ಸಾಂದರ್ಭಿಕ ಚಿತ್ರ 
ನ್ಯೂಸ್

ಗಂಡನ ಮೃತದೇಹವನ್ನು ಆಸ್ಪತ್ರೆಯ ಸ್ಟ್ರೆಚರ್​ನಲ್ಲಿಯೇ ಇಟ್ಟಕೊಂಡು ಸಹಾಯಕ್ಕಾಗಿ ಅಲೆದಾಡಿದ ಹೆಂಡತಿ..

ಲಖಿಂಪುರ: ಹೆಂಡತಿಯೊಬ್ಬಳು ಗಂಡನ ಮೃತದೇಹವನ್ನು ಮೂರು ಗಂಟೆಗಳ ಕಾಲ ಇಟ್ಟುಕೊಂಡು ಅಲೆದಾಡಿರುವ ಘಟನೆ ಉತ್ತರಪ್ರದೇಶದ ಲಖಿಂಪುರದಲ್ಲಿ ನಡೆದಿದೆ.

ಸಹಿಜನ ಗ್ರಾಮದ ನಿವಾಸಿ ಲಲಿತಾ ಎಂಬುವರು ಅಸ್ವಸ್ಥಗೊಂಡ ಪತಿ ಸತೀಶ್ ಗೌತಮ್(40) ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಪತ್ನಿಯು ತಾನು ಬಡವಳಾಗಿದ್ದು ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಸಹಾಯ ಯಾಚಿಸಿದ್ದಾರೆ.

ಇದನ್ನೂ ಓದಿ: ಈ ಸ್ಥಳದಲ್ಲಿ ಓಡಾಡಲಿದೆ ದೇಶದ ಮೊದಲ ಹೈಡ್ರೋಜನ್ ಇಂಧನದ ಬಸ್..

ಆದರೆ ಮೃತ ದೇಹವನ್ನು ಕೊಂಡೊಯ್ಯಲು ಸರಕಾರದ ವ್ಯವಸ್ಥೆ ಇಲ್ಲದ ಕಾರಣ ಸುಮಾರು ಮೂರು ಗಂಟೆಗಳ ಸ್ಟ್ರೇಚರ್​ನಲ್ಲಿಯೇ ಹಿಡಿದು ಅಲೆದಾಡಿದ್ದಾಳೆ. ಕೊನೆಗೆ ಈ ಬಗ್ಗೆ ಮಾಹಿತಿ ಪಡೆದ ಸಾಮಾಜಿಕ ಕಾರ್ಯಕರ್ತ ಶಿವಂ ರಾಥೋಡ್ ಸ್ಥಳಕ್ಕೆ ಆಗಮಿಸಿ ಮಹಿಳೆಯ ಪತಿಯ ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ಯುವ ಮೂಲಕ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ರಾಜ್ಯ ಸಚಿವ ಲೋಕೇಂದ್ರ ಪ್ರತಾಪ್ ಸಿಂಗ್ ಅಧೀಕ್ಷಕರಿಂದ ಈ ಕುರಿತು ವರದಿಗೆ ಒತ್ತಾಯಿಸಿದ್ದಾರೆ. ಆದರೆ, ಮಹಿಳೆಗೆ ಸರ್ಕಾರದ ಸಹಾಯ ಏಕೆ ಸಿಕ್ಕಿಲ್ಲ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಎತ್ತಿದ್ದಾರೆ. ಮೃತದೇಹವನ್ನು ಸಾಗಿಸಲು ಮತ್ತು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲು ಮಹಿಳೆಗೆ ಸರ್ಕಾರದ ಸಹಾಯ ಸಿಗಬೇಕಿತ್ತು. ಈ ಬಗ್ಗೆ ತನಿಖೆ ನಡೆಸಬೇಕೆಂದು ಜನರು ಒತ್ತಾಯಿಸಿದ್ದಾರೆ.(ಏಜೆನ್ಸೀಸ್)