ಬಾಗಲಕೋಟೆ: ಕುಡಿಯಲು ನೀರು ಹಿಡಿಯಲೆಂದು ಬಂದ ಮಹಿಳೆಯೊಬ್ಬಳಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಕುಸಿದ ಬಿದ್ದ ಘಟನೆ ಮಂಗಳವಾರ ಬನಹಟ್ಟಿ ನಗರದ ಪೇಟೆಯ ವಿಠ್ಠಲ್ ಮಂದಿರದ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಪವಾಡದ ರೀತಿಯಲ್ಲಿ ಮಹಿಳೆ ಬದುಕುಳಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೋರ್ವೆಲ್ಗೆ ನೀರು ತರಲು ಹೋಗಿದ್ದ ಮಹಿಳೆ, ಕರೆಂಟ್ ಬಾಕ್ಸ್ನೊಳಗೆ ಸ್ವಿಚ್ ಆನ್ ಮಾಡಲು ಕೈ ಹಾಕಿದ್ದಾರೆ. ಈ ವೇಳೆ ತಗುಲಿದ ವಿದ್ಯುತ್ನಿಂದ ಸ್ಥಳದಲ್ಲೇ ಕುಸಿದ ಬಿದ್ದ ಆಕೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರು. ಬದುಕುಳಿದ ಮಹಿಳೆಯನ್ನು ಶೃತಿ ಹಾಸಲಕರ್(30) ಎಂದು ಹೇಳಲಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರದಲ್ಲಿ ನಡೆದ ಘಟನೆ ಸಂಭವಿಸಿದ್ದು, ಮಹಿಳೆಗೆ ವಿದ್ಯುತ್ ಸ್ಪರ್ಷಿಸಿದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸಾರ್ವಜನಿಕರು ಮಾನವೀಯತೆ ಮೆರೆದಿದ್ದಾರೆ.