ನ್ಯೂಸ್

ಸೇತುವೆ ಹಾರಿ ಸೂಸೈಡ್​ ಮಾಡಿಕೊಳ್ಳಲು ಮುಂದಾದ ಮಹಿಳೆ; ಕಾರು ಚಾಲಕನ ಸಮಯಪ್ರಜ್ಞೆಯಿಂದ ಉಳಿದ ಪ್ರಾಣ

ಮುಂಬೈ: ಅಟಲ್​​​ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ಕ್ಯಾಬ್​ ಚಾಲಕ ಮತ್ತು ಪೊಲೀಸರು ರಕ್ಷಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆಯ ಪ್ರಾಣ ಉಳಿದಿದೆ. ಆ ಮಹಿಳೆಯನ್ನು ರೀಮಾ ಮುಖೇಶ್​ ಪಟೇಲ್​ ಎಂದು ಗುರುತಿಸಲಾಗದ್ದು, ಮುಂಬೈ ಈಶಾನ್ಯ ಭಾಗದಲ್ಲಿರುವ ಮುಲುಂಡ್​ ನಿವಾಸಿಯಾಗಿದ್ದಾರೆ.

ಮಹಿಳೆಯು ದೇವರ ಫೋಟೊವನ್ನು ಸಮದ್ರದಲ್ಲಿ ಮುಳುಗಿಸುವುದಾಗಿ ಹೇಳಿ ಸೇತುವೆ ಮೇಲೆ ಕ್ಯಾಬ್​ ನಿಲ್ಲಿಸಲು ಚಾಲಕ ಸಂಜಯ್​ ಯಾದವ್​ಗೆ ಹೇಳಿದ್ದಾರೆ. ಬಳಿಕ ಮಹಿಳೆ ಕಾರನಿಂದ ಇಳಿದು ರೇಲಿಂಗ್​ ದಾಟಿದ್ದಾರೆ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆ ಅಟಲ್​ ಸೇತುವೆಯ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಬಳಿಕ ಅಲ್ಲಿಂದ ಜಿಗಿದಿದ್ದಾರೆ. ಅಲ್ಲೇ ಇದ್ದ ಕಾರಿನ ಚಾಲಕ ಮಹಿಳೆ ಜಿಗಿದಾಗ ಆಕೆಯ ಕೂದಲನ್ನು ಹಿಡಿದು ಮೇಲೆತ್ತಲು ಪ್ರಯತ್ನಿಸಿದ್ದಾನೆ. ಕೂದಲು ಹಿಡಿದು ಪಾರು ಮಾಡಲು ಪ್ರಯತ್ನಿಸುತ್ತಿದ್ದ ಕಾರು ಚಾಲಕನ ಜತೆಗೆ ಸ್ಥಳಕ್ಕೆ ಬಂದ ಗಸ್ತು ತಿರುಗುತ್ತಿದ್ದ ಪೊಲೀಸರು ಮಹಿಳೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿರುವುದನ್ನು ಕಾಣಬಹುದು.

ಕ್ಯಾಬ್​​ ಚಾಲಕ ಸಂಜಯ್​ ಯಾದವ್​ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಳಿಕ ಮಹಿಳೆಯನ್ನು ಪೊಲೀಸ್​​​ ಠಾಣೆಗೆ ಕರೆದೊಯ್ದು ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು. ಮಹಿಳೆ ಮಾನಸಿಕವಾಗಿ ನೊಂದಿದ್ದಾರೆ ಎಂದು ನಹವಾ ಶೇವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಂಜುಮ್ ಬಾಗವಾನ್ ಹೇಳಿದ್ದಾರೆ. ಅಟಲ್ ಸೇತುವಿನ ಮೇಲೆ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜುಲೈನಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಇಂಜಿನಿಯರ್ ಅಟಲ್ ಸೇತುವಿನಿಂದ ಜಿಗಿದಿದ್ದರು. ಅದಕ್ಕೂ ಮೊದಲು ಮಾರ್ಚ್‌ನಲ್ಲಿ ಮಹಿಳೆಯೊಬ್ಬರು ಸೇತುವೆಯಿಂದ ಜಿಗಿದ ಸುದ್ದಿಯಾಗಿತ್ತು. (ಏಜೆನ್ಸೀಸ್​​)