ನ್ಯೂಸ್

ರೀಲ್ಸ್​ ಮಾಡುತ್ತಾ ಪರಿಚಿತನ ಜತೆ ಓಡಿ ಹೋದ ಮಹಿಳೆ! ಠಾಣೆ ಮೆಟ್ಟಿಲೇರಿದ ಪತಿ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯ ಹಿಂದೆ ಪತ್ನಿ ಪರಾರಿಯಾಗಿದ್ದು, ಆಕೆಯನ್ನು ಹುಡುಕಿಕೊಡಿ ಎಂದು ಪತಿರಾಯ ಠಾಣೆ ಮೆಟ್ಟಿಲೇರಿದ್ದಾರೆ. ಸುಬೇದಾರಪಾಳ್ಯ ನಿವಾಸಿ ಜೋಸೆಫ್ ಆಂಟೋನಿ ಎಂಬುವರು ಪತ್ನಿ ನಮೀತಾ ಕುಮಾರಿ (36) ಮತ್ತು ನಾಲ್ಕು ವರ್ಷದ ಮಗನನ್ನು ಹುಡುಕಿಕೊಂಡುವಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಎಲೆಕ್ಟ್ರೀಷಿಯನ್ ಕೆಲಸ ಮಾಡುವ ಜೋಸೆಫ್ ಆಂಟೋನಿ ಎಂಬುವವರು 9 ವರ್ಷಗಳ ಹಿಂದೆ ಜಾರ್ಖಂಡ್ ಮೂಲದ ನಮೀತಾ ಕುಮಾರಿ ಜತೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಮಧ್ಯೆ ನಮೀತಾ ಕುಮಾರಿ ಮೊಬೈಲ್ ಆ್ಯಪ್‌ಗಳ ಮೂಲಕ ರೀಲ್ಸ್‌ನಲ್ಲಿ ಹಾಡು, ಕುಣಿತದ ಹವ್ಯಾಸ ಇಟ್ಟುಕೊಂಡಿದ್ದರು. ಇದೇ ವೇಳೆ ಆರು ತಿಂಗಳ ಹಿಂದೆ ಪರಿಚಯವಾದ ದೆಹಲಿ ಮೂಲಕ ದೀಪಕ್ ಮೇಹರಾ ಎಂಬಾತನ ಪರಿಚಯವಾಗಿದೆ.

ನಂತರ ಇಬ್ಬರು ವಾಟ್ಸ್‌ಆ್ಯಪ್ ಚಾಟಿಂಗ್ ಹಾಗೂ ವಿಡಿಯೋ ಕಾಲ್‌ನಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲದೆ, ಜ.8ರಂದು ದೀಪಕ್ ಮೇಹರಾ ಬೆಂಗಳೂರಿಗ ಬಂದು ನಮೀತಾ ಕುಮಾರಿಯನ್ನು ಭೇಟಿಯಾಗಿ ಹೋಗಿದ್ದ. ಈ ವಿಚಾರ ತಿಳಿದ ಜೋಸೆಫ್ ಪತ್ನಿಗೆ ಬೈದು ಬುದ್ದಿವಾದ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟಾದರೂ ನಮೀತಾ ಕುಮಾರಿ, ಜ.26 ಮುಂಜಾನೆ 5 ಗಂಟೆ ಸುಮಾರಿಗೆ ಪತಿಯ ಮೊಬೈಲ್ ಅನ್ನು ನೀರಿನಲ್ಲಿ ಹಾಕಿ, ಆಕೆಯ ಮೊಬೈಲ್‌ನನ್ನು ಒಡೆದು ಹಾಕಿದ್ದಾಳೆ. ನಂತರ ನಾಲ್ಕು ವರ್ಷದ ಎರಡನೇ ಪುತ್ರನೊಂದಿಗೆ ನಾಪತ್ತೆಯಾಗಿದ್ದಾರೆ. ಹೀಗಾಗಿ ಪತ್ನಿ ನಮೀತಾ ಕುಮಾರಿ ಮತ್ತು ನಾಲ್ಕು ವರ್ಷದ ಮಗ ದೀಪಕ್ ಮೇಹರಾ, ಪತ್ನಿಯ ಜತೆಯೇ ಹೋಗಿರಬಹುದು. ಇಬ್ಬರನ್ನು ಹುಡುಕಿಕೊಡುವಂತೆ ಎಂದು ದೂರು ನೀಡಿದ್ದಾರೆ. ಅವರಿಬ್ಬರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.