ಸಾಂದರ್ಭಿಕ ಚಿತ್ರ 
ನ್ಯೂಸ್

ಶ್ವಾನದ ಪಂಜರದಲ್ಲಿ ಮಗನನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಹೆತ್ತ ತಾಯಿ...

ಆಸ್ಟ್ರಿಯಾ: ತಾಯಿಯೊಬ್ಬಳು ತನ್ನ ಸ್ವಂತ ಮಗನನ್ನು ನಾಯಿಯ ಪಂಜರದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿರುವ ದಾರುಣ ಘಟನೆ ಆಸ್ಟ್ರಿಯಾದಲ್ಲಿ ನಡೆದಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಮ್​​ ಸಾಕು, ಆಫೀಸಿಗೆ ಬನ್ನಿ ಅಂದಿದ್ದಕ್ಕೆ ರಾಜೀನಾಮೆ ನೀಡಲು ಮುಂದಾದ ಮಹಿಳಾ ಟೆಕ್ಕಿಗಳು!

ಆರೋಪಿ ಮಹಿಳೆ ಹಾಗೂ ಮಗುವಿನ ಗುರುತನ್ನು ಬಿಡುಗಡೆ ಮಾಡದಿರುವ ಆಸ್ಟ್ರಿಯಾ ಪ್ರಾಂತ್ಯದ ಪೊಲೀಸ್ ವಕ್ತಾರ ಜೊಹಾನ್ ಬಾಮ್‌ಶ್ಲೇಗರ್ ಈ ಕುರಿತು ಮಾತನಾಡಿದ್ದು, 32 ವರ್ಷದ ಮಹಿಳೆಯನ್ನು ಕೊಲೆ ಯತ್ನದ ಶಂಕೆಯ ಮೇಲೆ ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ತಾಯಿಯು ಮಗನನ್ನು ನಾಯಿಯ ಪಂಜರದಲ್ಲಿ ಬಂಧಿಸಿ, ಆತನ ಮೇಲೆ ತಣ್ಣನೆಯ ನೀರನ್ನು ಸುರಿದಿದ್ದಾಳೆ. ಹೀಗಾಗಿ 12 ವರ್ಷದ ಬಾಲಕನ ದೇಹದ ಉಷ್ಣತೆಯು 26.8 ಡಿಗ್ರಿ ಸೆಲ್ಸಿಯಸ್‌ಗೆ (80.2 ಫ್ಯಾರನ್‌ಹೀಟ್) ಕುಸಿದಿದ್ದರಿಂದ ಬಾಲಕ ಕೋಮಾಕ್ಕೆ ಜಾರಿದ್ದಾನೆ.

ನಂತರ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಬಾಲಕನ ತಾಯಿಯನ್ನು ಬಂಧಿಸಲಾಗಿದೆ. ಮಗನಿಗೆ ಗುದ್ದುವುದು, ಗಾಯಗಳಿಗೆ ಚಿಕಿತ್ಸೆ ನೀಡದಿರುವುದು, ನಾಯಿಪೆಟ್ಟಿಗೆಯಲ್ಲಿ ಗಂಟೆಗಟ್ಟಲೆ ಮುಚ್ಚಿ, ಹಸಿವಿನಿಂದ ಬಳಲುವಂತೆ ಮಾಡುವುದು ಮತ್ತು ಪದೇ ಪದೇ ತಣ್ಣೀರು ಸುರಿದು ಚಿತ್ರಹಿಂಸೆ ನೀಡಿದ್ದಾಳೆ ಎಂದು ಆಕೆಯ ವಿರುದ್ಧ ಆರೋಪಿಸಲಾಗಿದೆ.(ಏಜೆನ್ಸೀಸ್​)