ನ್ಯೂಸ್

ವಿಜಯವಾಣಿ ಕ್ಲಬ್​ಹೌಸ್​ನಲ್ಲಿಂದು ವಿಶ್ವ ರಂಗಭೂಮಿ ಸಂವಾದ

ಮಾ. 27 ವಿಶ್ವ ರಂಗಭೂಮಿ ದಿನ. ಈ ವಿಶೇಷ ದಿನದ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವಾಹಿನಿಯು ಇಂದು (ಮಾ. 25) ಸಂಜೆ 6 ಗಂಟೆಗೆ ಕ್ಲಬ್​ಹೌಸ್ ಸಂವಾದ ಆಯೋಜಿಸಿದೆ. ರಂಗಭೂಮಿಯ ಹೆಸರಾಂತ ನಟ-ನಿರ್ದೇಶಕರಾದ

ಎಸ್.ಎನ್. ಸೇತೂರಾಂ ಮತ್ತು ಮಂಡ್ಯ ರಮೇಶ್ ಪ್ರಸ್ತುತ ರಂಗಭೂಮಿ ಎದುರಿಸುತ್ತಿರುವ ಹಲವು ಸವಾಲು ಮತ್ತು ಮುಂದಿನ ದಿನಗಳಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮಾತನಾಡಲಿದ್ದಾರೆ. ಖ್ಯಾತ ಗಾಯಕಿ ರೋಹಿಣಿ ಕನ್ನಡದ ಜನಪ್ರಿಯ ರಂಗಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ. ಓದುಗರು ಈ ಸಂವಾದದಲ್ಲಿ ಭಾಗವಹಿಸಿ, ರಂಗಭೂಮಿಯ ಕುರಿತಾಗಿ ಪ್ರಶ್ನೆಗಳನ್ನು ಕೇಳಬಹುದು.