Suicide Case: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ, ಉತ್ತಮ ಉದ್ಯೋಗ ಪಡೆಯುವ ಅಪಾರ ಕನಸು ಕಂಡಿದ್ದ ಯುವತಿಯೊಬ್ಬಳು, ಆತ್ಮಹತ್ಯೆಗೆ ಶರಣಾಗುವ ಮೂಲಕ ದುರಂತ ಅಂತ್ಯ ಕಂಡ ದುರ್ಘಟನೆ ತೆಲಂಗಾಣದ ಜಗಿತ್ಯಾಲದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ತಮಿಳುನಾಡು ಘಟಿಕೋತ್ಸವ ವಿವಾದ: ರಾಜ್ಯಪಾಲರ ಕಡೆಗಣನೆ, ಕೀಳು ಮಟ್ಟದ ರಾಜಕೀಯ ಎಂದು ಅಣ್ಣಾಮಲೈ ಕಿಡಿ| Annamalai
ವಿದೇಶದಲ್ಲಿ ವಿದ್ಯಾಭ್ಯಾಸ ಪಡೆದು, ಕೈತುಂಬ ಸಂಬಳ ಎಣಿಸುವ ಉದ್ಯೋಗವನ್ನೇ ಗಿಟ್ಟಿಸಿಕೊಳ್ಳಬೇಕು ಎಂಬ ಮಹಾದಾಸೆ ಹೊಂದಿದ್ದ ಬಡ ಕುಟುಂಬದ ಯುವತಿ ಒಂದು ಸಣ್ಣ ವಿಷಯಕ್ಕೆ ಪ್ರಾಣ ಕಳೆದುಕೊಂಡಿರುವುದು ಸದ್ಯ ಇಡೀ ಗ್ರಾಮಸ್ಥರನ್ನೇ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಯುವತಿಯನ್ನು ಶ್ರೀನಿವಾಸ್ ಮತ್ತು ವೆಂಕಟ ಅರುಣ ದಂಪತಿ ಪುತ್ರಿ ಹರ್ಷಿತಾ (25) ಎಂದು ಗುರುತಿಸಲಾಗಿದೆ.
ಪದವಿ ಪೂರ್ಣಗೊಳಿಸಿ ಅಮೆರಿಕಕ್ಕೆ ಹೋಗಲು ಅಪರಿಚಿತ ವ್ಯಕ್ತಿಗೆ 10 ಲಕ್ಷ ರೂ. ಪಾವತಿಸಿದ್ದ ಯುವತಿ, ವೀಸಾ ಮಾಡಿಸಿಕೊಡುವಂತೆ ತಿಳಿಸಿದ್ದಳು. ಕೆಲವು ತಿಂಗಳುಗಳಿಂದ ವೀಸಾ ಕೊಡಿಸುವುದಾಗಿಯೇ ಹೇಳಿಕೊಂಡು ಯುವತಿಯಿಂದ ಹಣ ಪೀಕಿದ ವ್ಯಕ್ತಿ, ಆಕೆಗೆ ಹಣವೂ ಹಿಂತಿರುಗಿಸದೆ, ವೀಸಾವನ್ನು ಕೊಡಿಸಲಿಲ್ಲ. ಇದರಿಂದ ಬೇಸರಗೊಂಡ ಹರ್ಷಿತಾ ತಂದೆಯ ಬಳಿ ಜರ್ಮನಿಗೆ ಹೋಗುವುದಾಗಿ ಹೇಳಿ, ಹೆಚ್ಚುವರಿ ಹಣ ಕೇಳಿದ್ದಳು. ಇದಕ್ಕೆ ತಂದೆ ನಿರಾಕರಿಸಿ, ಇದೆಲ್ಲವನ್ನೂ ಇಲ್ಲಿಗೆ ಬಿಟ್ಟುಬಿಡು ಎಂದಿದ್ದರು.
ಈ ವಿಚಾರದಿಂದ ತೀರ ಮನನೊಂದ ಯುವತಿ, ವಿಷ ಸೇವಿಸಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಚಿಕಿತ್ಸೆ ಕೊಡಿಸಿದ್ದೇ ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಂಗಳವಾರ (ಆ.12) ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತಾ ಕೊನೆಯುಸಿರೆಳೆದಳು. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ,(ಏಜೆನ್ಸೀಸ್).