ನ್ಯೂಸ್

ಪ್ರತಿದಿನ ಬೆತ್ತೆಲೆಯಾಗಿ ಜಿಮ್​ನಲ್ಲಿ ವರ್ಕೌಟ್​ ಮಾಡುವ ದಂಪತಿ! ಕಾರಣ ಕೇಳಿದ್ರೆ ದಂಗಾಗ್ತೀರಾ

ನವದೆಹಲಿ: ಜೀಮ್​ನಲ್ಲಿ ವರ್ಕೌಟ್​ ಮಾಡುವಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ವೈರಲ್​​​ ಆಗಿರುವ ವಿಡಿಯೋದಲ್ಲಿರುವುದು ಬ್ರೆಜಿಲ್‌ನ ಸಾವೊಪಾಲೊದ ಬೆಲ್ಲಾ ಮಾಂಟೊವಾನಿ ಮತ್ತು ವ್ಯಾಗ್ನರ್ ಒಫೆರಾ ದಂಪತಿ. ಅಷ್ಟಕ್ಕೂ ಭಾರಿ ಚರ್ಚೆ ಮಾಡುವಂತಹ ವಿಶೇಷತೆ ಅವರ ವಿಡಿಯೋದಲ್ಲಿ ಏನಿದೆ? ಎಂಬ ಪ್ರಶ್ನೆ ಮಾಡಬಹುದು. ಏನೆಂದರೆ, ವಿಡಿಯೋದಲ್ಲಿ ಇಬ್ಬರು ಬೆತ್ತಲೆಯಾಗಿ ವ್ಯಾಯಾಮ ಮಾಡುತ್ತಿರುವ ದೃಶ್ಯವಿದೆ. ಈ ರೀತಿಯ ವ್ಯಾಯಾಮ ಮಾಡಲು ಕಾರಣವನ್ನೂ ತಿಳಿಸಿದ್ದಾರೆ.

ಬೆತ್ತಲೆ ವ್ಯಾಯಾಮವೇ ಸುಖ ದಾಂಪತ್ಯದ ಗುಟ್ಟು ಎನ್ನುತ್ತಾರೆ ದಂಪತಿ. ಪ್ರತಿದಿನ ಸಂಪೂರ್ಣ ಬೆತ್ತಲೆಯಾಗಿ ವ್ಯಾಯಾಮ ಮಾಡುವುದು ಇವರ ಅಭ್ಯಾಸವಂತೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆಯಂತೆ. ಇಬ್ಬರು ಒಬ್ಬರನ್ನೊಬ್ಬರನ್ನು ಪರಸ್ಪರ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ದಂಪತಿ ಹೇಳಿದ್ದಾರೆ.

ಅನೇಕ ಜನರು ತಮ್ಮ ವಿಧಾನವನ್ನು ಟೀಕಿಸುತ್ತಾರೆ. ಆದರೆ, ಅಂತಹ ಟೀಕೆಗಳಿಗೆ ನಾವು ಹೆದರುವುದಿಲ್ಲ ಎಂದು ದಂಪತಿ ಹೇಳಿದ್ದಾರೆ. ಅಂದಹಾಗೆ ಬೆಲ್ಲಾ ಮಾಂತವಾಣಿ ಮತ್ತು ವ್ಯಾಗ್ನರ್ ಒಫೆರಾ 2011 ರಲ್ಲಿ ವಿವಾಹವಾದರು. (ಏಜೆನ್ಸೀಸ್​)