ನ್ಯೂಸ್

ರಾಷ್ಟ್ರದ ಪ್ರಗತಿಗೆ ಮಹಿಳಾ ಸಬಲೀಕರಣ ಅತ್ಯಗತ್ಯ : ಮೋಹನ್ ಭಾಗವತ್ | Mohan Bhagwat

Mohan Bhagwat: ಯಾವುದೇ ಒಂದು ರಾಷ್ಟ್ರದ ಪ್ರಗತಿಗೆ ಮಹಿಳಾ ಸಬಲೀಕರಣ ಅತ್ಯಗತ್ಯ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ (ಜುಲೈ 18) ಹೇಳಿದರು.

ಮಹಾರಾಷ್ಟ್ರದ ಸೋಲಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಬೆಳವಣಿಗೆಗೆ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾದದ್ದು, ಪುರುಷನಾದವನು ತನ್ನ ಮರಣದವರೆಗೂ ಕೆಲಸ ಮಾಡುತ್ತಾನೆ. ಅದೇ ರೀತಿ ಮಹಿಳೆ ಕೂಡ ಕೊನೆಯವರೆಗೂ ಕೆಲಸ ಮಾಡುತ್ತಾಳೆ. ಆದರೆ, ಅದನ್ನೂ ಮೀರಿ ಸ್ತ್ರಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿರುತ್ತಾಳೆ ಎಂದರು.

ಮಹಿಳೆಯ ಪ್ರೀತಿ ಮತ್ತು ವಾತ್ಸಲ್ಯದಲ್ಲಿ ಮಕ್ಕಳು ಬೆಳೆದು ಪ್ರಬುದ್ಧರಾಗುತ್ತಾರೆ ಮತ್ತು ಸಂಸ್ಕಾರವಂತರಾಗುತ್ತಾರೆ. ಈ ನಿಟ್ಟಿನಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣವು ನಿರ್ಣಾಯಕವಾಗಿದೆ. ಮಹಿಳೆಯರು ತಮಗೆ ಅನಿಸಿದ್ದನ್ನು ಮಾಡಲಿ. ಅವರನ್ನು ಸಬಲೀಕರಣಗೊಳಿಸಿ ಕೆಟ್ಟ ಸಂಪ್ರದಾಯಗಳಿಂದ ಮುಕ್ತಗೊಳಿಸಿ. ಒಬ್ಬ ಮಹಿಳೆ ತನ್ನನ್ನು ತಾನು ಉನ್ನತೀಕರಿಸಿಕೊಂಡಾಗ, ಅವಳು ಇಡೀ ಸಮಾಜವನ್ನು ಉನ್ನತೀಕರಿಸಲು ಸಾಧ್ಯ ಎಂದರು. (ಏಜೆನ್ಸೀಸ್)