ಅನಸ್(ರ) ಒಂದು ದಿನ ಮಹಮ್ಮದ್ ಪೈಗಂಬರ್(ಸ) ಅವರ ಸುಪುತ್ರ ಹೀಗೆ ಹೇಳುತ್ತಾರೆ: ಪ್ರವಾದಿ(ಸ)ಯವರ ಆರಾಧನೆಗಳ ಬಗ್ಗೆ ತಿಳಿದು ಕೊಳ್ಳಲು ಮೂರು ಮಂದಿಯ ನಿಯೋಗ ಪ್ರವಾದಿ(ಸ) ಪತ್ನಿಯರ ಹತ್ತಿರ ಹೋಯಿತು. ಆಗ ಅವರಿಗೆ ಆರಾಧನೆಗಳ ಪ್ರಮಾಣ ಕಡಿಮೆ ಎನ್ನಿಸಿತು. ಅವರು ಹೀಗೆ ಹೇಳತೊಡಗಿದರು: ಪ್ರವಾದಿ(ಸ)ಯವರಿಗೆ ಹೋಲಿಸಿದರೆ ನಮ್ಮ ಸ್ಥಿತಿಯೇನು? ನಾವಂತೂ ಪ್ರವಾದಿ ಅವರಿಗೆ ಸರಿಸಮಾನಕ್ಕೆ ಇಲ್ಲ. ಪ್ರವಾದಿಯವರ ಹಿಂದಿನ ಹಾಗೂ ಮುಂದಿನ ಪಾಪಗಳೆಲ್ಲವೂ ಕ್ಷಮಿಸಲ್ಪಟ್ಟಿವೆ ಎಂದು. ಒಬ್ಬನು, ತಾನು ರಾತ್ರಿಪೂರ್ತಿ ನಫಿಲ್ ನಮಾಜ್ ಮಾಡುವವನೆಂದು ನಿಶ್ಚಯಿಸಿಕೊಂಡನು, ಮತ್ತೊಬ್ಬನು ನಾನು ಎಡಬಿಡದೆ ಉಪವಾಸ ಆಚರಿಸುವೆನೆಂದು ಹೇಳಿದನು.
ಇನ್ನೊಬ್ಬನು ತಾನು ಜೀವನದಾದ್ಯಂತ ಸ್ತ್ರೀಯರಿಂದ ದೂರವಿರುವೆನು ಎಂದು ಹೇಳಿದನು. ಪ್ರವಾದಿ(ಸ) ಅವರಿಗೆ ಇವರ ವೈರಾಗ್ಯದ ಮಾತುಗಳ ಸುದ್ದಿ ತಿಳಿದಾಗ, ಅವರು ಅವರ ಹತ್ತಿರ ತೆರಳಿ, ನೀವು ಈ ಬಗೆಯ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಾ ಎಂದು ಕೇಳಿದರು? ಆನಂತರ ಹೀಗೆ ಹೇಳಿದರು: ನೋಡಿ ನಾನು ನಿಮ್ಮೆಲ್ಲರಿಗಿಂತಲೂ ಅಧಿಕ ಅಲ್ಲಾಹನಿಗೆ ಭಯಪಡುವವನಾಗಿರುವ ಮತ್ತು ಅವನ ಆಜ್ಞೋಲ್ಲಂಘನೆಯಿಂದ ದೂರ ಇರುವವನಾಗಿರುತ್ತೇನೆ. ಆದರೆ, ಉಪವಾಸ ಆಚರಿಸುತ್ತಲೂ ಇದ್ದೇನೆ, ನಫಿಲ್ ನಮಾಜ್ಗಳನ್ನು ಮಾಡುತ್ತಲೂ ಇದ್ದೇನೆ. ನಿದ್ರಿಸುತ್ತಲೂ ಇದ್ದೇನೆ, ನಾನು ಸ್ತ್ರೀಯರೊಂದಿಗೆ ವಿವಾಹವನ್ನು ಮಾಡಿಕೊಳ್ಳುತ್ತೇನೆ.
ಆದ್ದರಿಂದ ನನ್ನ ವಿಧಾನವನ್ನು ಅನುಸರಿಸುವುದ ರಲ್ಲಿಯೇ ನಿಮ್ಮ ಒಳಿತಿದೆ. ಯಾರು ನನ್ನ ಚರ್ಚೆಯನ್ನು ಧಿಕ್ಕರಿಸು ತ್ತಾರೆಯೋ ಅವರು ನನ್ನವರಲ್ಲ, ಅವರೊಂದಿಗೆ ಯಾವ ಸಂಬಂಧವೂ ಇಲ್ಲ. ಒಮ್ಮೆ ಅನಸ್(ರ) ಹೇಳುತ್ತಾರೆ: ‘ಪ್ರವಾದಿ(ಸ) ನನ್ನೊಂದಿಗೆ, ನಿನಗೆ ನನ್ನ ಮನಸ್ಸಿನಲ್ಲಿ ಯಾರ ವಿರುದ್ಧವಾದರೂ ಅಹಿತ ಭಾವನೆ ಇಲ್ಲದಂತಹ ಅವಸ್ಥೆಯಲ್ಲಿ ಜೀವನ ಸಾಗಿಸಲು ಸಾಧ್ಯವಾದರೆ ಹಾಗೆಯೇ ಜೀವಿಸು ಎಂದರು. ಆನಂತರ, ನನ್ನ ಕ್ರಮವೂ ಇದುವೇ ಆಗಿದೆ. ನನ್ನ ಮನಸ್ಸಿನಲ್ಲಿ ಯಾರ ವಿರುದ್ಧವೂ, ಯಾವುದೇ ಬೇಸರವಿಲ್ಲ. ಯಾರು ನನ್ನ ಕ್ರಮವನ್ನು ಪ್ರೀತಿಸಿ ದನೋ ಅವನು ನನ್ನೊಡನೆ ಸ್ವರ್ಗದಲ್ಲಿರುವವನಉ ಎಂದರು’. ಬದುಕಿನ ಬಗ್ಗೆ, ದೈವದ ಬಗ್ಗೆ, ಪ್ರವಾದಿ(ಸ)ಯವರ ಬಗ್ಗೆ ಪ್ರವಾದಿಯವರೇ ವ್ಯಕ್ತಪಡಿಸಿದ ಮೌಲಿಕವಾದ ಅನಿಸಿಕೆಗಳಿವು!