More

    ನಾಳೆ ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ ಅಗೋಚರ, ಗ್ರಹಣದ ಆಚರಣೆ ನಿಯಮ ಪಾಲಿಸುವ ಅಗತ್ಯವಿಲ್ಲ

    ನವದೆಹಲಿ: ಭಾರತದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ತನ್ನದೇಯಾದ ಮಹತ್ವದ ಇದೆ. ಆಕಾಶದಲ್ಲಿ ಸಂಭವಿಸುವ ಸ್ವಾಭಾವಿಕ ವಿದ್ಯಾಮಾನವಾದರು ಕೂಡ ಭಾರತದಲ್ಲಿ ಗ್ರಹಣವನ್ನು ಗೌರವಿಸುತ್ತಾರೆ ಮತ್ತು ವಿಧಿ-ವಿಧಾನವನ್ನು ಆಚರಣೆ ಮಾಡುತ್ತಾರೆ. ಈ ವರ್ಷದ ಪ್ರಥಮ ಚಂದ್ರಗ್ರಹಣವು ಫಾಲ್ಗುಣ ಮಾಸದ ಪೂರ್ಣಿಮಾ ತಿಥಿಯಂದು ಅಂದರೆ ನಾಳೆ (ಮಾರ್ಚ್ 25) ಸಂಭವಿಸುತ್ತದೆ.

    ಹೋಳಿ ಹಬ್ಬದಂದೇ ಚಂದ್ರ ಗ್ರಹಣ ಸಂಭವಿಸಲಿದೆ. ಆದರೆ, ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

    ಗ್ರಹಣ ಸಮಯ
    ಸ್ಪರ್ಶಕಾಲ: ಮುಂಜಾನೆ 10 ಗಂಟೆ 20 ನಿಮಿಷ
    ಮಧ್ಯಕಾಲ: ಮಧ್ಯಾಹ್ನ 12 ಗಂಟೆ 42 ನಿಮಿಷ
    ಮೋಕ್ಷ ಕಾಲ: ಮಧ್ಯಾಹ್ನ 3 ಗಂಟೆ 02 ನಿಮಿಷ

    ಈ ಅದೃಶ್ಯ ಚಂದ್ರಗ್ರಹಣವೂ 5 ಗಂಟೆ 12 ನಿಮಿಷಗಳ ಇರಲಿದೆ. ಆದರೆ ಭಾರತದಲ್ಲಿ ಗೋಚರವಾಗುವುದಿಲ್ಲ.

    ಎಲ್ಲೆಲ್ಲಿ ಗೋಚರವಾಗುತ್ತದೆ?
    ಭಾರತವನ್ನು ಹೊರತುಪಡಿಸಿ ಯೂರೋಪ್​, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕಟಿಕ್‌ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ. ರಷ್ಯಾ, ಜರ್ಮನಿ, ಜಪಾನ್​, ಸ್ವಿಡ್ಜರ್​ಲೆಂಡ್​, ನೆದರ್ಲೆಂಡ್​, ಐರ್ಲೆಂಡ್, ಬೆಲ್ಜಿಯಂ, ಸ್ಪೇನ್, ಇಂಗ್ಲೆಂಡ್, ದಕ್ಷಿಣ ನಾರ್ವೆ, ಇಟಲಿ, ಪೋರ್ಚುಗಲ್ ಸೇರಿದಂತೆ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ.

    ಅದೃಶ್ಯ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಗ್ರಹಣದ ವೇದಾದಿ ಆಚರಣೆ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ. ಹೀಗಾಗಿ ಗ್ರಹಣದ ದಿನವೂ ಯಾವುದೇ ಸೂತಕ ಇರುವುದಿಲ್ಲ. ಜನ ಜೀವನ ಎಂದಿನಂತಯೇ ಇರಲಿದೆ. ಪೂಜೆ-ಪುನಸ್ಕಾರಗಳು ಸಹ ಸಹಜವಾಗಿಯೇ ನೆಡಲಿಯಲಿದೆ.

    ರಾಶಿಚಕ್ರದ ಚಿಹ್ನೆಗಳ ಮೇಲೆ ಚಂದ್ರಗ್ರಹಣದ ಪರಿಣಾಮಗಳು
    ಭಾರತದಲ್ಲಿ ಚಂದ್ರಗ್ರಹಣವು ಗೋಚರಿಸದಿದ್ದರೂ, ಅದರ ಖಗೋಳ ಪರಿಣಾಮಗಳು ಮುಖ್ಯವಾಗಿ ಈ ಮೂರು ರಾಶಿಚಕ್ರ ಚಿಹ್ನೆಗಳಾದ ಮೇಷ, ಕರ್ಕ ಮತ್ತು ಕನ್ಯಾ ರಾಶಿಯ ಜನರ ಮೇಲೆ ಕಂಡುಬರುತ್ತವೆ. ಈ ರಾಶಿಚಕ್ರ ಚಿಹ್ನೆಗಳೊಂದಿಗೆ ಜನಿಸಿದ ಜನರು ತಮ್ಮ ಜೀವನದಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಅವರಿಗೆ ಈ ಸಮಯ ಮಂಗಳಕರವೆಂದು ನಂಬಲಾಗಿದೆ. ಹಣಕಾಸಿನ ಲಾಭ, ಗೌರವ ಹೆಚ್ಚಳ, ಉದ್ಯೋಗಗಳಲ್ಲಿ ಹೊಸ ಅವಕಾಶಗಳು ಮತ್ತು ಅವರ ಜೀವನದಲ್ಲಿ ಇತರ ಸಕಾರಾತ್ಮಕ ಬದಲಾವಣೆಗಳು ಕಾಣಬಹುದು.

    ಚಂದ್ರಗ್ರಹಣ 2024: ಹೋಳಿಯಲ್ಲಿ ಚಂದ್ರಗ್ರಹಣದ ನೆರಳು, ಎಲ್ಲಾ ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಚಂದ್ರಗ್ರಹಣ 2024: ವರ್ಷದ ಮೊದಲ ಚಂದ್ರಗ್ರಹಣವು ಈ ದಿನದಂದು ಸಂಭವಿಸಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts