ನ್ಯೂಸ್

ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ: ಬಿಜೆಪಿ ಶಾಸಕ ಯತ್ನಾಳ್

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್​ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ತಿರುಗೇಟು ನೀಡಿದ್ದು, ನಮ್ಮನ್ನು ಟೀಕಿಸುವ ಭರದಲ್ಲಿ ನಿಮ್ಮ ಕಾಳಜಿಯನ್ನು ಮಾಡದೇ ಇರಬೇಡಿ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಯತ್ನಾಳ್​ ಮೂಲ ಕಾಂಗ್ರೆಸ್ಸಿಗರು ನಿಮ್ಮನ್ನು ಹೊರಗೆ ಹಾಕಲು ಸಂಚು ರೂಪಿಸುತ್ತಿರುವಂತೆ ಇದೆ ನೋಡಿಕೊಳ್ಳಿ ಎಂದು ಎಚ್ಚರಿಸಿದ್ದಾರೆ.

ಸಾರ್ ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿಯನ್ನು ಭದ್ರವಾಗಿಸಿಕೊಳ್ಳಿ, ನಮ್ಮನ್ನು ಗಮನಿಸುವ ಭರದಲ್ಲಿ ನಿಮ್ಮ ಕಾಳಜಿ ಮಾಡದೇ ಇರಬೇಡಿ. ಹಾಗಿರಲಿ, ಬಿಕೆ ಹರಿಪ್ರಸಾದ್ ಯಾರೋ ಹೊರಗಿನ ಬಂದವರು ಅಂತ ಬೈತಿದ್ದು ಟಿವಿಯಲ್ಲಿ ನೋಡಿದೆ. ಮೂಲ ಕಾಂಗ್ರೆಸ್ಸಿಗರು ನಿಮ್ಮನ್ನು ಹೊರಗೆ ಹಾಕಲು ಸಂಚು ರೂಪಿಸುತ್ತಿರುವಂತೆ ಇದೆ ನೋಡಿಕೊಳ್ಳಿ.