Recipe: ನುಗ್ಗೆಕಾಯಿಯಲ್ಲಿ ಪೋಷಕಾಂಶಗಳ ಮಟ್ಟ ಹೆಚ್ಚಾಗಿರುತ್ತದೆ. ಇದರಲ್ಲಿ ವಿಟಮಿನ್ ಎ,ಸಿ, ಇ,ಕ್ಯಾಲ್ಸಿಯಂ, ಕಬ್ಬಿಣ , ಪೊಟ್ಯಾಸಿಯಂನಂತಹ ಅನೇಕ ಪೌಷ್ಟಿಕಾಂಶಗನ್ನು ಹೊಂದಿರುತ್ತದೆ. ನುಗ್ಗೆಕಾಯಿ ತಿನ್ನುವುದರಿಂದ ರಕ್ತಹೀನತೆ ಕಡಿಮೆಯಾಗುತ್ತದೆ ಮತ್ತು ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ.ನುಗ್ಗೆಕಾಯಿಯಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕಗಳು ಮೂಳೆಗಳು ಹಾಗೂ ಹಲ್ಲುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ನುಗ್ಗೆಕಾಯಿ, ಪಲ್ಯ ಮಾಡುವುದನ್ನು ನೀವು ನೋಡಿದ್ದೀರ ಆದರೆ ಯಾವಗಾದರೂ ನುಗ್ಗೆಕಾಯಿ ಚಟ್ನಿ ಮಾಡಿದ್ದೀರಾ, ಹಾಗಿದ್ದರೇ ಇವಾಗ್ಲೆ ಟ್ರೈ ಮಾಡಿ...
* ಒಂದು ಕಪ್ ನುಗ್ಗೆಕಾಯಿ ಸೊಪ್ಪು
* 5 ರಿಂದ 6 ಹಸಿ ಮೆಣಸಿನಕಾಯಿ
* 4-5 ಎಸಳು ಬೆಳ್ಳುಳ್ಳಿ
* ಹುಣಸೆ ಹಣ್ಣು
* ರುಚಿಗೆ ಉಪ್ಪು
* 2 ಚಮಚ ಎಳ್ಳು
* 2 ಚಮಚ ಎಣ್ಣೆ
* 1 ಚಮಚ ಸಾಸಿವೆ
* 2 ಮೆಣಸಿನಕಾಯಿ
* ಕರಿಬೇವು
* ಮೆಂತೆ ಕಾಳು
ಚಟ್ನಿ ತಯಾರಿಸುವ ವಿಧಾನ...
ಮೊದಲು ನುಗ್ಗೆಕಾಯಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆಯನ್ನು ಸೇರಿಸಿ ನುಗ್ಗೆಕಾಯಿ ಸೊಪ್ಪನ್ನು 5 ರಿಂದ 6 ನಿಮಿಷಗಳ ಕಾಲ ಹುರಿಯಿರಿ ಎಲೆಗಳು ಬಣ್ಣ ಬದಲಾಗುವವರೆಗೆ ಮತ್ತು ಕಹಿ ಕಡಿಮೆಯಾಗುವವರೆಗೆ ಹುರಿಯಿರಿ. ನಂತರ ಹುರಿದ ಎಲೆಗಳನ್ನು ಪಕ್ಕಕ್ಕೆ ಇಟ್ಟುಕೊಳ್ಳಿ ನಂತರ ಆ ಬಾಣಲೆಗೆ ಎಳ್ಳು ಮತ್ತು ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ. ಈಗ, ಮೊದಲು ಹುರಿದ ಎಳ್ಳನ್ನು ಪುಡಿಮಾಡಿಕೊಳ್ಳಿ. ನಂತರ ಹುರಿದ ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು ಮೆಂತ್ಯ ಬೀಜ ಹಾಗೂ ಉಪ್ಪನ್ನು ಸೇರಿಸಿ ನುಣ್ಣಗೆ ಪುಡಿಮಾಡಿ.
ಒಂದು ಬಾಣಲೆಗೆ 2ರಿಂದ 3 ಚಮಚ ಎಣ್ಣೆ ಹಾಕಿ ಅದಕ್ಕೆ ಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ನಂತರ ನುಣ್ಣಗೆ ರುಬ್ಬಿದ ಚಟ್ನಿ ಸೇರಿಸಿ ಸ್ವಲ್ಪ ತಣ್ಣಗಾದ ನಂತರ ಅನ್ನ, ಚಪಾತಿ, ರೊಟ್ಟಿ ಜೊತೆ ತಯಾರಿಸಿದ ನುಗ್ಗೆ ಸೊಪ್ಪಿನ ಚಟ್ನಿಯನ್ನು ಸವಿಯಿರಿ.(ಏಜೆನ್ಸೀಸ್)