಗಣೇಶ ಹಬ್ಬದ‌ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲು ಈಗಾಗಲೇ ಸಿದ್ದತೆಗಳನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಡಿಸಿಎಂ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಈಶ್ವರಪ್ಪ, ಮತ್ತಿರರು ಭಾಗಿಯಾಗಿದ್ದಾರೆ.