ಹಾಪುರ್, ಉತ್ತರಪ್ರದೇಶ: ಯುವತಿಯೊಬ್ಬಳು ಗ್ರಾಮದ ವ್ಯಕ್ತಿ ತನಗೆ ಕಿರುಕುಳ ನೀಡಿದ ಬಗ್ಗೆ ಹಾಪುರ್ ಜಿಲ್ಲೆಯ ಪಂಚಾಯಿತಿಗೆ ದೂರು ನೀಡಿದ್ದಾಳೆ. ಸಮಸ್ಯೆಯನ್ನು ಪರಿಹರಿಸಲು ವಿಭಿನ್ನ ರೀತಿಯಲ್ಲಿ ತೀರ್ಪು ನೀಡಿದ ಪಂಚಾಯಿತಿ, ಯುವಕನಿಗೆ ಚಪ್ಪಲಿಯಲ್ಲಿ ಹೊಡೆಯುವಂತೆ ತಿಳಿಸಿದೆ.
ಯುವತಿ ತನಗೆ ಕಿರುಕುಳ ನೀಡಿದ ಯುವಕನಿಗೆ ನಡುರಸ್ತೆಯಲ್ಲಿ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕರ ಮುಂದೆಯೇ ಸಂಭವಿಸಿದೆ. ತನ್ನ ಚಪ್ಪಲಿಯನ್ನು ತೆಗೆದು, ಅನೇಕ ಬಾರಿ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದಾಳೆ. ಈ ಶಿಕ್ಷೆಯನ್ನು ಸಾರ್ವಜನಿಕರ ಮುಂದೆ ಮತ್ತು ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ನಡೆಸಲಾಯಿತು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಬಹದ್ದೂರ್‌ಗಢ ಪೊಲೀಸ್ ಠಾಣೆಯ ಉಸ್ತುವಾರಿ ಸುಮಿತ್ ತೋಮರ್ ಹೇಳಿದ್ದಾರೆ,(ಏಜೆನ್ಸೀಸ್).