ಬೀಜಿಂಗ್: H3N3 ಹಕ್ಕಿಜ್ವರದಿದಂದ ಚೀನಾದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಈ ಸೋಂಕು ಹಕ್ಕಿಗಳಲ್ಲಿ ಸಾಮಾನ್ಯವಾಗಿದ್ದು, ಮನುಷ್ಯರಲ್ಲಿ ಕಂಡು ಬರುವುದು ತೀರಾ ಅಪರೂಪ ಎಂದು ಹೇಳಲಾಗಿತ್ತು. ಇದೀಗ ಹಕ್ಕಿಜ್ವರದಿಂದ ಗುವಾಂಗ್ಡಾಂಗ್ನ ದಕ್ಷಿಣ ಪ್ರಾಂತ್ಯದ ಮಹಿಳೆ ಮೃತಪಟ್ಟಿರುವುದು ಮೊದಲ ಪ್ರಕರಣ ಇದಾಗಿದೆ ಎಂದು ವರದಿಯಾಗಿದೆ.
ಏವಿಯನ್ ಇನ್ಫ್ಲುಯೆಂಜಾದ ಉಪತಳಿ ಎಚ್3ಎನ್8 ಹಕ್ಕಿಜ್ವರ ಮಹಿಳೆಯಲ್ಲಿ ಕಾಣಿಸಿಕೊಂಡಿತ್ತು. ಮಹಿಳೆ ಕೋಳಿ ಸಾಕಾಣಿಕೆ ಕೇಂದ್ರದ ಸಂಪರ್ಕಕ್ಕೆ ಬಂದಿರುವ ವೇಳೆ ಸೋಂಕು ತಗುಲಿರಬಹುದು ಎಂದು ವೈದ್ಯರಯ ಅಂದಾಜಿಸಿದ್ದಾರೆ. ಸೋಂಕಿತ ಮಹಿಳೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರಲ್ಲಿ ಹಕ್ಕಿಜ್ವರದ ಸೋಂಕು ಕಾಣಿಸಿಕೊಳ್ಳುವುದಿಲ್ಲ. ಈ ಸೋಂಕು ಮನುಷ್ಯರಿಗೆ ಸುಲಭವಾಗಿ ಹಬ್ಬುವ ಸಾಮರ್ಥ್ಯ ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಚೀನಾದಲ್ಲಿ ಈವರೆಗೆ ಹಕ್ಕಿಜ್ವರಕ್ಕೆ ತುತ್ತಾದ ಮೂರು ಪ್ರಕರಣಗಳು ವರದಿಯಾಗಿವೆ. ಚೀನಾದಲ್ಲಿ ಕೋಳಿ ಸಾಕಾಣಿಗೆ ಇರುವ ಪ್ರದೇಶದ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ವೈರಲ್ ಸುಲಭವಾಗಿ ಮನುಷ್ಯರಿಗೆ ಹಬ್ಬುವ ಸಾಮರ್ಥ್ಯ ಹೊಂದಿಲ್ಲದಿರುವುದರಿಂದ ಅಪಾಯದ ಪ್ರಮಾಣ ಕಡಿಮೆ ಎಂದು ಡಬ್ಲ್ಯುಎಚ್ಒ ಹೇಳಿದೆ. (ಏಜೆನ್ಸೀಸ್)