More

    ‘ಅವರು’ ನಿಮ್ಮ ಹೆಂಡತಿಯ ಹತ್ಯೆಗೈದು ಅಂತ್ಯಕ್ರಿಯೆ ಮಾಡಿದ್ದಾರೆ: ಸ್ನೇಹಿತನ ಕರೆಗೆ ಪತಿ ತತ್ತರ

    ಗುರುಗ್ರಾಮ್: ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ, ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕಾಗಿ 22 ವರ್ಷದ ಯುವತಿಯನ್ನು ಆಕೆಯ ಪೋಷಕರು ಮತ್ತು ಸಹೋದರ ಕತ್ತು ಹಿಸುಕಿ ಕೊಂದಿರುವ ಘಟನೆ ದೆಹಲಿ ಬಳಿಯ ಗುರುಗ್ರಾಮ್‌ನಲ್ಲಿ ನಡೆದಿದೆ.

    ಮೃತ ಯುವತಿಯನ್ನು ಅಂಜಲಿ ಎಂದು ಗುರುತಿಸಲಾಗಿದ್ದು, ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಂಜಲಿಯು ಪಬ್‌ನಲ್ಲಿ ಕೆಲಸ ಮಾಡುತ್ತಿರುವ ಸಂದೀಪ್ ಎಂಬಾತನ್ ಜತೆಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದಳು. ಕುಟುಂಬದ ವಿರೋಧದಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಅರಿತು ಗ್ರಾಮವನ್ನು ತೊರೆದು ಗುರುಗ್ರಾಮದ ಫ್ಲ್ಯಾಟ್​ವೊಂದರಲ್ಲಿ ವಾಸಿಸುತ್ತಿದ್ದರು.

    ಇದನ್ನೂ ಓದಿ: ಕ್ಯಾಮರಾ ಮುಂದೆಯೇ ತನ್ನ ಬೆರಳು ಕತ್ತರಿಸಿಕೊಂಡ ವ್ಯಕ್ತಿ: ಕಾರಣ ಹೀಗಿದೆ..

    ಅಂಜಲಿಯ ನಿರ್ಧಾರದಿಂದ ಮನೆಯವರು ಬೇಸರಗೊಂಡಿದ್ದರು. ಹೀಗಾಗಿ ಆಕೆಯ ಮನೆಯವರು ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಅಂಜಲಿಯ ಸಹೋದರನಿಗೂ ಪ್ರೇಮ ವಿವಾಹವಾಗಿತ್ತು. ನಂತರ ಆತ ಅಂಜಲಿ ಮತ್ತು ಸಂದೀಪ್​ನ ವಿಶ್ವಾಸ ಗಳಿಸಿ ಆಗಾಗ್ಗೆ ಇಬ್ಬರ ಬಳಿ ಹೋಗಿ ಬರುತ್ತಿದ್ದ. ಗುರುವಾರದಂದು ಆಕೆಯ ಸಹೋದರ ಕುನಾಲ್, ತಂದೆ ಕುಲದೀಪ್ ಮತ್ತು ತಾಯಿ ರಿಂಕಿ ಫ್ಲ್ಯಾಟ್​​​ಗೆ ತಲುಪಿದ್ದು, ಅಂಜಲಿ ಮೇಲೆ ಹಲ್ಲೆ ನಡೆಸಿ ಮೂವರು ಸೇರಿಕೊಂಡು ಕತ್ತು ಹಿಸುಕಿ ಹತ್ಯೆಗೈದಿದ್ದಾರೆ.

    ಬಳಿಕ ಮೂವರು ಅಂಜಲಿಯ ಶವವನ್ನು ಕಾರಿನಲ್ಲಿ ಹಾಕಿಕೊಂಡು, ಗುರುಗ್ರಾಮದಿಂದ ತಮ್ಮ ಹಳ್ಳಿ ಸುರೇಟಿಗೆ ತೆರಳಿ ನಿರ್ಜನ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಗ್ರಾಮದಲ್ಲಿ ಯಾರೂ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಆದರೆ ನಿಧಾನವಾಗಿ ಈ ಕುರಿತು ಸುದ್ದಿ ಹರಡಿದ್ದು, ಗ್ರಾಮಸ್ಥರೊಬ್ಬರು ಅಂಜಲಿಯ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ ಸಂದೀಪನಿಗೆ ಆಘಾತವಾಗಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಪೊಲೀಸರು ಅಂಜಲಿಯ ಕುಟುಂಬವನ್ನು ವಶಕ್ಕೆ ಪಡೆದಿದ್ದು ವಿಚಾರಣೆ ವೇಳೆ ಮೂವರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts