Suicide Case: ಬಹುಮಹಡಿಯ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಯುವತಿಯ ದೇಹ ಎರಡು ತುಂಡಾದ ಭೀಕರ ಘಟನೆ ಮುಂಬೈನ ಕಣ್ಣಂವರ್ ನಗರದ ವಿಖ್ರೋಲಿಯಲ್ಲಿ ಸಂಭವಿಸಿದೆ.
ಮೃತ ಯುವತಿಯನ್ನು ಹರ್ಷದಾ ತೆಂಡೊಲ್ಕರ್ (25) ಎಂದು ಗುರತಿಸಲಾಗಿದೆ. ಕಟ್ಟಡದ 23ನೇ ಮಹಡಿಯಿಂದ ಯುವತಿ ಜಿಗಿದಿದ್ದು, ಭಾರೀ ಎತ್ತರದಿಂದ ಹಾರಿದ ಕಾರಣ ದೇಹ ಎರಡು ತುಂಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸೋಮವಾರ (ಮೇ.26) ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಹರ್ಷದಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದಿದ್ದೇ ಆದರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡದಿಂದ ಕೆಳಗೆ ಪಾರ್ಕ್ ಮಾಡಿದ್ದ ಬೈಕ್ ಮೇಲೆ ಹರ್ಷದಾ ಬಿದ್ದ ಪರಿಣಾಮ ದೇಹವು ಎರಡು ಭಾಗವಾಗಿದೆ ಎಂದು ಖಾಕಿ ತಿಳಿಸಿದೆ.
ಇದನ್ನೂ ಓದಿ: ಹದಿನೈದು ದಿನಗಳಲ್ಲೇ ಹೊಸ ವಿಭಾಗ ಆರಂಭ : ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಭರವಸೆ
ಸ್ಥಳೀಯರು ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಾಥಮಿಕ ತನಿಖೆಗಾಗಿ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು, ಮೃತ ಹರ್ಷದಾ ಅವರ ಕುಟುಂಬ ಮತ್ತು ಆಪ್ತರೊಂದಿಗೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಆಕೆಯ ಸಾವಿನ ಹಿಂದಿರುವ ಕಾರಣವೇನು? ಎಂಬುದನ್ನು ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).