ನ್ಯೂಸ್

ಗ್ಯಾಂಗ್​ ರೇಪ್​ ಮಾಡಿ ಗುಪ್ತಾಂಗಕ್ಕೆ ಗ್ಲಾಸಿನ ಚೂರು ತುಂಬಿದ ಪಾಪಿಗಳು! ಸಾವು ಬದುಕಿನ ನಡುವೆ ಮಹಿಳೆಯ ಹೋರಾಟ

ರಾಂಚಿ: ದೆಹಲಿಯ ನಿರ್ಭಯಾ ಪ್ರಕರಣದ ರೀತಿಯಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್​ ರೇಪ್​ ಪ್ರಕರಣದ ದಾಖಲಾಗಿ ವಾರದೊಳಗೆ ಮತ್ತೊಂದು ಅಂತದ್ದೇ ಪ್ರಕರಣ ಜಾರ್ಖಂಡ್​ನಲ್ಲಿ ದಾಖಲಾಗಿದೆ. 50 ವರ್ಷದ ವಿಧವೆಯನ್ನು ಗ್ಯಾಂಗ್ ರೇಪ್​ ಮಾಡಿರುವ ಗ್ಯಾಂಗ್​, ಆಕೆಯ ಗುಪ್ತಾಂಗಕ್ಕೆ ಗ್ಲಾಸಿನ ಚೂರುಗಳನ್ನು ತುಂಬಿದ್ದು, ಸಂತ್ರಸ್ತೆ ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.

ಜಾರ್ಖಂಡ್‌ನ ಚತ್ರಾ ಜಿಲ್ಲೆಯ ಹಂಟರ್‌ಗಂಜ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯಲ್ಲಿ ಇಂತದ್ದೊಂದು ಪ್ರಕರಣ ದಾಖಲಾಗಿದೆ. 50 ವರ್ಷದ ಮಹಿಳೆ ವಿಧವೆಯಾಗಿದ್ದು, ಒಬ್ಬಂಟಿ ಜೀವನ ಸಾಗಿಸುತ್ತಿದ್ದಳು. ಆಕೆಯ ಮೇಲೆ ಮೂವರು ಯುವಕರ ಗ್ಯಾಂಗ್​ ರೇಪ್​ ನಡೆದಿದೆ. ರೇಪ್​ ಮಾಡಿದ ನಂತರ ಆಕೆಯ ಗುಪ್ತಾಂಗಕ್ಕೆ ಗ್ಲಾಸಿನ ಚೂರುಗಳನ್ನು ತುಂಬಲಾಗಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿಸಲಾಗಿದೆ.

ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಆದರೆ ಆಕೆ ಅಪಾಯದಿಂದ ಹೊರಗಿದ್ದಾರೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು

ಹಂಟರ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರದ ಅಧೀಕ್ಷಕ ಡಾ.ವೆದ್ಪ್ರಕಾಶ್ ಹೇಳಿದ್ದಾರೆ. ಘಟನೆಯ ಕುರಿತಾಗಿ ಹಂಟರ್‌ಗಂಜ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಷಭ್ ಹೇಳಿದ್ದಾರೆ. (ಏಜೆನ್ಸೀಸ್​)